ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಫೈಟ್ ದುಬೈನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಅಲ್ಲದೆ ಚಾಂಪಿಯನ್ಸ್ ಟ್ರೋಫಿಯ ಸೆಮೀಸ್‌ಗೆ ಒಂದು ಕಾಲು ಇಟ್ಟಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಹಾರ್ದಿಕ್ ಪಾಂಡ್ಯ ಉತ್ತಮ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಮೊದಲು ಬಿಗುವಿನ ದಾಳಿ ನಡೆಸಿದ ಪಾಂಡ್ಯ, ಪಾಕ್ ತಂಡದ ಭರವಸೆಯ ಬ್ಯಾಟರ್ ಬಾಬರ್ ಅಜಮ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.
ಈ ಪಂದ್ಯದಲ್ಲಿ ಹಾರ್ದಿಕ್ ಮೈದಾನದಲ್ಲಿ ಆರ್ಭಟ ನಡೆಸುತ್ತಿದ್ದರೆ ಇತ್ತ ಸಾಮಾಜಿಕ ತಾಣದಲ್ಲಿ ಬೇರೆಯದ್ದೇ ಚರ್ಚೆಗಳು ನಡೆದಿದ್ದವು. ಇವರು ಪಾಕ್ ವಿರುದ್ಧದ ಪಂದ್ಯದಲ್ಲಿ ಕಟ್ಟಿಕೊಂಡಿದ್ದ ಕೈ ಗಡಿಯಾರದ ಬೆಲೆ ಎಷ್ಟು ಎಂಬ ಚರ್ಚೆಗಳು ಆರಂಭವಾಗಿದ್ದವು. ಮೋಸ್ಟ್ ಕಾಸ್ಟ್‌ಲಿ ವಾಚ್ ಕಟ್ಟಿ ಅಂಗಳಕ್ಕೆ ಇಳಿದ ಹಾರ್ದಿಕ್ ಎಲ್ಲರ ಗಮನ ಸೆಳೆದರು. ಇದು ಲಿಮಿಟೇಡ್ ಎಡಿಷನ್ ವಾಚ್ ಆಗಿತ್ತು. ಈ ಚರ್ಚೆ ಮುಗಿಯುವ ಹೊತ್ತಿಗೆ ಮತ್ತೊಂದು ಚರ್ಚೆ ಆರಂಭವಾಯಿತು. ಆ ಸುಂದರಿ ಯಾರು ಎಂದು.

ಅಷ್ಟುಕ್ಕು ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾರತ ಮೂಲದ ಬ್ರಿಟಿಷ್ ಗಾಯಕಿ ಜಾಸ್ಮಿಯಾ ವಾಲಿಯಾ ಭಾರತ ಹಾಗೂ ಪಾಕ್ ನಡುವಣ ಪಂದ್ಯ ನೋಡಲು ಬಂದಿದ್ದರು. ಈ ವೇಳೆ ಇವರು ಹಾರ್ದಿಕ್ ಅವರಿಗೆ ಬೆಂಬಲಿಸಿದ್ದು ಕಂಡು ಬಂದಿದೆ. ಈ ಸುದ್ದಿ ಸಾಮಾಜಿಕ ತಾಟದಲ್ಲಿ ಚರ್ಚಾ ವಸ್ತುವಾಗಿದೆ.
ಜಾಸ್ಮಿನ್ ವಾಲಿಯಾ ಭಾರತೀಯ ಮೂಲದ ಬ್ರಿಟಿಷ್ ಗಾಯಕಿ ಮತ್ತು ಟಿವಿಯ ನಿರೂಪಕಿ. ಜ್ಯಾಕ್ ನೈಟ್ ಜೊತೆಗೂಡಿ ಸಂಗೀತ ಸಂಯೋಜಿಸಿದ "ಬೊಮ್ ಡಿಗ್ಗಿ" ಎಂಬ ಹಿಟ್ ಟ್ರ್ಯಾಕ್‌ನಿಂದ ಅವರು ಜನರಿಗೆ ತುಂಬ ಹತ್ತಿರವಾದರು. ಈ ಹಾಡು ಭಾರತದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿತು. ಜಾಸ್ಮಿಯಾ 2010ರಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದರು. ಅಲ್ಲದೆ ದಿ ಓನ್ಲಿ ವೇ ಈಸ್ ಎಸೆಕ್ಸ್ ಎಂಬ ಶೋ ಮೂಲಕವೇ ಇವರು ಹೆಸರು ಪಡೆದರು. ಅಲ್ಲದೆ ಹಲವು ರಿಯಾಲಿಟಿ ಶೋಗಳ ಮೂಲಕವು ಹೆಸರು ಮಾಡಿದ್ದಾರೆ.

ಪಾಂಡ್ಯ ಮತ್ತು ಜಾಸ್ಮಿನ್ ಡೇಟಿಂಗ್ ಬಗ್ಗೆ ಮಾತುಗಳು ಕೇಳಿ ಬರುತ್ತಿರುವುದು ಹೊಸದೇನಲ್ಲ. ಇವರಿಬ್ಬರು ಗ್ರೀಸ್‌ನಲ್ಲಿ ಡೇಟ್‌ಗೆ ಹೋಗಿದ್ದರು ಎಂಬ ಮಾತುಗಳು ಇವೆ. ಇನ್ನು ಇಬ್ಬರು ಸ್ಟಾರ್‌ಗಳು ಸಾಮಾಜಿಕ ತಾಣದಲ್ಲಿ ಒಬ್ಬರನ್ನೊಬ್ಬರು ಹಿಂಬಾಲಿಸುತ್ತಿದ್ದಾರೆ. ಅಲ್ಲದೆ ಮೆಸೇಜ್‌ಗಳನ್ನು ಮಾಡುತ್ತಿದ್ದಾರೆ. ಈ ಮೆಸೇಜ್ ಆರಂಭವಾದ ಮೇಲೆ ಇವರಿಬ್ಬರ ನಡುವಿ ಏನೋ ನಡೆದಿದೆ ಎಂಬ ಸುದ್ದಿ ಆರಂಭವಾಯಿತು.
ನಟಿ ಹಾಗೂ ರೂಪದರ್ಶಿ ಸಬಿರ್ಯಾದ ನತಾಶಾ ಸ್ಟಾಂಕೋವಿಕಾ ಅವರೊಂದಿಗೆ ಕೆಲವು ವರ್ಷಗಳ ಕಾಲ ಜೀವನ ನಡೆಸಿದ್ದ ಹಾರ್ದಿಕ್ ಪಾಂಡ್ಯ ಇತ್ತೀಚಿಗೆ ಬೇರೆ ಆಗಿದ್ದರು. ಅಲ್ಲದೆ ವಿಚ್ಛೇಧನ ಪಡೆದುಕೊಂಡಿದ್ದಾರೆ. ತಮ್ಮ ಬಾಳಲ್ಲಿ ನತಾಶಾ ಹೋಗುತ್ತಿದ್ದಂತೆ ಹಾರ್ದಿಕ್ ಜಾಸ್ಮಿಯಾ ಅವರಿಗೆ ಮನಸೋತಿದ್ದಾರೆ ಎಂಬ ವರದಿಗಳು ಹರಿದಾಡುತ್ತಿದ್ದವು.