ಬುಮ್ರಾ ಯಾರ್ಕರ್ ಮ್ಯಾಜೆಕ್: ಈ ದಾಖಲೆ ಬರೆದ ಮೊದಲ ಭಾರತೀಯ ವೇಗಿ
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೊದಲ ಟೆಸ್ಟ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಈ ವೇಳೆ ವಿಂಡೀಸ್ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಆಟಗಾರರು ವಿಫಲರಾದರು. ಟೀಮ್ ಇಂಡಿಯಾದ ಪರ ಈ ಪಂದ್ಯದಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬಸ್ಪ್ರೀತ್ ಬುಮ್ರಾ ಮಾರಕ ದಾಳಿ ನಡೆಸಿದರು.
ಏಷ್ಯಾ ಕಪ್ ಟಿ20 ಟೂರ್ನಿ ಮುಗಿದ ನಾಲ್ಕನೇ ದಿನದಲ್ಲಿ ಟೀಮ್ ಇಂಡಿಯಾದ ಭರವಸೆಯ ಬೌಲರ್ ಜಸ್ಪ್ರೀತ್ ಬುಮ್ರಾ ಬೇರೆ ಫಾರ್ಮೆಟ್‌ನಲ್ಲಿ ಕಣಕ್ಕೆ ಇಳಿದರು. ಇವರು ಈ ಪಂದ್ಯದಲ್ಲಿ ತಮ್ಮ ಕರಾರುವಾಕ್ ದಾಳಿಯಿಂದ ಗಮನ ಸೆಳೆದರು. ಅಲ್ಲದೆ ಈ ಪಂದ್ಯದಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದರು. ಈ ಮೂಲಕ ಟೀಮ್ ಇಂಡಿಯಾದ ಪರ ಯಾವೊಬ್ಬ ವೇಗದ ಬೌಲರ್ ಮಾಡದ ಸಾಧನೆಯನ್ನು ಮಡಿದರು.

ಮೊದಲ ಟೆಸ್ಟ್ ಪಂದ್ಯದಲ್ಲಿ ಬುಮ್ರಾ 39ನೇ ಓವರ್‌ನ ಕೊನೆಯ ಎಸೆತದಲ್ಲಿ ಪಿಶ್ಚರ್ ಪರ್ಫೆಕ್ಟ್ ಯಾರ್ಕರ್ ಎಸೆದು ಜಸ್ಟಿನ್ ಗ್ರೀವ್ಸ್ ಕ್ಲೀನ್ ಬೋಲ್ಡ್ ಮಾಡಿದರು. ಬುಮ್ರಾ ಎಸೆದ ಚೆಂಡು ಜಸ್ಟಿನ್ ಗ್ರೀವ್ಸ್ ಅವರ ಕಾಲ ಮೇಲೆ ಬೀಳುವಂತೆ ಇತ್ತು. ಅವರು ಈ ಯಾರ್ಕರ್‌ಗೆ ಉತ್ತರಿಸಲು ಹೋದಾಗ ಚೆಂಡು ಹಾಫ್ ಸ್ಟಂಪ್ ಎಗರಿಸಿತು. ಇದಾದ ಬಳಿಕ ಮುಂದಿನ ಓವರ್ ಮಾಡಲು ಬಂದ ಬುಮ್ರಾ ಅವರ ಮೊದಲ ಎಸೆತದಲ್ಲಿ ಜೋಹಾನ್ ಲೈನ್ ಯಾರ್ಕರ್ ಎದುರಿಸುವಲ್ಲಿ ವಿಫಲರಾಗಿ ಪೆವಿಲಿಯನ್ ಸೇರಿದರು. ಈ ಮೂಲಕ ಬುಮ್ರಾ ಇತಿಹಾಸ ನಿರ್ಮಿಸಿದರು.
ತವರಿನಲ್ಲಿ ಅಮೋಘ ಸಾಧನೆ
ಈ ಮೂರು ವಿಕೆಟ್‌ಗಳ ಸಹಾಯದಿಂದ ಜಸ್ಪ್ರೀತ್ ಬುಮ್ರಾ ಭಾರತದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ 50ಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಮಾಡಿದರು. ಈ ಮೂಲಕ ತವರಿನಲ್ಲಿ ನಡೆದ WTC ನಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಿದ ಮೊದಲ ಟೀಮ್ ಇಂಡಿಯಾ ವೇಗಿ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ರವಿಚಂದ್ರನ್ ಅಶ್ವಿನ್ (149 ವಿಕೆಟ್‌ಗಳು) ಮತ್ತು ರವೀಂದ್ರ ಜಡೇಜಾ (94 ವಿಕೆಟ್‌ಗಳು) ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ತವರಿನಲ್ಲಿ 50 ಕ್ಕೂ ಹೆಚ್ಚು ವಿಕೆಟ್ ಕಬಳಿಸಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಡಿಯಲ್ಲಿ ಜಸ್ಪ್ರೀತ್ ಬುಮ್ರಾ ಒಟ್ಟು 13 ಟೆಸ್ಟ್ ಪಂದ್ಯಗಳನ್ನು ತವರಿನಲ್ಲಿ ಆಡಿದ್ದು, 50 ವಿಕೆಟ್ ಪಡೆದು ಬೀಗಿದ್ದಾರೆ. ಇನ್ನು ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಬುಮ್ರಾ 49 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 222 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ವೇಳೆ ಜಸ್ಪ್ರೀತ್ 15 ಬಾರಿ 5ಕ್ಕೂ ಹೆಚ್ಚು ವಿಕೆಟ್ ಪಡೆದು ಬೀಗಿದ್ದಾರೆ.
ವಿಂಡೀಸ್ ತಂಡ ಮೊದಲ ಇನಿಂಗ್ಸ್‌ನಲ್ಲಿ 162 ರನ್‌ಗೆ ಆಲೌಟ್ ಆಯಿತು. ಭಾರತದ ಪರ ಮೊಹಮ್ಮದ್ ಸಿರಾಜ್ 4, ಕುಲ್‌ದೀಪ್ ಯಾದವ್ 2 ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications