Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸೀಸ್: ಇತಿಹಾಸ ನಿರ್ಮಿಸಲು ಬೂಮ್ರಾಗೆ ಇನ್ನೆರಡೇ ವಿಕೆಟ್‌ ಬಾಕಿ!

Jasprit Bumrah is two wickets away from making history in T20I cricket

ಬೆಂಗಳೂರು, ಫೆಬ್ರವರಿ 26: ವಿಶಾಖಪಟ್ನಂನಲ್ಲಿ ನಡೆದ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ 16 ರನ್ನಿಗೆ 3 ವಿಕೆಟ್ ಕೆವುವವ ಮೂಲಕ ಟಿ20ಯಲ್ಲಿ 50 ವಿಕೆಟ್ ಪಡೆದ ಭಾರತದ 2ನೇ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಇದೇ ಯಾದಿಯಲ್ಲಿ ಇತಿಹಾಸ ನಿರ್ಮಿಸಲು ಬೂಮ್ರಾ ಇನ್ನೆರಡೇ ವಿಕೆಟ್ ಮುರಿಯಬೇಕಿದೆ.

ಜಸ್‌ಪ್ರೀತ್‌ ಈಗ 41 ಪಂದ್ಯಗಳಲ್ಲಿ 51 ವಿಕೆಟ್ ಸಾಧನೆ ಮಾಡಿದ್ದಾರೆ. ಟಿ20ಯಲ್ಲಿ ಅತ್ಯಧಿಕ ವಿಕೆಟ್ ಭಾರತದ ಆಟಗಾರನಾಗಿ ಸ್ಪಿನ್ನರ್ ಆರ್‌ ಅಶ್ವಿನ್ ಮೊದಲ ಸ್ಥಾನದಲ್ಲಿ ಇದ್ದಾರೆ. ಅಶ್ವಿನ್ 46 ಟಿ20 ಪಂದ್ಯಗಳಲ್ಲಿ 52 ವಿಕೆಟ್‌ ಪಡೆದಿದ್ದಾರೆ. ಹೀಗಾಗಿ ಬೂಮ್ರಾ ಇನ್ನೆರಡೇ ವಿಕೆಟ್ ಪಡೆದರೆ ಟಿ20 ಅತ್ಯಧಿಕ ವಿಕೆಟ್ ಪಡೆದ ಭಾರತದ ಆಟಗಾರನಾಗಿ ದಾಖಲೆ ಬರೆಯಲಿದ್ದಾರೆ.

ವಿಶಾಖಪಟ್ನಂ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ಯುಜುವೇಂದ್ರ ಚಾಹಲ್ 1 ವಿಕೆಟ್ ಪಡೆದಿದ್ದರು. ಒಂದುವೇಳೆ ಚಾಹಲ್ ಅಂದು 5 ವಿಕೆಟ್ ಪಡೆಯುತ್ತಿದ್ದರೆ, ಅಂತಾರಾಷ್ಟ್ರೀಯ ಟಿ20ಯಲ್ಲಿ 50 ವಿಕೆಟ್ ಪಡೆದ ಭಾರತದ ಆಟಗಾರನಾಗಿ ಗುರುತಿಸಿಕೊಳ್ಳುತ್ತಿದ್ದರು. ಚಾಹಲ್ ಈಗ 30 ಪಂದ್ಯಗಳಲ್ಲಿ 46 ವಿಕೆಟ್ ಸಾಧನೆ ಹೊಂದಿದ್ದಾರೆ.

ಮೊದಲ ಟಿ20 ಪಂದ್ಯದಲ್ಲಿ ಭಾರತ 3 ವಿಕೆಟ್ ಸೋಲನುಭವಿಸಿತ್ತು. ದ್ವಿತೀಯ ಪಂದ್ಯದಲ್ಲಿ ಗೆದ್ದು ಎರಡು ಪಂದ್ಯಗಳ ಟಿ20 ಸರಣಿಯನ್ನು ಸರಿದೂಗಿಸುವ ಯೋಜನೆಯಲ್ಲಿ ಭಾರತವಿದ. ದ್ವಿತೀಯ ಪಂದ್ಯವೂ ಸೋತರೆ ಟಿ20 ಸರಣಿ ಆಸ್ಟ್ರೇಲಿಯಾ ವಶವಾಗಲಿದೆ. ಎರಡನೇ ಮತ್ತು ಅಂತಿಮ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೆಬ್ರವರಿ 27ರಂದು 7pmಗೆ ಆರಂಭವಾಗಲಿದೆ.

Story first published: Tuesday, February 26, 2019, 11:30 [IST]
Other articles published on Feb 26, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+