For Quick Alerts
ALLOW NOTIFICATIONS  
For Daily Alerts
 

ಜಮಿಮಾ ಬ್ಯಾಟಿಂಗ್, ರಾಧಾ ಬೌಲಿಂಗ್‌ಗೆ ಶರಣಾದ ವಿಂಡೀಸ್ ವನಿತಾ ತಂಡ

Jemimah, bowlers lead India to series win against West Indies

ಗಯಾನಾ, ನವೆಂಬರ್ 15: ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಗುರುವಾರ (ನವೆಂಬರ್ 14) ನಡೆದ ಭಾರತದ ಮಹಿಳೆಯರು ಮತ್ತು ವೆಸ್ಟ್ ಇಂಡೀಸ್ ಮಹಿಳೆಯರ ನಡುವಿನ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡ, 7 ವಿಕೆಟ್ ಸುಲಭ ಗೆಲುವನ್ನಾಚರಿಸಿದೆ.

ಜೆಮಿಮಾ ರೋಡ್ರಿಗಸ್ ಚತುರ ಬ್ಯಾಟಿಂಗ್, ರಾಧಾ ಯಾದವ್ ಮತ್ತು ದೀಪ್ತಿ ಶರ್ಮಾ ಬೌಲಿಂಗ್ ದಾಳಿಗೆ ವಿಂಡೀಸ್ ಮಹಿಳಾ ತಂಡ ಸೋಲೊಪ್ಪಿಕೊಂಡಿದೆ. ಇದರೊಂದಿಗೆ 5 ಪಂದ್ಯಗಳ ಈ ಟಿ20 ಸರಣಿಯಲ್ಲಿ ಭಾರತ ಈಗಾಗಲೇ 3 ಪಂದ್ಯಗಳನ್ನು ಜಯಿಸಿ ಸರಣಿ ವಶವಾಗಿಸಿಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ವನಿತಾ ತಂಡವನ್ನು ಭಾರತದ ಬೌಲಿಂಗ್ ಬಣ ಕಾಡಿತು. ಚೆಡಿಯನ್ ನೇಷನ್ 11, ಚಿನೆಲ್ಲೆ ಹೆನ್ರಿ 11, ಶೆನೆಟಾ ಗ್ರಿಮಂಡ್ 8 ರನ್‌ ಗಳಿಸಿದ್ದು ಬಿಟ್ಟರೆ ಇನ್ಯಾರೂ 8ಕ್ಕೂ ಹೆಚ್ಚು ರನ್ ಕೊಡುಗೆ ನೀಡಲಿಲ್ಲ. ವಿಂಡೀಸ್ ತಂಡ 20 ಓವರ್‌ಗೆ 9 ವಿಕೆಟ್ ಕಳೆದು 59 ರನ್ ಮಾಡಿತು.

ಗುರಿ ಬೆನ್ನತ್ತಿದ ಭಾರತದ ವನಿತೆಯರಿಂದ ಜೆಮಿಮಾ ರೋಡ್ರಿಗಸ್ 40 ರನ್ ಸೇರಿಸಿದರು. 16.4 ಓವರ್‌ಗೆ ಭಾರತ 3 ವಿಕೆಟ್ ನಷ್ಟದಲ್ಲಿ 60 ರನ್ ಮಾಡಿಸಿ ಗೆಲುವನ್ನಾಚರಿಸಿತು. ವಿಂಡೀಸ್ ಇನ್ನಿಂಗ್ಸ್‌ನಲ್ಲಿ ಭಾರತದ ರಾಧಾ ಯಾದವ್, ದೀಪ್ತಿ ಶರ್ಮಾ ತಲಾ 2 ವಿಕೆಟ್ ಪಡೆದು ಗಮನ ಸೆಳೆದರು. ಜೆಮಿಮಾ ಪಂದ್ಯಶ್ರೇಷ್ಠೆ ಎನಿಸಿದರು.

Story first published: Friday, November 15, 2019, 13:17 [IST]
Other articles published on Nov 15, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+