ಸಂಜನಾ ಗಣೇಶನ್ ವರಿಸಲಿರುವ ಟೀಮ್ ಇಂಡಿಯಾ ವೇಗಿ ಬೂಮ್ರಾ: ಮದುವೆ ದಿನಾಂಕವೂ ಬಹಿರಂಗ

ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ಮದುವೆಗೆ ಸಂಬಂಧಿಸಿದ ಎಲ್ಲಾ ಊಹಾಪೋಹಗಳಿಗೂ ಈಗ ತೆರೆಬಿದ್ದಿದೆ. ಬೂಮ್ರಾ ವರಿಸಲಿರುವ ವಧು ಯಾರು ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ದೊರೆತಿದೆ. ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ವರಿಸಲಿದ್ದಾರೆ.
ಟೀಮ್ ಇಂಡಿಯಾ ವೇಗಿ ಜಸ್ಪರೀತ್ ಬೂಮ್ರಾ ಕ್ರೀಡಾ ನಿರೂಪಕಿ ಹಾಗೂ ಮಾಡೆಲ್ ಸಂಜನಾ ಗಣೇಶನ್ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಈಗ ಅಧಿಕೃತವಾಗಿದೆ. ಗೋವಾದಲ್ಲಿ ಈ ಜೋಡಿಯ ವಿವಾಹ ಕಾರ್ಯಕ್ರಮ ನಡೆಯಲಿದ್ದು ಮಾರ್ಚ್ 14-15ರಂದು ನಡೆಯುವ ಸರಳ ಕಾರ್ಯಕ್ರಮದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದೆ.
ಸಂಜನಾ 2014ರ 'ಮಿಸ್ ಇಂಡಿಯಾ'ದ ಫೈನಲ್ ಹಂತಕ್ಕೇರಿದ ಮಾಡೆಲ್ ಆಗಿದ್ದಾರೆ. ಸದ್ಯ ಕ್ರೀಡಾ ಕ್ಷೇತ್ರದಲ್ಲಿ ನಿರೂಪಕಿಯಾಗಿಯೂ ಸಂಜನಾ ಗಣೇಶನ್ ಖ್ಯಾತರಾಗಿದ್ದಾರೆ. ಈ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಈ ಹಿಂದೆ ಸಾಕಷ್ಟು ಬಾರಿ ಕೇಳಿ ಬಂದಿತ್ತು. ಈಗ ಈ ಸುದ್ದಿ ಅಧಿಕೃತವಾಗಿದೆ.

ಈ ಇಬ್ಬರ ಭೇಟಿ ಹೇಗೆ?
ಜಸ್ಪ್ರೀತ್ ಬೂಮ್ರಾ ಹಾಗೂ ಸಂಜನಾ ಗಣೇಶನ್ ಇಬ್ಬರು ಯಾವ ಸಂದರ್ಭದಲ್ಲಿ ಭೇಟಿಯಾಗಿ ಆಪ್ತರಾದರು ಎಂಬ ಬಗ್ಗೆ ಹೆಚ್ಚಿನ ಮಾಹಿತಿಗಳು ಇಲ್ಲ. ಆದರೆ ಅಂತಾರಾಷ್ಟ್ರೀಯ ಪಂದ್ಯಗಳ ಕಾರ್ಯಕ್ರಮಗಳು ಅಥವಾ ಐಪಿಎಲ್ ಸಂದರ್ಭದಲ್ಲಿ ಈ ಇಬ್ಬರಭೇಟಿ ನಡೆದಿರುವ ಸಾಧ್ಯತೆಗಳು ಹೆಚ್ಚಿದೆ. ಐಪಿಎಲ್ ಅಥವಾ ಬಿಸಿಸಿಐನ ಕಾರ್ಯಕ್ರಮಗಳ ಸಂದರ್ಭದಲ್ಲಿ ಇಬ್ಬರು ಹೆಚ್ಚು ಆಪ್ತರಾಗಿರುವ ಸಾಧ್ಯತೆಯಿದೆ.

ಮಿಸ್ ಇಂಡಿಯಾ ಫೈನಲಿಸ್ಟ್ ಸಂಜನಾ
28ರ ಹರೆಯದ ಸಂಜನಾ ಗಣೇಶನ್ ಐಪಿಎಲ್ ಫ್ರಾಂಚೈಸಿಗಳಲ್ಲಿ ಒಂದಾದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ "ನೈಟ್ಸ್ ಕ್ಲಬ್" ಎಂಬ ಕಾರ್ಯಕ್ತಮವನ್ನೂ ನಡೆಸಿಕೊಟ್ಟಿದ್ದಾರೆ. 2014ರಲ್ಲಿ ನಡೆದ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲ್ ಸ್ಪರ್ಧಿಯಾಗಿದ್ದರು. ಕ್ರೀಡಾ ನಿರೂಪಕಿಯಾಗುವ ಮುನ್ನ ಖಾಸಗೀ ಚಾನೆಲ್‌ವೊಂದರ ರಿಯಾಲಿಟಿ ಶೋನ ಸ್ಪರ್ಧಿಯಾಗಿದ್ದರು.

ಟೆಸ್ಟ್ ಸರಣಿಯ ಅಂತಿಮ ಪಂದ್ಯದಿಂದ ಹೊರಗುಳಿದ ಬೂಮ್ರಾ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದ ಜಸ್ಪ್ರೀತ್ ಬೂಮ್ರಾ ಸರಣಿಯ ಅಂತಿಮ ಪಂದ್ಯಕ್ಕೂ ಮುನ್ನ ತಂಡದಿಂದ ಹೊರಗುಳಿಯುವ ನಿರ್ಧಾರವನ್ನು ಮಾಡಿ ಟೀಮ್ ಇಂಡಿಯಾದಿಂದ ಬಿಡುಗಡೆಗೊಂಡಿದ್ದರು. ಬಳಿಕ ಬೂಮ್ರಾ ವಿವಾಹವಾಗಲಿದ್ದಾರೆ ಎಂಬ ವಿಚಾರ ಹರಿದಾಡಲು ಆರಂಭಿಸಿತ್ತು.

ದಕ್ಷಿಣ ಭಾರತದ ನಟಿಯ ಜೊತೆಗೆ ಮದುವೆಯ ಊಹಾಪೋಹ
ಆರಂಭದಲ್ಲಿ ದಕ್ಷಿಣ ಭಾರತದ ನಟಿ ಅನುಪಮಾ ಪರಮೇಶ್ವರ್ ಜೊತೆಗೆ ಬೂಮ್ರಾ ವರಿಸಲಿದ್ದಾರೆ ಎಂಬ ಸುದ್ದಿ ಹರಿದಾಡಲು ಆರಂಭಿಸಿತ್ತು. ಆದರೆ ಬಳಿಕ ಈ ಸುದ್ಧಿಯನ್ನು ನಟಿಯ ಕುಟುಂಬ ನಿರಾಕರಿಸಿತ್ತು. ಆದರೆ ಮದುವೆಯ ವಿಚಾರವಾಗಿ ಇಷ್ಟಲ್ಲಾ ಊಹಾಪೋಹಗಳು ಹರಿದಾಡುತ್ತಿದ್ದರೂ ಬೂಮ್ರಾ ಕುಟುಂಬ ಮಾತ್ರ ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications