2025 World Boxing Championships: ಬಾಕ್ಸರ್ ಜಾಸ್ಮಿನ್ ಇತಿಹಾಸ
ಭಾರತದ ಯುವ ಬಾಕ್ಸರ್ ಜಾಸ್ಮಿನ್ ಲಂಬೋರಿಯಾ 2025 ರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎಲ್ಲರ ಚಿತ್ತ ತಮ್ಮತ್ತ ಹರಿಯುವಂತೆ ಮಾಡಿದ್ದಾರೆ. ಲಿವರ್‌ಪೂಲ್‌ದಲ್ಲಿ ನಡೆದ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಜಾಸ್ಮಿನ್ ಇತಿಹಾಸ ಸೃಷ್ಟಿದ್ದಾರೆ. ಇವರು ಫೈನಲ್ ಪಂದ್ಯದಲ್ಲಿ ಪೋಲೆಂಡ್‌ನ ಜೂಲಿಯಾ ಸ್ಜೆರೆಮೆಟಾ ಅವರನ್ನು ಸೋಲಿಸುವ ದಾಖಲೆ ನಿರ್ಮಿಸಿದ್ದರು. ಫೈನಲ್ ಪಂದ್ಯದಲ್ಲಿ ಜಾಸ್ಮಿನ್, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದ ಜೂಲಿಯಾ ಸ್ಜೆರೆಮೆಟಾ ಅವರನ್ನು ಮಣಿಸಿದರು.
ಆರಂಭದಲ್ಲಿ ಭಾರತೀಯ ಬಾಕ್ಸರ್ ಕೊಂಚ ಹಿನ್ನಡೆ ಅನುಭವಿಸಿದ್ರೂ, ಬಳಿಕ ಅಮೋಘ ಪ್ರದರ್ಶನ ನೀಡಿ ಪುನರಾಗಮನ ಮಾಡಿದರು. ಇವರು ಪೋಲೆಂಡ್‌ನ ಬಾಕ್ಸರ್ ವಿರುದ್ಧ 4-1 ರಿಂದ ಮುನ್ನಡೆ ಸಾಧಿಸಿ ಬಂಗಾರದ ಪದಕಕ್ಕೆ ಕೊರಳು ಒಡ್ಡಿದರು. ಈ ಬಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪರ ಯಾವೊಬ್ಬ ಪುರುಷ ಬಾಕ್ಸರ್‌ಗಳು ಒಂದೇ ಒಂದು ಪದಕವನ್ನು ಸಹ ಗೆದ್ದಿಲ್ಲ. 12 ವರ್ಷಗಳ ಬಳಿಕ ಟೀಮ ಇಂಡಿಯಾದ ಬಾಕ್ಸರ್‌ಗಳು ಚಾಂಪಿಯನ್ ಶಿಪ್‌ನಿಂದ ಖಾಲಿ ಕೈಯಿಂದ ವಾಪಸ್ ಬರ್ತಾ ಇದ್ದಾರೆ. ಜಾದುಮಣಿ ಸಿಂಗ್ ಮಹತ್ವದ ಪಂದ್ಯದಲ್ಲಿ ಸೋಲು ಕಾಣುತ್ತಿದ್ದಂತೆ ಭಾರತದ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು.

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಜಾಸ್ಮಿನ್ ಲಂಬೋರಿಯಾ ಕ್ರೀಡಾ ಹಿನ್ನೆಲೆಯಲ್ಲಿ ಬಂದಿರುವ ಕುಟುಂಬದವರು. ಇವರು ಆಗಸ್ಟ್ 30, 2001 ರಂದು ಹರಿಯಾಣದ ಭಿವಾನಿಯಲ್ಲಿ ಜನಿಸಿದ್ದು, ವೃತ್ತಿಜೀವನವನ್ನು ಬಾಕ್ಸಿಂಗ್‌ನೊಂದಿಗೆ ಆರಂಭಿಸಿದರು. ಇವರ ಕುಟುಂಬದಲ್ಲಿ ಬಾಕ್ಸರ್‌ಗಳ ದಂಡೇ ಇದೆ. ಇವರ ಚಿಕ್ಕಪ್ಪ ಸಂದೀಪ್ ಸಿಂಗ್ ಬಾಕ್ಸಿಂಗ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್. ಅಲ್ಲದೆ ಇವರು ತಮ್ಮ ಚಿಕ್ಕಪ್ಪ ಹಾಗೂ ಪರ್ವಿಂದರ್ ಸಿಂಗ್ ಬಳಿ ತರಬೇತಿ ಪಡೆದಿದ್ದಾರೆ.
ಭರ್ಜರಿ ಪ್ರದರ್ಶನ
ಹರಿಯಾಣದ ಜಾಸ್ಮಿನ್ 2021ರಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಇವರ ಅಮೋಘ ಪ್ರದರ್ಶನದ ಬಳಿಕ ಇವರನ್ನು ಭಾರತೀಯ ಸೇನೆಗೆ ಸೇರಿಸಲಾಯಿತು. ಜಾಸ್ಮಿನ್ ಅವರ ಭರ್ಜರಿ ಪ್ರದರ್ಶನದ ಬಲದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಪ್ಯಾರಿಸ್ ಓಲಂಪಿಕ್ಸ್ ನಲ್ಲಿ ಜೈಸ್ಮಿನ್ ಲೆಂಬೋರಿಯಾ ಪ್ರದರ್ಶನ ನಿರಾಶಾಜನಕ ಆಗಿತ್ತು. ಇವರು ಕಳೆದ ಒಲಿಂಪಿಕ್ಸ್‌ನಲ್ಲಿ ಬೇಗನೆ ನಿರ್ಗಮಿಸಿದ್ದರು.
ಜಾಸ್ಮಿನ್ ಲಂಬೋರಿಯಾ ಹೊರತುಪಡಿಸಿ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 80 ಕೆಜಿ ವಿಭಾಗದಲ್ಲಿ ಭಾಗವಹಿಸಿದ್ದ ಭಾರತೀಯ ಬಾಕ್ಸರ್ ಪೂಜಾ ರಾಣಿ ಸೆಮಿಫೈನಲ್ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು, ಇದರಿಂದಾಗಿ ಅವರು ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು. ಮತ್ತೊಂದೆಡೆ, ನೂಪುರ್ 80 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು.
ಮೀನಾಕ್ಷಿ ಹೂಡಗೆ ಬಂಗಾರ
ಸೆಪ್ಟೆಂಬರ್ 14 ರ ಭಾನುವಾರದಂದು ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಬಾಕ್ಸಿಂಗ್ ತಾರೆ ಮೀನಾಕ್ಷಿ ಹೂಡಾ ಇತಿಹಾಸ ನಿರ್ಮಿಸಿದ್ದಾರೆ. ಇವರು ಫೈನಲ್‌ನಲ್ಲಿ 4-1ರ ಅಂತರದಿಂದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ನಾಜಿಮ್ ಕೈಜೈಬೆ ಅವರನ್ನು ಸೋಲಿಸುವ ಮೂಲಕ ಬಂಗಾರದ ಸಾಧನೆ ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications