Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಳಪೆ ಪ್ರದರ್ಶನದ ನಂತರ ನಂಬರ್ 1 ಸ್ಥಾನವನ್ನು ಕಳೆದುಕೊಂಡ ಬೂಮ್ರಾ

Bumrah drops in ranking after failing to pick wickets in the series | Bumrah | Raking | Declined
Jasprit Bumrah Loses Top Spot After Poor Show In New Zealand

ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಕಳಪೆ ಪ್ರದರ್ಶನ ನೀಡಿ ಸರಣಿಯ ಒಂದೂ ಪಂದ್ಯವನ್ನು ಗೆಲ್ಲದೆ ವೈಟ್‌ವಾಶ್ ಅವಮಾನಕ್ಕೆ ಒಳಗಾಯಿತು. ಈ ಸರಣಿಯಲ್ಲಿ ಜಸ್ಪ್ರೀತ್ ಬೂಮ್ರಾ ಒಂದೂ ವಿಕೆಟ್ ಪಡೆಯಲು ಸಫಲರಾಗಲಿಲ್ಲ. ಇದೀಗ ಏಕದಿನ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನವನ್ನು ಬೂಮ್ರಾ ಕಳೆದುಕೊಂಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಬಳಿಕ ಏಕದಿನ ಶ್ರೇಯಾಂಕದಲ್ಲಿ ಬದಲಾವಣೆಯಾಗಿದ್ದು ನ್ಯೂಜಿಲೆಂಡ್‌ ವೇಗಿ ಟ್ರೆಂಟ್ ಬೋಲ್ಟ್ ಮೊದಲ ಸ್ಥಾನವನ್ನು ಅಲಂಕರಿಸಿಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿದ್ದ ಬೂಮ್ರಾ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಈ ಹಿಂದೆ ಎರಡನೇ ಸ್ಥಾನದಲ್ಲಿದ್ದ ಟ್ರೆಂಟ್ ಬೋಲ್ಟ್ 727 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೂಮ್ರಾ 719 ಅಂಕಗಳನ್ನು ಪಡೆದು ಒಂದು ಸ್ಥಾನವನ್ನು ಕಳೆದುಕೊಂಡಿದ್ದಾರೆ. ಬೂಮ್ರಾ ಹೊರತು ಪಡಿಸಿ ಉಳಿದ ಯಾವ ಭಾರತೀಯ ಬೌಲರ್‌ ಕೂಡ ಟಾಪ್‌ 10ರಲ್ಲಿ ಕಾಣಿಸಿಕೊಂಡಿಲ್ಲ.

ಟೀಮ್ ಇಂಡಿಯಾದ ಪ್ರಮುಖ ಅಸ್ತ್ರವಾಗಿರುವ ಜಸ್ಪ್ರೀತ್ ಬೂಮ್ರಾ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಮೂವತ್ತು ಓವರ್‌ಗಳನ್ನು ಎಸೆದರೂ ಒಂದೇ ಒಂದು ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇದೇ ಮೊದಲ ಬಾರಿಗೆ ದ್ವಿಪಕ್ಷೀಯ ಸರಣಿಯೊಂದರಲ್ಲಿ ಬೂಮ್ರಾ ಖಾಲಿ ಕೈಯ್ಯಲ್ಲಿ ಹಿಂದಿರುಗಿದ್ದಾರೆ.

ಅಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್ ಉರ್ ರೆಹ್ಮಾನ್ ದಕ್ಷಿಣ ಆಫ್ರಿಕಾದ ವೇಗಿ ಕಗಿಸೋ ರಬಡಾ ಮತ್ತು ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಟಾಸ್ ಊದರಲ್ಲಿರುವ ಇತರ ಬೌಲರ್‌ಗಳಾಗಿದ್ದಾರೆ.

Story first published: Wednesday, February 12, 2020, 18:06 [IST]
Other articles published on Feb 12, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+