For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ನಲ್ಲಿ ಬುಮ್ರಾ ಬೆಸ್ಟ್ ಬೌಲಿಂಗ್‌: 4 ಓವರ್‌ಗೆ 4 ವಿಕೆಟ್

Jasprit Bumrah Best Bowling Figure In T20 Cricket

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್ ಕ್ವಾಲಿಫೈಯರ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿ ಮತ್ತೊಮ್ಮೆ ಐಪಿಎಲ್ ಫೈನಲ್ ಪ್ರವೇಶಿಸಿದೆ. ನಾಯಕ ಹಾಗೂ ಉಪನಾಯಕನ ವಿಕೆಟ್ ಕಳೆದುಕೊಂಡರೂ ಮುಂಬೈ ಇಂಡಿಯನ್ಸ್ 200ರನ್ ಕಲೆಹಾಕಿತು.

201 ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮೊದಲ ಓವರ್‌ನಲ್ಲೇ ಟ್ರೆಂಟ್ ಬೌಲ್ಟ್‌ ಮಾರಕವಾದ್ರು. ಆರಂಭಿಕ ಪೃಥ್ವಿ ಶಾ, ಅಜಿಂಕ್ಯಾ ರಹಾನೆ ಶೂನ್ಯಕ್ಕೆ ಔಟಾದ್ರು. ನಂತರದ ಓವರ್‌ನಲ್ಲೇ ದಾಳಿಗಿಳಿದ ಬುಮ್ರಾ ಡೆಲ್ಲಿ ಬ್ಯಾಟಿಂಗ್ ಬೆನ್ನುಲುಬು ಮುರಿದುಬಿಟ್ರು.

ಇನ್‌ಫಾರ್ಮ್ ಬ್ಯಾಟ್ಸ್‌ಮನ್ ಶಿಖರ್‌ಧವನ್‌ರನ್ನು ತಮ್ಮ ಪ್ರಮುಖ ಅಸ್ತ್ರ ಯಾರ್ಕರ್ ಮೂಲಕ ಬೌಲ್ಡ್‌ ಮಾಡಿದ ಬುಮ್ರಾ, ಡೆಲ್ಲಿಗೆ ಶಾಕ್ ನೀಡಿದ್ರು. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್‌ ಶೂನ್ಯಕ್ಕೆ ಮೂರು ವಿಕೆಟ್‌ ಕಳೆದುಕೊಂಡಿತು.

ಡೆಲ್ಲಿ ತಂಡಕ್ಕೆ ಚೇತರಿಸಿಕೊಳ್ಳಲು ಅವಕಾಶ ನೀಡದ ಜಸ್ಪ್ರೀತ್ ಬುಮ್ರಾ ಸುಲಭವಾಗಿ ಶ್ರೇಯಸ್ ಅಯ್ಯರ್ ವಿಕೆಟ್ ಕಬಳಿಸಿದರು. ಉತ್ತಮವಾಗಿ ಆಡಿ ಡೇಂಜರಸ್ ಆಗಿ ಕಂಡುಬಂದಿದ್ದ ಮಾರ್ಕಸ್ ಸ್ಟೋಯ್ನೀಸ್ ವಿಕೆಟ್ ಪಡೆಯುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಬೆಸ್ಟ್ ಬೌಲಿಂಗ್ ಪ್ರದರ್ಶಿಸಿದ್ರು.

ತಮ್ಮ ನಾಲ್ಕು ಓವರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಕೇವಲ 14 ರನ್‌ ನೀಡಿದ 1 ಮೇಡನ್ ಓವರ್ ಜೊತೆಗೆ 4 ವಿಕೆಟ್ ಕಬಳಿಸಿದರು. ಇದಕ್ಕೂ ಮೊದಲು ಐಪಿಎಲ್‌ನಲ್ಲಿ ಬುಮ್ರಾ 20ರನ್‌ಗೆ ನಾಲ್ಕು ವಿಕೆಟ್ ಪಡೆದಿದ್ದರು.

ಇನ್ನು ಬುಮ್ರಾ ಐಪಿಎಲ್ 2020ಯಲ್ಲಿ ಪ್ರಸ್ತುತ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು ಪರ್ಪಲ್ ಕ್ಯಾಪ್ ಪಡೆದಿದ್ದಾರೆ. 14 ಪಂದ್ಯಗಳಲ್ಲಿ 27 ವಿಕೆಟ್ ಪಡೆಯುವ ಮೂಲಕ ಡೆಲ್ಲಿ ಬೌಲರ್ ಕಗಿಸೋ ರಬಾಡ (25) ರನ್ನು ಹಿಂದಿಕ್ಕಿದ್ದಾರೆ.

Story first published: Thursday, November 5, 2020, 23:38 [IST]
Other articles published on Nov 5, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+