Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನ್ಯೂಜಿಲೆಂಡ್ ಸರಣಿ ಮಾತ್ರವಲ್ಲ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೂ ಬುಮ್ರಾ ಆಯ್ಕೆ ಅನುಮಾನ

Jasprit Bumrah Doubtful For New Zealand Series And Border Gavaskar Test Series

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾಗಿ ತಂಡಕ್ಕೆ ಆಯ್ಕೆಯಾಗಿದ್ದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅಂತಿಮ ಕ್ಷಣದಲ್ಲಿ ಸರಣಿಯಿಂದ ಹೊರಗುಳಿಯಬೇಕಾಯಿತು. ಬುಮ್ರಾ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರ ಬೇಡವೆಂದುಕೊಂಡ ಬಿಸಿಸಿಐ ಅವರನ್ನು ಸರಣಿಯಿಂದ ಹೊರಗುಳಿಯಲು ಹೇಳಿದೆ.

ಸದ್ಯದ ಮಾಹಿತಿಗಳ ಪ್ರಕಾರ ಜಸ್ಪ್ರೀತ್ ಬುಮ್ರಾ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿ ಮಾತ್ರವಲ್ಲದೆ, ಫೆಬ್ರವರಿ 9 ರಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೂ ಕೂಡ ಆಯ್ಕೆಯಾಗುವುದು ಅನುಮಾನವಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಬುಮ್ರಾ ಅವರನ್ನು ಆಯ್ಕೆಗೆ ಪರಿಗಣಿಸುವುದಿಲ್ಲ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ ಎಂದು ಇನ್‌ಸೈಟಡ್ ಸ್ಪೋರ್ಟ್ಸ್‌ ವರದಿ ಮಾಡಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ನಂತರ ಭಾರತ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಮತ್ತು 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ಅಧಿಕೃತ ಮಾಹಿತಿಯ ಪ್ರಕಾರ, ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮಹತ್ವದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

ಫಿಟ್‌ನೆಸ್ ಮೇಲೆ ಮತ್ತೆ ಕೆಲಸ

ಫಿಟ್‌ನೆಸ್ ಮೇಲೆ ಮತ್ತೆ ಕೆಲಸ

ಬಾರ್ಡರ್-ಗವಾಸ್ಕರ್ ಟ್ರೋಫಿಯ ಎಲ್ಲಾ ನಾಲ್ಕು ಟೆಸ್ಟ್‌ಗಳಿಗೆ ಆಡುವ ಬಗ್ಗೆ ಜನವರಿ ತಿಂಗಳ ಕೊನೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

"ಬುಮ್ರಾರನ್ನು ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಪರಿಗಣಿಲಾಗುವುದಿಲ್ಲ. ಬುಮ್ರಾ ತಮ್ಮ ಪುನರ್ವಸತಿಯಲ್ಲಿ ಕೆಲಸ ಮಾಡುತ್ತಾರೆ. ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧರಾಗುವ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ, ಇನ್ನೂ ಕೆಲವು ವಾರಗಳಿದ್ದು, ನಂತರ ಈ ಬಗ್ಗೆ ನಿರ್ಧಾರ ಮಾಡಲಾಗುವುದು" ಎಂದು ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇನ್‌ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.

ಗಾಯದಿಂದ ಚೇತರಿಸಿಕೊಂಡ ನಂತರ ಟೆಸ್ಟ್ ಆಡುವುದು ಕಠಿಣವಾಗಿರುತ್ತದೆ. ಸತತ ಐದು ದಿನಗಳ ಟೆಸ್ಟ್ ಆಡುವುದು ಬೌಲಿಂಗ್ ಮಾಡುವುದು ಆಟಗಾರನ ಮೇಲೆ ಹಚ್ಚಿನ ಒತ್ತಡ ಹೇರುವುದರಿಂದ ಬುಮ್ರಾ ಟೆಸ್ಟ್‌ ಸರಣಿಯಲ್ಲಿ ಆಡುವುದು ಕೂಡ ಅನುಮಾನವಾಗಿದೆ.

ಈ ವರ್ಷ ಕೊಹ್ಲಿ ತಮ್ಮ ನೈಜ ಆಟ ಆಡಲಿದ್ದಾರೆ: ಭವಿಷ್ಯ ನುಡಿದ ಸಂಜಯ್ ಮಂಜ್ರೇಕರ್

ಇನ್ನೂ ಫಿಟ್ ಆಗಿಲ್ಲ

ಇನ್ನೂ ಫಿಟ್ ಆಗಿಲ್ಲ

ಎನ್‌ಸಿಎನಲ್ಲಿ ನಿರಂತರ ಅಭ್ಯಾಸ ಮಾಡಿದ ಬಳಿಕ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಲು ಕಷ್ಟಪಟ್ಟಿದ್ದಾರೆ ಎಂದು ಬಿಸಿಸಿಐ ಮತ್ತು ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ. ಬೆನ್ನಿನ ಸೆಳೆತದಿಂದ ಬಳಲಿದ ಕಾರಣ ಮುಂಜಾಗ್ರತಾ ಕ್ರಮವಾಗಿ ಅವರನ್ನು ಹೊರಗಿಡಲಾಗಿದೆ.

ಕ್ರಿಕೆಟ್‌ಗೆ ಮತ್ತೆ ವಾಪಸಾಗುವ ಮುನ್ನ ಎನ್‌ಸಿಎನಲ್ಲಿ ಮ್ಯಾಚ್-ಸಿಮ್ಯುಲೇಶನ್ ಕೆಲಸದ ಹೊರೆಗೆ ಒಳಗಾಗಬೇಕಿತ್ತು. ಬೆಂಗಳೂರಿನಲ್ಲಿ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಅವರು ಪಾಸಾಗಿದ್ದರು. ನಂತರ ಮುಂಬೈನಲ್ಲಿ ಬೌಲಿಂಗ್ ಅಭ್ಯಾಸ ಮಾಡುವಾಗ ಅವರು ಮತ್ತೆ ನೋವನುಭವಿಸಿದರು.

ಬುಮ್ರಾ ಬಗ್ಗೆ ಹೆಚ್ಚಿನ ಜಾಗ್ರತೆ

ಬುಮ್ರಾ ಬಗ್ಗೆ ಹೆಚ್ಚಿನ ಜಾಗ್ರತೆ

2022ರ ಏಷ್ಯಾಕಪ್‌ಗಾಗಿ ಹೊರಗುಳಿದಿದ್ದ ಬುಮ್ರಾ ಟಿ20 ವಿಶ್ವಕಪ್‌ಗೆ ಮುನ್ನ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದರು. ಸರಣಿಯಲ್ಲಿ ಒಂದು ಪಂದ್ಯವನ್ನು ಆಡಿದ ನಂತರ ಅವರಿಗೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ಮತ್ತೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದರು.

ಗಾಯದ ಪರೀಕ್ಷೆ ಮಾಡಿದ ನಂತರ ಅವರು ಟಿ20 ವಿಶ್ವಕಪ್‌ನಿಂದ ಕೂಡ ಹೊರಗುಳಿಯಬೇಕಾಯಿತು. ಅಂದಿನಿಂದಲೂ ವಿಶ್ರಾಂತಿಯಲ್ಲಿದ್ದ ಬುಮ್ರಾ ಮತ್ತೆ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದರು. 2023ರಲ್ಲಿ ಏಕದಿನ ವಿಶ್ವಕಪ್ ನಡೆಯುವುದರಿಂದ ಬಿಸಿಸಿಐ ಬುಮ್ರಾ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದು, ಯಾವುದೇ ಅವಸರದ ತೀರ್ಮಾನ ಮಾಡದಿರಲು ನಿರ್ಧರಿಸಿದೆ.

Story first published: Tuesday, January 10, 2023, 16:10 [IST]
Other articles published on Jan 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+