ವಿಶ್ವದಾಖಲೆ ಮಾಡಲು ಮಹಿಳಾ ಕ್ರಿಕೆಟರ್ ಜೂಲನ್ ಗೋಸ್ವಾಮಿಗೆ ಇನ್ನೆರಡೇ ಹೆಜ್ಜೆ ಬಾಕಿ

ಭಾರತ ಮಹಿಳಾ ಕ್ರಿಕೆಟ್‌ನ ಸೂಪರ್ ಸ್ಟಾರ್ ಬೌಲರ್ ಜೂಲನ್ ಗೋಸ್ವಾಮಿ ಪ್ರಸ್ತುತ ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ವಿಶ್ವದಾಖಲೆಯ ಸಮೀಪಕ್ಕೆ ತಲುಪಿದ್ದಾರೆ.
ಐಸಿಸಿ ಮಹಿಳಾ ವಿಶ್ವಕಪ್ 2022ರಲ್ಲಿ ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಅತ್ಯಂತ ಹಿರಿಯ ಆಟಗಾರ್ತಿಯಗಿರುವ ಜೂಲನ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲು ಇನ್ನೆರಡು ವಿಕೆಟ್ ಅಷ್ಟೇ ಬಾಕಿ ಉಳಿದಿದೆ.
ಗುರುವಾರ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜೂಲನ್ ಎರಡು ವಿಕೆಟ್ ಉರುಳಿಸಿಬಿಟ್ರೆ, ಆಸ್ಟ್ರೇಲಿಯಾದ ಲಿನ್ ಫುಲ್‌ಸ್ಟನ್‌ರ 39 ವಿಕೆಟ್‌ಗಳ ಸಾರ್ವಕಾಲಿಕ ದಾಖಲೆಯನ್ನ ಮುರಿಯಲಿದ್ದಾರೆ. ಪ್ರಸ್ತುತ ಜೂಲನ್ ಗೋಸ್ವಾಮಿ ವಿಶ್ವಕಪನಲ್ಲಿ ಒಟ್ಟು 38 ವಿಕೆಟ್‌ಗಳನ್ನ ಪಡೆದಿದ್ದು, ಇನ್ನೆರಡು ವಿಕೆಟ್ ಪಡೆದಿದ್ದೇ ಆದಲ್ಲಿ ದಾಖಲೆಯ ಪುಟದಲ್ಲಿ ತನ್ನ ಹೆಸರನನ್ನು ನಮೂದಿಸಲಿದ್ದಾರೆ.
39 ವರ್ಷದ ಜೂಲನ್ ಗೋಸ್ವಾಮಿ ಏಕದಿಕ ಕ್ರಿಕೆಟ್ ಫಾರ್ಮೆಟ್‌ನಲ್ಲಿ ಒಟ್ಟು 247 ವಿಕೆಟ್‌ಗಳನ್ನ ಕಬಳಿಸಿದ ಸಾಧನೆ ಮಾಡಿದ್ದಾರೆ. 196 ಪಂದ್ಯಗಳನ್ನ ಆಡಿರುವ ಗೋಸ್ವಾಮಿ ಏಕದಿನ ಕ್ರಿಕೆಟ್‌ನಲ್ಲಿ 250 ವಿಕೆಟ್‌ಗಳ ಮೈಲುಗಲ್ಲು ತಲುಪಲು ಇನ್ನು 3 ವಿಕೆಟ್‌ಗಳಷ್ಟೇ ಬಾಕಿ ಉಳಿದಿದೆ.
ಪ್ರಸ್ತುತ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಹಿರಿಯ ಬೌಲರ್ 26 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದಿದ್ದಾರೆ.
"ಪ್ರಾಮಾಣಿಕವಾಗಿ ಹೇಳುವುದಾದರೆ, ಈ ದಾಖಲೆಯ ಬಗ್ಗೆ ನನಗೆ ತಿಳಿದಿರಲಿಲ್ಲ. ತಂಡಕ್ಕೆ ಆರಂಭಿಕ ಉತ್ತಮ ಆರಂಭವನ್ನು ಒದಗಿಸುವುದು ನನ್ನ ಕೆಲಸವಾಗಿದೆ. ನನಗೆ, ತಂಡದ ಯಶಸ್ಸಿಗೆ ಕೊಡುಗೆ ನೀಡುವುದು ಮುಖ್ಯವಾಗಿದೆ" ಎಂದು ಜೂಲನ್ ಗೋಸ್ವಾಮಿ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯನ್ನಾಡಿರುವುದು ವಿಶ್ವಕಪ್‌ನಲ್ಲಿ ಎಷ್ಟು ನೆರವಾಗಲಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಜೂಲನ್ ಗೋಸ್ವಾಮಿ '' ಏಕದಿನ ಸರಣಿ ಹಾಗೂ ವಿಶ್ವಕಪ್‌ನ ಸ್ಪರ್ಧೆ ವಿಭಿನ್ನವಾಗಿರುವ ಹಂತವಾಗಿದೆ. ಭಾರತ 1-4 ಅಂತರದಲ್ಲಿ ಏಕದಿನ ಸರಣಿ ಸೋತಿದ್ದರೂ ಸಹ ವಿಶ್ವಕಪ್ ಪಂದ್ಯ ವಿಭಿನ್ನವಾಗಿರುತ್ತದೆ'' ಎಂದಿದ್ದಾರೆ.
ಹ್ಯಾಮಿಲ್ಟನ್‌ನಲ್ಲಿ ನಾಳೆ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ವನಿತೆಯರು ತನ್ನ ಗೆಲುವಿನ ಓಟ ಮುಂದುವರಿಸುವ ಲೆಕ್ಕಾಚಾರ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications