Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆತ ಕ್ರಿಕೆಟ್‌ನ ದಿಗ್ಗಜರಲ್ಲಿ ಓರ್ವ: ಶಮಿಯನ್ನು ಹಾಡಿ ಹೊಗಳಿದ ಜಸ್ಪ್ರೀತ್ ಬೂಮ್ರಾ

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಎಲ್ಲಾ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್ ಬೌಲಿಂಗ್ ಹಾಗೂ ಫಿಲ್ಡಿಂಗ್‌ನಲ್ಲಿ ಉಳಿದೆಲ್ಲಾ ತಂಡಗಳಿಗಿಂತಲೂ ಭಾರತ ಬಲಿಷ್ಠವಾಗಿ ಗೋಚರಿಸುತ್ತಿದೆ. ಅದರಲ್ಲೂ ಮೊಹಮ್ಮದ್ ಶಮಿ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಬಳಿಕ ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ಆಕ್ರಮಣಕಾರಿಯಾಗಿರುವುದು ಸ್ಪಷ್ಟವಾಗಿದೆ.

ಟೂರ್ನಿಯಲ್ಲಿ ಮೊದಲ ನಾಲ್ಕು ಪಂದ್ಯಗಳಲ್ಲಿ ಆಡುವ ಬಳಗದಿಂದ ಹೊರಗುಳಿದಿದ್ದ ಮೊಹಮ್ಮದ್ ಶಮಿ ಕಳೆದ ಎರಡು ಪಂದ್ಯಗಳಲ್ಲಿ ಆಡಿ ಎದುರಾಳಿಗಳನ್ನು ಸಂಪೂರ್ಣವಾಗಿ ಕೆಡವುವಲ್ಲಿ ಯಶಸ್ವಿಯಾಗಿದ್ದರು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದ ಶಮಿ ಇಂಗ್ಲೆಂಡ್ ವಿರುದ್ಧ ನಾಲ್ಕು ವಿಕೆಟ್ ಪಡೆದಿದ್ದು ಕೇವಲ ಎರಡು ಪಂದ್ಯಗಳಲ್ಲಿ 9 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.

Jasprit Bumrah praises Mohammed Shami said he is one of the legends of the game

ಹೀಗಾಗಿ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾ ಜೋಡಿ ಪ್ರಸ್ತುತ ಅತ್ಯಂತ ವಿಧ್ವಂಸಕವಾಗಿ ಗೋಚರಿಸುತ್ತಿದೆ. ಈ ಸಂದರ್ಭದಲ್ಲಿ ಸ್ವತಃ ಟೀಮ್ ಇಂಡಿಯಾದ ಸ್ಟಾರ್ ವೇಗಿಯಾದ ಜಸ್ಪ್ರೀತ್ ಬೂಮ್ರಾ ಮೊಹಮ್ಮದ್ ಶಮಿ ಜೊತೆಗಿನ ಬೌಲಿಂಗ್ ಜೊತೆಯಾಟದ ಬಗ್ಗೆ ಮಾತನಾಡಿ ಅನುಭವಿ ವೇಗಿಯನ್ನು ಕೊಂಡಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮೊಹಮ್ಮದ್ ಶಮಿ ಕ್ರಿಕೆಟ್‌ನ ದಿಗ್ಗಜ ಆಟಗಾರರಲ್ಲಿ ಓರ್ವ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

"ಆತನೋರ್ವ ಔಟ್‌ಸ್ಟ್ಯಾಂಡಿಂಗ್ ಆಟಗಾರ. ಆವರು ಕ್ರಿಕೆಟ್‌ನ ದಿಗ್ಗಜರಲ್ಲಿ ಒಬ್ಬರು. ಯಾವಾಗಲೂ ಶಾಂತಚಿತ್ತದಿಂಲೇ ಇರುತ್ತಾರೆ. ಅವರು ಅಬ್ಬರಿಸುವುದಿಲ್ಲ, ಆದರೆ ಅವರು ಟೆಸ್ಟ್ ಪಂದ್ಯವನ್ನು ಆಡುತ್ತಿರುವಂತೆ ಬೌಲಿಂಗ್ ಮಾಡುತ್ತಿದ್ದ ರೀತಿ ನೋಡಲು ನಿಜವಾಗಿಯೂ ಅದ್ಭುತವಾಗಿದೆ" ಎಂದು ಶಮಿ ಪ್ರದರ್ಶನಕ್ಕೆ ಬೂಮ್ರಾ ವಿಶೇಷ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

"ಸಾಮಾನ್ಯವಾಗಿ ನಾವು ಟೆಸ್ಟ್ ಪಂದ್ಯಗಳಲ್ಲಿ ದೊಡ್ಡ ಜೊತೆಯಾಟವನ್ನು ಆಡುತ್ತಿರುತ್ತೇವೆ. ಅವರೊಂದಿಗೆ ನಾನು ಬೌಲಿಂಗ್ ನಡೆಸುವುದನ್ನು ಸಾಕಷ್ಟು ಆನಂದಿಸುತ್ತೇನೆ. ಆತ ಮುನ್ನಡೆಯುತ್ತಿರುವ ರೀತಿಯಿಂದಾಗಿ ನಾನು ನಿಜಕ್ಕೂ ಸಾಖಷ್ಟು ಸಂತಸಗೊಂಡಿದ್ದೇನೆ" ಎಂದಿದ್ದಾರೆ ಟೀಮ್ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರ ಜಸ್ಪ್ರೀತ್ ಬೂಮ್ರಾ.

Story first published: Monday, October 30, 2023, 22:29 [IST]
Other articles published on Oct 30, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+