ಜೇಸನ್ ಶತಕ, ಪಾಕಿಸ್ತಾನ ವಿರುದ್ಧದ ಏಕದಿನ ಸರಣಿ ಇಂಗ್ಲೆಂಡ್ ಮಡಿಲಿಗೆ

ನಾಟಿಂಗ್ಹ್ಯಾಮ್, ಮೇ 18: ಆರಂಭಿಕ ಬ್ಯಾಟ್ಸ್ಮನ್ ಜೇಸನ್ ರಾಯ್ ಅವರ ಸೊಗಸಾದ ಅರ್ಧಶತಕದ ನೆರವಿನಿಂದ ನಾಟಿಂಗ್ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ಶುಕ್ರವಾರ (ಮೇ 17) ನಡೆದ ಪಾಕಿಸ್ತಾನ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 3 ವಿಕೆಟ್ ಗೆಲುವನ್ನಾಚರಿಸಿದೆ. ಇದರೊಂದಿಗೆ ಐದು ಪಂದ್ಯಗಳ ಏಕದಿನ ಸರಣಿ 3-0ಯಿಂದ ಇಂಗ್ಲೆಂಡ್ ವಶವಾಗಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪ್ರವಾಸಿ ಪಾಕಿಸ್ತಾನ, ದೊಡ್ಡ ರನ್ ಮೊತ್ತ ಸಂಪಾದಿಸುವಲ್ಲಿ ಯಶಸ್ವಿಯಾಯ್ತು. ಫಖರ್ ಝಮಾನ್ 57, ಬಾಬರ್ ಅಝಾಮ್ 115 ರನ್ (112 ಎಸೆತ), ಮೊಹಮ್ಮದ್ ಹಫೀಜ್ 59, ಶೋಯೆಬ್ ಮಲಿಕ್ 41 ರನ್ ಕೊಡುಗೆಯೊಂದಿಗೆ ಪಾಕ್, 50 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 340 ರನ್ ಬಾರಿಸಿತು.
ಇನ್ನಿಂಗ್ಸ್ ಆರಂಭಿಕದ ಇಂಗ್ಲೆಂಡ್ ಖಾತೆಗೆ ರಾಯ್ 114 (89 ಎಸೆತ), ಜೇಮ್ಸ್ ವಿನ್ಸ್ 43, ಜೋ ರೂಟ್ 36, ಬೆನ್ ಸ್ಟೋಕ್ಸ್ ಅಜೇಯ 71, ಟಾಮ್ ಕರನ್ 31 ರನ್ ಸೇರಿಸಿದರು. ಇಂಗ್ಲೆಂಡ್ 49.3 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 341 ರನ್ ಗೆರೆ ದಾಟಿತು. ಸರಣಿಯ ಆರಂಭಿಕ ಪಂದ್ಯ ಸಮಬಲಗೊಂಡಿತ್ತು. ಇನ್ನೊಂದು ಪಂದ್ಯ ನಡೆಯಲಿದೆ.
ಪಾಕ್ ಇನ್ನಿಂಗ್ಸ್‌ನಲ್ಲಿ ಟಾಮ್ ಕರನ್ 4, ಮಾರ್ಕ್ ವುಡ್ 2, ಜೋಫ್ರಾ ಆರ್ಚರ್ 1 ವಿಕೆಟ್ ಪಡೆದರೆ, ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಇಮಾದ್ ವಾಸಿಮ್ ಮತ್ತು ಮೊಹಮ್ಮದ್ ಹಸ್‌ನೈನ್ ತಲಾ 2, ಜುನೈದ್ ಖಾನ್, ಹಸನ್ ಅಲಿ ಮತ್ತು ಶೋಯೆಬ್ ಮಲಿಕ್ ತಲಾ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications