ಟಿ20 ದಾಖಲೆ: ಬೂಮ್ರಾ, ಚಾಹಲ್ ಮಧ್ಯೆ ಯಾರಿಗೆ ಮೇಲುಗೈ

ಟಿ20 ಬೌಲಿಂಗ್ ವಿಭಾಗದಲ್ಲಿ ಪ್ರಸಕ್ತ ತಂಡದಲ್ಲಿರುವ ಇಬ್ಬರು ಆಟಗಾರರ ಮಧ್ಯೆ ಪೈಪೋಟಿ ಜೋರಾಗಿದೆ. ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಟಗಾರರಾದ ಬೂಮ್ರಾ ಹಾಗೂ ಚಾಹಲ್ ಟಿ20ಯಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ಹೊರಹೊಮ್ಮಲು ಪೈಪೋಟಿಗಿಳಿಯಲಿದ್ದಾರೆ.
ಸಧ್ಯ ಟೀಮ್ ಇಂಡಿಯಾದಲ್ಲಿ ಟಿ20 ಫಾರ್ಮೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಥಾನವನ್ನು ರವಿಚಂದ್ರನ್ ಅಶ್ವಿನ್ ಹಾಗೂ ಯುಜುವೇಂದ್ರ ಚಾಹಲ್ ಹಂಚಿಕೊಂಡಿದ್ದಾರೆ. ಇಬ್ಬರೂ ತಲಾ 52 ವಿಕೆಟ್ ಟೀಮ್ ಇಂಡಿಯಾ ಪರವಾಗಿ ಕಿತ್ತಿದ್ದಾರೆ. ಜಸ್ಪ್ರೀತ್ ಬೂಮ್ರಾ 51 ವಿಕೆಟ್ ಪಡೆದುಕೊಂಡು ಎರಡನೇ ಸ್ಥಾನದಲ್ಲಿದ್ದಾರೆ. ಅಶ್ವಿನ್, ಚಾಹಲ್ ದಾಖಲೆ ಮೀರಲು ಬೂಮ್ರಾಗೆ ಇನ್ನು ಎರಡು ವಿಕೆಟ್‌ಗಳ ಅವಶ್ಯಕತೆಯಿದೆ.
ಟೀಮ್ ಇಂಡಿಯಾದ ಟಿ20 ಬಳಗದಲ್ಲಿ ಅಶ್ವಿನ್ ಸದ್ಯ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆದರೆ ಚಾಹಲ್ ಈ ಪಂದ್ಯದಲ್ಲಿ ಕೂಡ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ. ಹೀಗಾಗಿ ವಿಕೆಟ್ ಕೀಳುವ ಮೂಲಕ ಬೂಮ್ರಾಗೆ ಮತ್ತಷ್ಟು ಪೈಪೋಟಿ ನೀಡಬಹುದು.
ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರಿತ್ ಬೂಮ್ರಾ ಗಾಯದ ಕಾರಣದಿಂದ ಚಿಕಿತ್ಸೆಗೆ ಒಳಗಾಗಿ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಹೊರಗುಳಿಯಬೇಕಾಯಿತು. ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿರುವ ಬೂಮ್ರಾ ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ.
ಇದೇ ವರ್ಷಾಂತ್ಯಕ್ಕೆ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಹೀಗಾಗಿ ಟೀಮ್ ಇಂಡಿಯಾ ಬೌಲರ್‌ಗಳ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದೆ. ತಂಡದೊಳಗೇ ಇರುವ ಈ ರೀತಿಯ ಧನಾತ್ಮಕ ಪೈಪೋಟಿ ತಂಡಕ್ಕೆ ಸಹಜವಾಗಿಯೇ ಫಲಿತಾಂಶಕ್ಕೆ ಪೂರಕವಾಗಿ ಸಹಕಾರಿಯಾಗಿದೆ ಎಂಬುದು ಕೂಡ ಗಮನಾರ್ಹ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications