For Quick Alerts
ALLOW NOTIFICATIONS  
For Daily Alerts
 

Jasprit Bumrah: ವಾಸೀಮ್ ಅಕ್ರಮ್ ದಾಖಲೆ ಅಳಿಸಲು ಬುಮ್ರಾಗೆ ಬೇಕು 2 ವಿಕೆಟ್‌

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಟೆಸ್ಟ್‌ ಸರಣಿ ಆರಂಭವಾಗಲಿದೆ. ಈ ಸರಣಿಗೆ ಸಚಿನ್ ತೆಂಡೂಲ್ಕರ್ ಹಾಗೂ ಜೇಮ್ಸ್‌ ಆಂಡರ್ಸನ್‌ ಅವರ ಹೆಸರನ್ನು ಈಡಲಾಗಿದೆ. ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವ ಇರಾದೆಯನ್ನು ಉಭಯ ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಈ ವೇಳೆ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬೌಲರ್‌ ಜಸ್ಪ್ರಿತ್ ಬುಮ್ರಾ ಅವರ ಮೇಲೆ ನೆಟ್ಟಿರಲಿವೆ. ಈ ಸರಣಿಯಲ್ಲಿ ಬುಮ್ರಾ ದೊಡ್ಡ ದಾಖಲೆಯನ್ನು ಬರೆಯಲಿದ್ದಾರೆ.

ಜಸ್ಪ್ರಿತ್ ಬುಮ್ರಾ ವಿಶ್ವದ ಸ್ಟಾರ್ ಬೌಲರ್‌ಗಳ ಸಾಲಿನಲ್ಲಿ ಕಾಣಿಸಿಕೊಳ್ಳುವ ಆಟಗಾರ. ಇವರ ಹೆಸರಿಗೆ ಅದೆಷ್ಟೋ ದಾಖಲೆಗಳು ಸೇರಿಕೊಂಡಿವೆ. ಈಗ ಪಾಕಿಸ್ತಾನದ ಮಾಜಿ ನಾಯಕ ಹಾಗೂ ದಿಗ್ಗಜ ಬೌಲರ್‌ ವಾಸೀಮ್ ಅಕ್ರಮ್ ಅವರ ದಾಖಲೆಯನ್ನು ಅಳಿಸುವ ಹೊಸ್ತಿಲಲ್ಲಿ ಬುಮ್ರಾ ನಿಂತಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಸರಣಿ ಆರಂಭವಾಗುತ್ತಿದ್ದಂತೆ ಎರಡು ವಿಕೆಟ್‌ ಪಡೆದಲ್ಲಿ ಬುಮ್ರಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆಯನ್ನು ಮಾಡಲಿದ್ದಾರೆ.

Jasprit Bumrah Nears Wasim Akram s Record Two Wickets Away from History in England Test Series

ಏಷ್ಯನ್‌ ಬೌಲರ್ ಒಬ್ಬರು ಸೇನಾ ದೇಶದಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಕೀರ್ತಿ ಸದ್ಯ ವಾಸೀಮ್‌ ಅಕ್ರಮ್ ಅವರ ಹೆಸರನಲ್ಲಿದೆ. ಇವರು ಸೇನಾ ದೇಶ ಅಂದರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಆಸ್ಟ್ರೇಲಿಯಾದಲ್ಲಿ ಸ್ಥಿರ ಪ್ರದರ್ಶನ ನೀಡಿ ವಿಕೆಟ್‌ ಸಾಧನೆ ಮಾಡಿದ್ದಾರೆ. ಏಷ್ಯನ್ ಬೌಲರ್‌ ಆಗಿ ವಾಸೀಮ್ ಅಕ್ರಮ್ ಇಲ್ಲಿಯ ವರೆಗೆ ಸೇನಾ ರಾಷ್ಟ್ರದಲ್ಲಿ 146 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಅತಿ ಹೆಚ್ಚು ವಿಕೆಟ್‌ ಪಡೆದ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬೌಲರ್‌ ಜಸ್ಪ್ರಿತ್ ಬುಮ್ರಾ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಸೇನಾ ರಾಷ್ಟ್ರಗಳ ವಿರುದ್ಧ ಈಗಾಗಲೇ 145 ವಿಕೆಟ್‌ ಪಡೆದಿದ್ದಾರೆ.

2 ವಿಕೆಟ್ ದೂರ

ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಬುಮ್ರಾ ಎರಡು ವಿಕೆಟ್‌ಗಳನ್ನು ಪಡೆಯುತ್ತಿದ್ದಂತೆ ವಾಸೀಮ್ ಅಕ್ರಮ್ ಅವರ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ಈ ಸಾಧನೆಯನ್ನು ಬುಮ್ರಾ ಮೊದಲ ಟೆಸ್ಟ್‌ನಲ್ಲೇ ಮಾಡಬಹುದು. ಒಂದು ವೇಳೆ ಟೀಮ್ ಇಂಡಿಯಾ ಮೊದಲ ದಿನ ಬೌಲಿಂಗ್ ಮಾಡಿದರೆ ಈ ಸಾಧನೆಯನ್ನು ಜೂನ್‌ 20 ರಂದೇ ಮಾಡಬಹುದು.

Jasprit Bumrah Nears Wasim Akram s Record Two Wickets Away from History in England Test Series

ಸೇನಾ ರಾಷ್ಟ್ರದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಕನ್ನಡಿಗ ಅನಿಲ್‌ ಕುಂಬ್ಳೆ ಅವರಿಗೆ ಮೂರನೇ ಸ್ಥಾನ. ಇವರು 141 ವಿಕೆಟ್‌ ಪಡೆದಿದ್ದಾರೆ. ಇನ್ನು ಇಶಾಂತ್‌ ಶರ್ಮಾ 140 ವಿಕೆಟ್‌ಗಳಿಂದ ನಾಲ್ಕನೇ ಸ್ಥಾನ, ಶ್ರೀಲಂಕಾ ಸ್ಪಿನ್ ಮಾಂತ್ರಿಕ ಮುತ್ತಯ್ಯಾ ಮುರಳಿಧರನ್‌ 125 ವಿಕೆಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಇನ್ನು ಟೀಮ್ ಇಂಡಿಯಾದ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅವರ ಹೆಸರು ಸಹ ಈ ಪಟ್ಟಿಯಲ್ಲಿದೆ. ಇವರು ಈ ರಾಷ್ಟ್ರಗಳ ವಿರುದ್ಧ 123 ವಿಕೆಟ್‌ ಹೊಂದಿದ್ದಾರೆ. ಆದರೆ ಇವರು ಗಾಯದ ಸಮಸ್ಯೆಯಿಂದ ಈ ಸರಣಿಗೆ ಆಯ್ಕೆ ಆಗಿಲ್ಲ. ಹೀಗಾಗಿ ಟೀಮ್ ಇಂಡಿಯಾದ ಬೌಲಿಂಗ್‌ ನೊಗವನ್ನು ಈ ಸರಣಿಯಲ್ಲಿ ಜಸ್ಪ್ರಿತ್ ಬುಮ್ರಾ ಮುನ್ನಡೆಸಲಿದ್ದಾರೆ.

Story first published: Monday, June 9, 2025, 15:18 [IST]
Other articles published on Jun 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+