Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸೀಸ್: ಬೂಮ್ರಾ, ಚಾಹಲ್ ಇಬ್ಬರಲ್ಲಿ ದಾಖಲೆ ಬರೆಯೋರ್ಯಾರು?

Jasprit Bumrah on the cusp of becoming second Indian to achieve this feat

ನವದೆಹಲಿ, ಫೆಬ್ರವರಿ 23: ಭಾನುವಾರ (ಫೆಬ್ರವರಿ 24) ವಿಶಾಖಪಟ್ನಂ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ vs ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯದಲ್ಲಿ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್ ಯುಜುವೇಂದ್ರ ಚಾಹಲ್ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಒಟ್ಟು 40 ಟಿ20 ಪಂದ್ಯಗಳಲ್ಲಿ ಬೂಮ್ರಾ 48 ವಿಕೆಟ್‌ಗಳ ಸಾಧನೆ ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಜಸ್‌ಪ್ರೀತ್ ಒಂದುವೇಳೆ ಎರಡು ವಿಕೆಟ್ ಪಡೆದರೆ, ಟಿ20ಯಲ್ಲಿ 50 ವಿಕೆಟ್ ಸಾಧನೆ ಮಾಡಿದ ಭಾರತ ಎರಡನೇ ಆಟಗಾರನಾಗಿ ಗುರುತಿಸಿಕೊಳ್ಳಲಿದ್ದಾರೆ.

ಭಾರತ ಪರ 50 ವಿಕೆಟ್ ಗಳ ಸಾಧನೆ ಮೈಲಿಗಲ್ಲು ಸ್ಥಾಪಿಸಿದ್ದು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು. ಅಶ್ವಿನ್ ಒಟ್ಟು 46 ಪಂದ್ಯಗಳಲ್ಲಿ 52 ವಿಕೆಟ್‌ಗಳನ್ನು ಕೆಡವಿದ್ದಾರೆ. ಬೂಮ್ರಾ ಬೆನ್ನಲ್ಲಿ ಚಾಹಲ್ ಕೂಡ ಇದ್ದಾರೆ. 29 ಪಂದ್ಯಗಳಲ್ಲಿ 45 ವಿಕೆಟ್ ಸಾಧನೆ ಹೊಂದಿರುವ ಚಾಹಲ್ ಇನ್ನೈದು ವಿಕೆಟ್ ಪಡೆದರೆ ಟಿ20 50 ವಿಕೆಟ್ ಪಡೆದ ಭಾರತದ ಎರಡನೇ ಆಟಗಾರನಾಗಿ ಮಿಂಚಲಿದ್ದಾರೆ.

ಬೂಮ್ರಾ ಬದಲಿಗೆ ಯುಜುವೇಂದ್ರ ಚಾಹಲ್ ಮೊದಲು 50 ವಿಕೆಟ್‌ಗಳನ್ನು ಪಡೆದುಕೊಂಡರೆ- ಅತೀ ವೇಗವಾಗಿ ಟಿ20 50 ವಿಕೆಟ್ ಕೆಡವಿದ ವಿಶ್ವದ ಎರಡನೇ ಆಟಗಾರನಾಗಿ ಚಾಹಲ್ ಗುರುತಿಸಿಕೊಳ್ಳಲಿದ್ದಾರೆ. ಶ್ರೀಲಂಕಾ ಬೌಲರ್ ಅಜಂತ ಮೆಂಡಿಸ್ ಒಟ್ಟು 26 ಪಂದ್ಯಗಳಲ್ಲಿ 50 ವಿಕೆಟ್‌ ಪಡೆದು ಈ ಯಾದಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

Story first published: Saturday, February 23, 2019, 11:34 [IST]
Other articles published on Feb 23, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+