ಶೇನ್ ವಾಟ್ಸನ್ ಹೆಸರಿಸಿದ ಸಾರ್ವಕಾಲಿಕ ಶ್ರೇಷ್ಠ 5 ಟಿ20 ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ವೇಗಿ

ಆಸ್ಟ್ರೇಲಿಯಾ ಕ್ರಿಕೆಟ್‌ನ ಮಾಜಿ ಆಲ್‌ರೌಂಡರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಶೇನ್ ವಾಟ್ಸನ್ ಟಿ20 ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಐವರು ಬೌಲರ್‌ಗಳನ್ನು ಹೆಸರಿಸಿದ್ದಾರೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯುವ ವೇಗಿಯನ್ನು ಕೂಡ ಶೇನ್ ವಾಟ್ಸನ್ ಪರಿಗಣಿಸಿದ್ದಾರೆ. ಮಾತ್ರವಲ್ಲದೆ ಭಾರತದ ಯುವ ವೇಗಿಯ ಬಗ್ಗೆ ಸಾಕಷ್ಟು ಸಕಾರಾತ್ಮಕ ಮಾತುಗಳನ್ನು ಆಡಿದ್ದಾರೆ.
ಸದ್ಯ ಶೇನ್ ವಾಟ್ಸನ್ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯುತ್ತಿರುವ ವಾಟ್ಸನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದರು. ಈ ಮೂಲಕ ಚೆನ್ನೈ ಒಂದೂ ವಿಕೆಟ್ ಕಳೆದುಕೊಳ್ಳದೆ ಗೆಲ್ಲಲ್ಲು ಕಾರಣವಾಗಿದ್ದರು. ಶೇನ್ ವಾಟ್ಸನ್ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಮಾತನಾಡಿದ್ದು ಈ ಸಂದರ್ಭದಲ್ಲಿ ಟಿ20 ಕ್ರಿಕೆಟ್‌ನ ಐವರು ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳು ಯಾರು ಎಂಬುದನ್ನು ವಿವರಿಸಿದ್ದಾರೆ.
ಹಾಗಾದರೆ ವಾಟ್ಸನ್ ಹೆಸರಿಸಿದ ಟಿ20ಯ ಟಾಪ್ ಐವರು ಬೌಲರ್‌ಗಳಲ್ಲಿ ಯಾರೆಲ್ಲಾ ಸ್ಥಾನವನ್ನು ಪಡೆದುಕೊಂಡಿದ್ದಾರೆ? ವಾಟ್ಸನ್ ಹೊಗಳಿದ ಆ ಭಾರತೀಯ ಬೌಲರ್ ಯಾರು? ಮುಂದೆ ಓದಿ..

ಯಾರು ಐವರು ಬೌಲರ್‌ಗಳು
ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚು ಹರಿಸಬಲ್ಲ ಸಾಮರ್ತ್ಯವನ್ನು ಹೊಂದಿರುವ ಶೇನ್ ವಾಟ್ಸನ್ ಹೆಸರಿಸಿದ ಸಾರ್ವಕಾಲಿಕ ಶ್ರೇಷ್ಠ ಟಿ20 ಬೌಲರ್‌ಗಳ ಪಟ್ಟಿಯಲ್ಲಿ ಭಾರತೀಯ ಯುವ ಬೌಲರ್ ಹೊರತು ಪಡಿಸಿ ಓರ್ವ ಶ್ರೀಲಂಕಾ ವೇಗಿ, ಓರ್ವ ಪಾಕಿಸ್ಥಾನದ ಆಲ್‌ರೌಂಡರ್ ಹಾಗೂ ಇಬ್ಬರು ವೆಸ್ಟ್ ಇಂಡೀಸ್ ತಂಡದ ಬೌಲರ್‌ಗಳು ಇದ್ದಾರೆ.

ಯಾರು ಆ ಭಾರತೀಯ?
ಶೇನ್ ವಾಟ್ಸನ್ ಹೆಸರಿಸಿದ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿರುವ ಬೌಲರ್ ಬೇರೆ ಯಾರು ಅಲ್ಲ, ಅದು ಜಸ್ಪ್ರೀತ್ ಬೂಮ್ರಾ. 'ಆತನ ಬೌಲಿಂಗ್ ನಿಜಕ್ಕು ಅಸಾಧಾರಣವಾದದ್ದು. ಆತನ ಭವಿಷ್ಯ ಅದ್ಭುತವಾಗಿರಲಿದೆ ಎಂದು ವಾಟ್ಸನ್ ಅಭಿಪ್ರಾಯಪಟ್ಟಿದ್ದಾರೆ. ಆತನಿಗಿನ್ನೂ ಕಿರಿಯ ವಯಸ್ಸು. ಆದರೆ ಆತನ ಬೌಲಿಂಗ್‌ನಲ್ಲಿನ ವೇಗ, ಸ್ವಿಂಗ್, ವೇಗದಲ್ಲಿನ ಬದಲಾವಣೆ, ಯಾರ್ಕರ್ ಎಸೆಯುವ ಸಾಮರ್ಥ್ಯ ನಿಜಕ್ಕೂ ಶ್ರೇಷ್ಠವಾದದ್ದು' ಎಂದು ವಾಟ್ಸನ್ ಬೂಮ್ರಾ ಬೌಲಿಂಗ್ ಬಗ್ಗೆ ಹೊಗಳಿಕೆಯ ಸುರುಮಳೆಗೈದಿದ್ದಾರೆ.

ಅದ್ಭುತ ದಾಖಲೆ ಹೊಂದಿರುತ್ತಾನೆ
ಬೂಮ್ರಾ ಎಸೆತವನ್ನು ಎದುರಿಸುವುದು ನಿಜಕ್ಕೂ ಸವಾಲು. ಅತನ ಬಳಿ ಸಾಕಷ್ಟು ವಿವಿಧ ರೀತಿಯ ಉತ್ಕೃಷ್ಠಮಟ್ಟದ ಬೌಲಿಂಗ್ ಆಯ್ಕೆಗಳು ಇವೆ. ಈತ ತನ್ನ ಟಿ20 ಕ್ರಿಕೆಟ್ ಕೆರಿಯರ್ ಅಂತ್ಯದ ವೇಳೆಗೆ ಶ್ರೇಷ್ಠ ಸಾಧನೆಯನ್ನು ಮಾಡಿರುತ್ತಾನೆ. ಅಷ್ಟು ಅದ್ಭುತವಾದ ಕೌಶಲ್ಯಗಳು ಬೂಮ್ರಾ ಬಳಿಯಲ್ಲಿ ಇದೆ ಎಂದು ಶೇನ್ ವಾಟ್ಸನ್ ಹೇಳಿದ್ದಾರೆ.

ಯಾರು ಟಾಪ್ 5 ಟಿ20 ಬೌಲರ್‌ಗಳು
ಜಸ್ಪ್ರೀತ್ ಬೂಮ್ರಾ ಹೊರತು ಪಡಿಸಿದರೆ ಈ ಪಟ್ಟಿಯಲ್ಲಿ ಶ್ರೀಲಂಕಾದ ವೇಗಿ ಲಸಿತ್ ಮಲಿಂಗ, ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ, ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಡ್ವೆಯ್ನ್ ಬ್ರಾವೋ ಹಾಗೂ ಸುನಿಲ್ ನರೈನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಎಲ್ಲಾ ಬೌಲರ್‌ಗಳ ವಿಶೇಷ ಸಾಧನೆಗಳ ಬಗ್ಗೆ ಶೇನ್ ವಾಟ್ಸನ್ ಕೊಂಡಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications