Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬುಮ್ರಾಗೆ ನಾಯಕತ್ವ ಪಟ್ಟ: ಇಲ್ಲಿದೆ ಮುಂಬೈ ತಂಡದ ಸಂಪೂರ್ಣ ನಾಯಕರ ಪಟ್ಟಿ

ಧರ್ಮಶಾಲಾ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನ 19 ನೇ ಋತುವಿನ 58 ನೇ ಲೀಗ್ ಪಂದ್ಯ ಆತಿಥೇಯ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮೈದಾನ ಪ್ರವೇಶಿಸಿದವು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಮುನ್ನಡೆಸುವುದು ಯಾರು? ಎಂಬ ಪ್ರಶ್ನೆ ಉದ್ಭವಿಸಿತ್ತು. ಇದಕ್ಕೆ ಟಾಸ್‌ ಸಮಯದಲ್ಲಿ ಉತ್ತರ ಲಭಿಸಿದೆ.

ಟಾಸ್‌ ಸಮಯದಲ್ಲಿ ಮುಂಬೈ ಇಂಡಿಯನ್ಸ್‌ ಪರ ಯಾರ್ಕರ್ ಸ್ಪೆಷಲಿಸ್ಟ್‌ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಂಡರು. ಇವರು ಮುಂಬೈ ಇಂಡಿಯನ್ಸ್‌ ತಂಡವನ್ನು ಮುನ್ನಡೆಸುವ ಮೂಲಕ ವಿಶೇಷ ಕ್ಲಬ್‌ಗೆ ಸೇರಿದರು. ಈ ಮೂಲಕ ವೇಗಿ ಬುಮ್ರಾ ಐಪಿಎಲ್‌ನಲ್ಲಿ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡರು. ಈ ಮೊದಲು ಈ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಿದ್ದರು. ಇವರು ಗಾಯಕ್ಕೆ ತುತ್ತಾದ ಬಳಿಕ ಕೆಲವು ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಿದ್ದರು.

Jasprit Bumrah

ಸೂರ್ಯ ವೈಯಕ್ತಿಕ ಕಾರಣಗಳಿಂದ ಈ ಪಂದ್ಯದಲ್ಲಿ ಆಡುತ್ತಿಲ್ಲ. ಈ ಸ್ಥಿತಿಯಲ್ಲಿ ರೋಹಿತ್ ಶರ್ಮಾ ಮತ್ತೆ ತಂಡವನ್ನು ಮುನ್ನಡೆಸುತ್ತಾರಾ? ಎಂಬ ಪ್ರಶ್ನೆ ಸಹ ಉದ್ಭವಿಸಿತ್ತು. ಆದರೆ ಟೀಮ್ ಮ್ಯಾನೇಜ್ಮೆಂಟ್‌ ಜಸ್ಪ್ರೀತ್ ಬುಮ್ರಾ ಅವರಿಗೆ ಪಟ್ಟ ಕಟ್ಟಿದೆ.

10ನೇ ನಾಯಕ

ಮುಂಬೈ ಇಂಡಿಯನ್ಸ್ ಪರ ಮೂರು ನಾಯಕರು 19ನೇ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಈ ರೀತಿ ಒಟ್ಟಾರೆ ಐಪಿಎಲ್‌ನಲ್ಲಿ ಆಗಿದ್ದು ಕೇವಲ 5 ಬಾರಿ. ಇದರಲ್ಲಿ ಮುಂಬೈ ಇಂಡಿಯನ್ಸ್‌ ಈ ರೀತಿ 2 ಬಾರಿ, ಪುಣೆ ವಾರಿಯರ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಲಾ ಒಮ್ಮೆ ಮೂರು ನಾಯಕರನ್ನು ಕಣಕ್ಕೆ ಇಳಿಸಿದೆ. ಐಪಿಎಲ್‌ನಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ 10ನೇ ಆಟಗಾರ ಎಂಬ ಹೆಗ್ಗಳಿಕೆ ಬುಮ್ರಾ ಅವರದ್ದಾಗಿದೆ.

ಬುಮ್ರಾ ಹೇಳಿದ್ದೇನು?

ಟಾಸ್‌ ವೇಳೆ ಸೂರ್ಯಕುಮಾರ್ ಯಾದವ್ ಅವರ ಅನುಪಸ್ಥಿತಿಯ ಬಗ್ಗೆ ಪ್ರಶ್ನೆ ಕೇಳಲಾಯಿತು. ಆಗ ಬುಮ್ರಾ ಸೂರ್ಯ ಈ ಪಂದ್ಯವನ್ನು ವೈಯಕ್ತಿಕ ಕಾರಣಗಳಿಂದ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಿದರು. ನಾನು 19 ವರ್ಷದವನಾಗಿದ್ದಾಗ ತಂಡವನ್ನು ಸೇರಿದೆ. ಈ ತಂಡವನ್ನು ಮುನ್ನಡೆಸುವ ಮೊದಲು ಟೆಸ್ಟ್‌ನಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಅವಕಾಶ ಸಿಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಉಳಿದ ಪಂದ್ಯಗಳನ್ನು ನಾವು ಜವಾಬ್ದಾರಿಯಿಂದ ಆಡುತ್ತೇವೆ ಎಂದು ತಿಳಿಸಿದರು.

ಮುಂಬೈ ತಂಡವನ್ನು ಮುನ್ನಡೆಸಿದ ನಾಯಕರ ಪಟ್ಟಿ

ನಾಯಕರು ದೇಶ ಅವಧಿ ಪಂದ್ಯ ಗೆಲುವು ಸೋಲು ಟೈ ರದ್ದು ಗೆಲುವು (%)
ಹರ್ಭಜನ್ ಸಿಂಗ್ ಭಾರತ 2008–2012 30 14 14 0 2 46.66
ಶಾನ್ ಪೊಲಾಕ್ ದಕ್ಷಿಣ ಆಫ್ರಿಕಾ 2008 4 3 1 0 0 75.00
ಸಚಿನ್ ತೆಂಡೂಲ್ಕರ್ ಭಾರತ 2008–2011 55 32 23 0 0 58.18
ಡ್ವೇನ್ ಬ್ರಾವೋ ವೆಸ್ಟ್ ಇಂಡೀಸ್ 2010 1 0 1 0 0 0.00
ರಿಕ್ಕಿ ಪಾಂಟಿಂಗ್ ಆಸ್ಟ್ರೇಲಿಯಾ 2013 6 3 3 0 0 50.00
ರೋಹಿತ್ ಶರ್ಮಾ ಭಾರತ 2013–2023 163 91 68 4 0 55.82
ಕೀರನ್ ಪೊಲಾರ್ಡ್ ವೆಸ್ಟ್ ಇಂಡೀಸ್ 2014–2021 9 5 4 0 0 55.55
ಸೂರ್ಯಕುಮಾರ್ ಯಾದವ್ ಭಾರತ 2023–2026 4 2 2 0 0 50.00
ಹಾರ್ದಿಕ್ ಪಾಂಡ್ಯ ಭಾರತ 2024–ಪ್ರಸ್ತುತ 37 15 22 0 0 40.54
ಜಸ್ಪ್ರೀತ್ ಬುಮ್ರಾ ಭಾರತ 2026- - - - - - -

Story first published: Thursday, May 14, 2026, 20:52 [IST]
Other articles published on May 14, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+