Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐರ್ಲೆಂಡ್‌ ವಿರುದ್ಧದ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ

Jason Holder rested from first two ODIs against Ireland

ಕಿಂಗ್ಸ್‌ಟೌನ್, ಜನವರಿ 2: ಐರ್ಲೆಂಡ್‌ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಗಾಗಿ ವೆಸ್ಟ್ ತಂಡ ಪ್ರಕಟವಾಗಿದೆ. ವಿಂಡೀಸ್ ಆಲ್ ರೌಂಡರ್ ಜೇಸನ್ ಹೋಲ್ಡರ್ ಆರಂಭಿಕ ಎರಡು ಪಂದ್ಯಗಳಿಂದ ವಿಶ್ರಾಂತಿ ಪಡೆದಿದ್ದಾರೆ. ಈ ಸರಣಿ ಜನವರಿ 7ರಿಂದ ಬಾರ್ಬಡೋಸ್‌ನಲ್ಲಿ ಆರಂಭಗೊಳ್ಳಲಿದೆ.

ಇತ್ತೀಚೆಗೆ ನಡೆದ ಭಾರತ ವಿರುದ್ಧದ ಏಕದಿನ ಸರಣಿಯನ್ನು 2-1ರಿಂದ ಸೋತಿರುವ ವೆಸ್ಟ್ ಇಂಡೀಸ್ ತಂಡದಿಂದ ಹೊರಗುಳಿದ ಒಬ್ಬರೇ ಆಟಗಾರ ಜೇಸನ್ ಹೋಲ್ಡರ್. ಐರ್ಲೆಂಡ್‌ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಆರಂಭಿಕ 2 ಪಂದ್ಯಗಳು ಬಾರ್ಬಡೋಸ್‌ನಲ್ಲಿ, ಕಡೇಯ ಪಂದ್ಯ ಗ್ರೆನೆಡಾದ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

'ಕಳೆದ ವರ್ಷದಿಂದ ಇರುವ ಕೆಲಸದ ಹೊರೆಯನ್ನು ಇಳಿಸುವ ಸಲುವಾಗಿ ಜೇಸನ್ ಹೋಲ್ಡರ್ ಅವರೇ ಈ ನಿರ್ಧಾರವನ್ನು ಕೈಗೊಂಡಿದ್ದಾರೆ,' ಎಂದು ವೆಸ್ಟ್ ಇಂಡೀಸ್ ಆಯ್ಕೆದಾರ ರೋಜರ್ ಹಾರ್ಪರ್ ತಿಳಿಸಿದ್ದಾರೆ. ಭಾರತ ಪ್ರವಾಸ ಸರಣಿಯಲ್ಲಿ ನಾಯಕತ್ವ ವಹಿಸಿದ್ದ ಕೀರನ್ ಪೊಲಾರ್ಡ್ ಈ ಬಾರಿಯೂ ತಂಡ ಮುನ್ನಡೆಸುತ್ತಿದ್ದಾರೆ.

ವೆಸ್ಟ್ ಇಂಡೀಸ್ ತಂಡ: ಕೀರನ್ ಪೊಲಾರ್ಡ್ (ಸಿ), ಸುನಿಲ್ ಆ್ಯಂಬ್ರಿಸ್, ರೋಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಶಿಮ್ರಾನ್ ಹೆಟ್ಮಾಯೆರ್, ಶಾಯ್ ಹೋಪ್, ಅಲ್ಝಾರಿ ಜೋಸೆಫ್, ಬ್ರಾಂಡನ್ ಕಿಂಗ್, ಎವಿನ್ ಲೂಯಿಸ್, ಕೀಮೋ ಪಾಲ್, ಖಾರಿ ಪಿಯರೆ, ನಿಕೋಲಸ್ ಪೂರನ್, ರೊಮಾರಿಯೋ ಶೆಫರ್ಡ್, ಹೇಡನ್ ವಾಲ್ಷ್ ಜೂನಿಯರ್.

Story first published: Thursday, January 2, 2020, 10:46 [IST]
Other articles published on Jan 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+