Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾ ವೇಗಿ ಏಷ್ಯಾ ಕಪ್‌ ಆಡುವುದು ಡೌಟ್‌: ಸೂರ್ಯ, ಗಂಭೀರ್‌ಗೆ ಟೆನ್ಷನ್‌

ಭಾರತ ಹಾಗೂ ಇಂಗ್ಲೆಂಡ್ ನಡುವಣ 5ನೇ ಟೆಸ್ಟ್‌ ಪಂದ್ಯ ಓವಲ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಬೌಲರ್ ಜಸ್ಪ್ರೀತ್‌ ಬುಮ್ರಾ ಆಡುತ್ತಿಲ್ಲ. ಅಲ್ಲದೆ ಇವರನ್ನು ಈಗಾಗಲೇ ತಂಡದಿಂದ ಬಿಡುಗಡೆ ಮಾಡಲಾಗಿದೆ. ಇವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಈಗ ಬರುತ್ತಿರುವ ಸುದ್ದಿ ಸದ್ಯ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಕುಳಿತಿರುವ ಗೌತಮ್‌ ಗಂಭೀರ್‌ ಹಾಗೂ ಮುಂಬೈನಲ್ಲಿರುವ ಸೂರ್ಯಕುಮಾರ್‌ ಯಾದವ್ ಅವರ ಟೆನ್ಷನ್‌ ಹೆಚ್ಚಿಸಿದೆ. ಇವರು ಮುಂಬರು ಏಷ್ಯಾ ಕಪ್‌ ಆಡುವುದು ಡೌಟ್ ಎಂಬ ಸುದ್ದಿ ಬಂದಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದಾಲೇ ವರ್ಕ್‌ ಲೋಡ್‌ನಿಂದಾಗಿ ತಾವು ಐದು ಟೆಸ್ಟ್‌ ಪಂದ್ಯಗಳನ್ನು ಆಡುವುದಿಲ್ಲ. ಬದಲಿಗೆ ಮೂರು ಪಂದ್ಯಗಳನ್ನು ಮಾತ್ರ ಆಡುವುದಾಗಿ ಬುಮ್ರಾ ಖಚಿತ ಪಡಿಸಿದ್ದರು. ಇದರ ಅನುಸಾರ ಲೀಡ್ಸ್‌, ಲಾರ್ಡ್ಸ್‌, ಮ್ಯಾಂಚೆಸ್ಟರ್‌ ಪಂದ್ಯದಲ್ಲಿ ಆಡಿ ಸೈ ಎನಿಸಿಕೊಂಡಿದ್ದರು. ಈ ಬಳಿಕ ಇವರು ಓವಲ್‌ನಲ್ಲಿ ಇವರನ್ನು ತಂಡದ ಜೊತೆ ಕಾಣಲಿಲ್ಲ.

Jasprit Bumrah s Asia Cup Participation in Doubt Causing Tension for Gambhir amp amp Suryakumar

ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರಿಂದ ಇಂಗ್ಲೆಂಡ್ ನಾಯಕ ಬೆನ್‌ ಸ್ಟೋಕ್ಸ್‌ ಅವರ ಗಾಯ ಚೇತರಿಕೆ ಕಾಣದೇ ಇದ್ದಾಗ ಇವರನ್ನು ತಂಡದಿಂದ ಕೈ ಬಿಡಲಾಗಿತ್ತು. ಆದರೆ ಬೆನ್‌ ಸ್ಟೋಕ್ಸ್‌ ತಂಡದಲ್ಲಿ ಸ್ಥಾನ ಪಡೆಯದೇ ಇದ್ದರೂ ಸಹ ಅಭ್ಯಾಸದ ವೇಳೆ ತಂಡದೊಂದಿಗೆ ಕಾಣಿಸಿಕೊಂಡಿದ್ದು ಆಟಗಾರರ ಮನೋಬಲವನ್ನು ಹೆಚ್ಚಿಸಲು ಅಂಗಳದಲ್ಲಿ ಇದ್ದರು. ಆದರೆ ಬುಮ್ರಾ ಈ ರೀತಿ ಮಾಡಲಿಲ್ಲ. ಈ ಬಗ್ಗೆ ಅಭಿಮಾನಿಗಳು ಪ್ರಶ್ನೆಗಳನ್ನು ಎತ್ತಿದ್ದಾರೆ.

ವಿಂಡೀಸ್‌ ವಿರುದ್ಧದ ಪಂದ್ಯ ನಡೆಯುವುದು ಯಾವಾಗ?

ಯಾರ್ಕರ್ ಸ್ಪೇಷಲಿಸ್ಟ್‌ ಜಸ್ಪ್ರೀತ್ ಬುಮ್ರಾ ಅವರು ವರ್ಕ್‌ ಲೋಡ್‌ನಿಂದಾಗಿ ಏಷ್ಯಾ ಕಪ್ ಟಿ20 ಸರಣಿಯಲ್ಲಿ ಆಡುವುದು ಡೌಟ್ ಎಂದು ಹೇಳಲಾಗುತ್ತಿದೆ. ಏಷ್ಯಾ ಕಪ್‌ ಫೈನಲ್‌ ಪಂದ್ಯ ಸೆಪ್ಟೆಂಬರ್‌ 29 ರಂದು ನಡೆಯಲಿದೆ. ಅಕ್ಟೋಬರ್‌ 2 ರಿಂದ ಭಾರತ ವೆಸ್ಟ್‌ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಆಡಬೇಕಿದೆ. ಈ ವೇಳೆ ಜಸ್ಪ್ರೀತ್ ಬುಮ್ರಾ ಏಷ್ಯಾಕಪ್‌ ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಬಿಸಿಸಿಐ ಮೂಲಗಳ ಪ್ರಕಾರ, "ನಿಜಕ್ಕೂ ಬುಮ್ರಾ ಅವರನ್ನು ಕೈ ಬಿಡುವುದು ಕಠಿಣ ನಿರ್ಧಾರವಾಗಿದೆ. ಬುಮ್ರಾ ಟೆಸ್ಟ್‌ ಕ್ರಿಕೆಟ್‌ ಇಷ್ಟ ಪಡುತ್ತಾರೆ. ಅಲ್ಲದೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ದೃಷ್ಟಿಯಿಂದ ವೆಸ್ಟ್‌ ಇಂಡೀಸ್‌ ವಿರುದ್ಧ ಪಂದ್ಯ ಆಡುವುದು ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.

Jasprit Bumrah s Asia Cup Participation in Doubt Causing Tension for Gambhir amp amp Suryakumar

ಈ ಬಾರಿ ಏಷ್ಯಾ ಕಪ್‌ ಫೈನಲ್‌ನಲ್ಲಿ ಬುಮ್ರಾ ಆಡಿದರೆ, ವೆಸ್ಟ್‌ ಇಂಡೀಸ್‌ ವಿರುದ್ಧದ ತವರಿನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಆಡುವುದು ಕಷ್ಟವಾಗುತ್ತದೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಅಹಮದಾಬಾದ್‌ನಲ್ಲಿ ನಡೆಯಲಿದೆ. ಹೀಗಾಗಿ ಬುಮ್ರಾ ಏಷ್ಯಾ ಕಪ್‌ ನಿಂದ ವಿಶ್ರಾಂತಿ ಪಡೆದು ವಿಂಡೀಸ್‌ ವಿರುದ್ಧ ಟೆಸ್ಟ್ ಸರಣಿ ಆಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.

Story first published: Saturday, August 2, 2025, 16:53 [IST]
Other articles published on Aug 2, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+