ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ವರ್ಷ ಕೊಹ್ಲಿ ತಮ್ಮ ನೈಜ ಆಟ ಆಡಲಿದ್ದಾರೆ: ಭವಿಷ್ಯ ನುಡಿದ ಸಂಜಯ್ ಮಂಜ್ರೇಕರ್

Sanjay Manjrekar confident on Virat Kohli said he might return to his original heights in World Cup year

ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಏಕದಿನ ವಿಶ್ವಕಪ್‌ನ ವರ್ಷ ಇದಾಗಿರುವ ಕಾರಣ ವಿರಾಟ್ ಕೊಹ್ಲಿ ಈ ವರ್ಷ ಅದ್ಭುತ ಎತ್ತರವನ್ನು ಏರಲಿದ್ದಾರೆ ಎಂದಿರುವ ಅವರು ಅವರಿಂದ ಈ ಸಂದರ್ಭದಲ್ಲಿ ಅದ್ಭುಯ ಇನ್ನಿಂಗ್ಸ್‌ಗಳನ್ನು ನಿರೀಕ್ಷಿಸಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ಇನ್ನು ಮುಂದುವರಿದು ಮಾತನಾಡಿದ ಮಂಜ್ರೇಕರ್ ವಿರಾಟ್ ಕೊಹ್ಲಿ ಏಕದಿನ ಮಾದರಿಯಲ್ಲಿ ಯಾವುದೇ ಒತ್ತಡವಿಲ್ಲದೆ ಆಡಲಿದ್ದಾರೆ. ಇದರಿಂದಾಗಿ ಅವರು ತಮ್ಮ ಅತ್ಯುನ್ನತ ಫಾರ್ಮ್ ಪ್ರದರ್ಶಿಸುವ ಎಲ್ಲಾ ಅವಕಾಶಗಳು ಕೂಡ ಇದೆ ಎಂದಿದ್ದಾರೆ. ಕಳೆದ ವರ್ಷ ಬಹುತೇಕ ಅವಧಿಯಲ್ಲಿ ಫಾರ್ಮ್ ಕಳೆದುಕೊಂಡಿದ್ದ ಕೊಹ್ಲಿ ಬಳಿಕ ಫಾರ್ಮ್ ಕಂಡುಕೊಂಡಿದ್ದು ಭರವಸೆ ಮೂಡಿಸಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿ: ಮೊದಲ ಟೆಸ್ಟ್‌ನಿಂದ ಹೊರಗುಳಿಯುವ ಬಗ್ಗೆ ಸುಳಿವು ನೀಡಿದ ಆಸಿಸ್ ಸ್ಟಾರ್ಬಾರ್ಡರ್-ಗವಾಸ್ಕರ್ ಟ್ರೋಫಿ: ಮೊದಲ ಟೆಸ್ಟ್‌ನಿಂದ ಹೊರಗುಳಿಯುವ ಬಗ್ಗೆ ಸುಳಿವು ನೀಡಿದ ಆಸಿಸ್ ಸ್ಟಾರ್

ಕಳೆದ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಸರಣಿಯಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ ಏಕದಿನ ಮಾದರಿಯಲ್ಲಿ ಸುದೀರ್ಘ ಕಾಲದ ಬಳಿಕ ಶತಕದ ಸಾಧನೆ ಮಾಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ವಿರಾಟ್ ಕೊಹ್ಲಿ 91 ಎಸೆತಗಳಲ್ಲಿ 113 ರನ್‌ಗಳನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ಇಶಾನ್ ಕಿಶನ್ ದ್ವಿಶತಕ ಸಿಡಿಸಿದ್ದರು. ಆದರೆ 2022ರಲ್ಲಿ ಕೊಹ್ಲಿ ಒಟ್ಟಾರೆಯಾಗಿ ಕಳಪೆ ಪ್ರದರ್ಶನ ನೀಡಿದ್ದರು ಎಂಬುದನ್ನು ಅವರ ಅಂಕಿ ಅಂಶಗಳೇ ಹೇಳುತ್ತವೆ. 2022ರಲ್ಲಿ 12 ಏಕದಿನ ಪಂದ್ಯಗಳನ್ನು ಆಡಿದ್ದ ಕೊಹ್ಲಿ 28ಕ್ಕಿಂತಲೂ ಕಡಿಮೆ ಸರಾಸರಿಯಲ್ಲಿ 302 ರನ್ ಬಾರಿಸಿದ್ದರು.

ಇನ್ನು ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿಯ ಫಾರ್ಮ್‌ನಿಂದ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಆದರೆ 2022ರ ಅಂತ್ಯದಲ್ಲಿ ಫಾರ್ಮ್‌ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಕೂಡ ಅವರ ಸ್ಟ್ರೈಕ್‌ರೇಟ್ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಏಷ್ಯಾಕಪ್‌ನಲ್ಲಿ ತಮ್ಮ ಶತಕ ಸಿಡಿಸಿ ಮಿಂಚಿದ್ದ ಕೊಹ್ಲಿ ಬಳಿಕ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿದ್ದರು.

ಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್ ಪಡೆಗೆ ಸೋಲುಣಿಸಿದ ಪಾಕಿಸ್ತಾನಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್ ಪಡೆಗೆ ಸೋಲುಣಿಸಿದ ಪಾಕಿಸ್ತಾನ

"ಇದು 2023, ಏಕದಿನ ವಿಶ್ವಕಪ್‌ನ ವರ್ಷ. ಏಕದಿನ ಮಾದರಿಯಲ್ಲಿ ಫಾರ್ಮ್ ಕಂಡುಕೊಳ್ಳಲು ಬಯಸುವ ಆಟಗಾರರಿಗೆ ಇದು ಉತ್ತಮವಾಗಿ ವರ್ಷವಾಗಲಿದೆ. ಏಕದಿನ ಮಾದರಿಯ ಕ್ರಿಕೆಟ್ ಈ ವರ್ಷ ವಿರಾಟ್ ಕೊಹ್ಲಿ ಅಂದುಕೊಂಡಂತೆಯೇ ನಡೆಯಲಿದೆ ಈಗಾಗಲೇ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎನಿಸಿಕೊಂಡಿರುವ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು. ಏಕದಿನ ಮಾದರಿ ಅವರಿಗೆ ಅತ್ಯಂತ ಹೆಚ್ಚು ಸೂಕ್ತವೆನಿಸುವ ಮಾದರಿ" ಎಂದಿದ್ದಾರೆ ಸಂಜಯ್ ಮಂಜ್ರೇಕರ್.

Story first published: Tuesday, January 10, 2023, 15:40 [IST]
Other articles published on Jan 10, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X