For Quick Alerts
ALLOW NOTIFICATIONS  
For Daily Alerts
 

ಸಚಿನ್‌ ತೆಂಡುಲ್ಕರ್‌ ಜೊತೆ ಎಲೈಟ್‌ ಕ್ಲಬ್‌ ಸೇರಿದ ಜೋ ರೂಟ್‌

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಮೂರನೇ ಟೆಸ್ಟ್‌ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್‌ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದೆ. ನಾಲ್ಕನೇ ದಿನದ ಮೊದಲವಧಿಯಲ್ಲಿ ಟೀಮ್ ಇಂಡಿಯಾ 4 ವಿಕೆಟ್‌ ಕಬಳಿಸಿ, ಇಂಗ್ಲೆಂಡ್‌ಗೆ ಪೆಟ್ಟು ನೀಡಿತು. ಈ ವೇಳೆ ಧೃತಿ ಗೆಡದೆ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಸೂಪರ್ ಸ್ಟಾರ್ ಬ್ಯಾಟರ್‌ ಜೋ ರೂಟ್‌ ಇತಿಹಾಸದ ಪುಟಕ್ಕೆ ಎಂಟ್ರಿ ಪಡೆದಿದ್ದಾರೆ.

ಭಾನುವಾರ ನಾಲ್ಕನೇ ದಿನದಾಟವನ್ನು ಇಂಗ್ಲೆಂಡ್‌ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 2 ರನ್‌ಗಳಿಂದ ಆಟ ಮುಂದುವರಿಸಿತು. ಈ ವೇಳೆ ಇಂಗ್ಲೆಂಡ್ ತಂಡದ ಓಲಿ ಪೋಪ್ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಇಳಿದ ಜೋ ರೂಟ್‌ ತಂಡಕ್ಕೆ ಆಧಾರವಾದರು. ಇವರು ತಮ್ಮ ಅನುಭವವನ್ನು ಬಳಸಿಕೊಂಡು ಬ್ಯಾಟ್ ಮಾಡಿದರು. ಮೂರನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರೂಟ್‌ ಶತಕ ಬಾರಿಸಿ ಮಿಂಚಿದ್ದರು. ಎರಡನೇ ಇನಿಂಗ್ಸ್‌ನಲ್ಲೂ ಇಂಗ್ಲೆಂಡ್ ತಂಡಕ್ಕೆ ರೂಟ್‌ ಆಸರೆಯಾದರು.

Joe Root Joins Elite Club with Sachin Tendulkar 8000 Runs at No 4 in Tests

ಜೋ ರೂಟ್‌ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾ ದೊಡ್ಡ ದಾಖಲೆ ನಿರ್ಮಿಸಿದರು. ಈ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ 8 ಸಾವಿರ ರನ್‌ಗಳನ್ನು ಕಲೆ ಹಾಕಿದ ವಿಶ್ವದ ನಾಲ್ಕನೇ ಆಟಗಾರ ಹಾಗೂ ಇಂಗ್ಲೆಂಡ್ ತಂಡದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇಂಗ್ಲೆಂಡ್‌ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್‌ 4 ವಿಕೆಟ್‌ ಕಳೆದುಕೊಂಡು 98 ರನ್‌ ಸಿಡಿಸಿತ್ತು. ಈ ವೇಳೆ ಜೋ ರೂಟ್‌ 17 ರನ್‌ ಬಾರಿಸಿದರು. ಈ ಮೂಲಕ ಇವರು ಈ ಸಾಧನೆಯ ಪುಸ್ತಕಕ್ಕೆ ಎಂಟ್ರಿ ಪಡೆದರು.

ನಾಲ್ಕನೇ ಕ್ರಮಾಂಕದಲ್ಲಿ ರೂಟ್‌ ಸಾಧನೆ

ಜೋ ರೂಟ್‌ ನಾಲ್ಕನೇ ಕ್ರಮಾಂಕದಲ್ಲಿ 99 ಟೆಸ್ಟ್‌ ಪಂದ್ಯಗಳ 170 ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡಿ 8009 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 51.67ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಅಲ್ಲದೆ 25 ಶತಕ ಹಾಗೂ 37 ಅರ್ಧಶತಕಗಳನ್ನು ಇವರು ಬಾರಿಸಿದ್ದಾರೆ.

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅತಿ ಹೆಚ್ಚು ರನ್ ಬಾರಿಸಿದ ಕೀರ್ತಿ ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್‌ ಸಚಿನ್ ತೆಂಡುಲ್ಕರ್ ಅವರಿಗೆ ಸಲ್ಲುತ್ತದೆ. ಸಚಿನ್ ತೆಂಡುಲ್ಕರ್‌ 179 ಪಂದ್ಯಗಳಲ್ಲಿ ನಾಲ್ಕನೇ ಸ್ಥಾನದಲ್ಲಿ ಬ್ಯಾಟ್ ಮಾಡಿ 13,492 ರನ್ ಸಿಡಿಸಿದ್ದಾರೆ.

ನಾಲ್ಕನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ಸ್‌

ಸಚಿನ್ ತೆಂಡುಲ್ಕರ್, ಭಾರತ, 179 ಪಂದ್ಯ, 13,492 ರನ್
ಮಹೇಲ್ ಜಯವರ್ಧನೆ, ಶ್ರೀಲಂಕಾ, 124 ಪಂದ್ಯ, 9,509 ರನ್
ಜಾಕ್‌ ಕಾಲಿಸ್‌, ದಕ್ಷಿಣ ಆಫ್ರಿಕಾ, 111 ಪಂದ್ಯ, 9,033 ರನ್
ಜೋ ರೂಟ್‌, ಇಂಗ್ಲೆಂಡ್‌, 99 ಪಂದ್ಯ, 8,009* ರನ್
ವಿರಾಟ್‌ ಕೊಹ್ಲಿ, ಭಾರತ, 99 ಪಂದ್ಯ, 7,564 ರನ್
ಬ್ರಿಯೆನ್ ಲಾರಾ, ವೆಸ್ಟ್‌ ಇಂಡೀಸ್‌, 91 ಪಂದ್ಯ, 7,535 ರನ್

Story first published: Sunday, July 13, 2025, 19:13 [IST]
Other articles published on Jul 13, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+