For Quick Alerts
ALLOW NOTIFICATIONS  
For Daily Alerts
 

PAK vs ENG Test: ಜೋ ರೂಟ್ ಇತಿಹಾಸ ಸೃಷ್ಟಿಸಲು 27 ರನ್ ಅವಶ್ಯಕ

ಪ್ರಸ್ತುತ ಇಂಗ್ಲೆಂಡ್ ತಂಡ ಪಾಕಿಸ್ತಾನ ಪ್ರವಾಸದಲ್ಲಿದೆ. ಪಾಕಿಸ್ತಾನ ವಿರುದ್ಧ ಮೂರು ಪಂದ್ಯ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ಆರಂಭಿಸಿದೆ. ಮೊದಲ ಟೆಸ್ಟ್ ಪಂದ್ಯ ಸೋಮವಾರ ಮುಲ್ತಾನ್‌ನಲ್ಲಿ ಶುರುವಾಗಿದೆ. ಈ ಪಂದ್ಯದಲ್ಲಿ ಪಾಕಿಸ್ತಾನದ ನಾಯಕ ಶಾನ್ ಮಸೂದ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದು, ಆತಿಥೇಯ ತಂಡ ಮೊದಲ ದಿನ 4 ವಿಕೆಟ್‌ಗೆ 328 ರನ್ ಗಳಿಸಿದೆ.

ಶಾನ್ ಮಸೂದ್ (151) ರನ್ ಮತ್ತು ಅಬ್ದುಲ್ಲಾ ಶಫೀಕ್ (102) ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಮಾಜಿ ನಾಯಕ ಬಾಬರ್ ಅಜಮ್ 30 ರನ್ ಕಲೆ ಹಾಕಿ ಔಟಾದರೆ, ಸ್ಯಾಮ್ ಅಯೂಬ್ 4 ರನ್ ಗಳಿಸಿ ವಿಕೆಟ್‌ ಕಳೆದುಕೊಂಡರು. ಸೌದ್ ಶಕೀಲ್ ಅಜೇಯ 44 ರನ್ ಗಳಿಸಿದ್ದು, ನಸೀಮ್ ಶಾ 2 ರನ್ ಕಲೆ ಹಾಕಿ ಕ್ರೀಸ್‌ನಲ್ಲಿ ಉಳಿದಿದ್ದಾರೆ.

Joe Root needs 27 runs to create history in World Test Championship

ಇತ್ತೀಚೆಗೆ ಪಾಕಿಸ್ತಾನ ತವರಿನಲ್ಲಿ ಬಾಂಗ್ಲಾದೇಶದ ವಿರುದ್ಧ 0-2 ಅಂತರದಲ್ಲಿ ಸೋಲು ಅನುಭವಿಸಿದೆ. ಇದೀಗ ಶಾನ್ ಮಸೂದ್ ನೇತೃತ್ವದ ಪಾಕಿಸ್ತಾನ ತಂಡಕ್ಕೆ ಇಂಗ್ಲೆಂಡ್ ಸೋಲಿಸುವುದು ಕಷ್ಟದ ಕೆಲಸ. ಈ ಟೆಸ್ಟ್ ಸರಣಿಯಲ್ಲಿ ಹಲವು ಆಟಗಾರರು ದಾಖಲೆ ಸೃಷ್ಟಿಸಲು ರೆಡಿಯಾಗಿದ್ದಾರೆ. ಅದರಲ್ಲೂ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (ಡಬ್ಲ್ಯೂಟಿಸಿ) ಇತಿಹಾಸ ಸೃಷ್ಟಿಸುವ ಸನಿಹದಲ್ಲಿದ್ದಾರೆ.

ದಾಖಲೆ ಸನಿಹ ರೂಟ್

ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ 27 ರನ್ ಗಳಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಸೃಷ್ಟಿಸಲಿದ್ದಾರೆ. ಡಬ್ಲ್ಯೂಟಿಸಿಯಲ್ಲಿ ರೂಟ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಅವರು 58 ಪಂದ್ಯಗಳಲ್ಲಿ 4973 ರನ್ ಗಳಿಸಿದ್ದು, 16 ಭರ್ಜರಿ ಶತಕಗಳನ್ನು ಸಿಡಿಸಿದ್ದಾರೆ. ಈಗ ಅವರು 27 ರನ್ ಗಳಿಸಿದರೆ ಡಬ್ಲ್ಯೂಟಿಸಿಯಲ್ಲಿ 5 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಆಗಲಿದ್ದಾರೆ. ರೂಟ್ ಅವರ ಪ್ರತಿಸ್ಪರ್ಧಿಗಳಾದ ಭಾರತದ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಕೂಡ ಈ ದಾಖಲೆಯಿಂದ ದೂರ ಉಳಿದಿದ್ದಾರೆ.

ಡಬ್ಲ್ಯೂಟಿಸಿ ಇತಿಹಾಸದಲ್ಲಿ ಸ್ಮಿತ್ 45 ಪಂದ್ಯಗಳನ್ನು ಆಡಿದ್ದು, 3486 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ 9 ಶತಕ ಮತ್ತು 17 ಅರ್ಧ ಶತಕಗಳಿವೆ. ಕೇನ್ ವಿಲಿಯಮ್ಸನ್ 25 ಪಂದ್ಯಗಳಿಂದ 2427 ರನ್ ಕಲೆ ಹಾಕಿದ್ದಾರೆ. ಅವರು 10 ಶತಕ ಮತ್ತು 4 ಅರ್ಧ ಶತಕಗಳನ್ನು ಹೊಂದಿದ್ದಾರೆ. ಕೊಹ್ಲಿ 38 ಪಂದ್ಯಗಳಲ್ಲಿ 2334 ರನ್ ಗಳಿಸಿದ್ದಾರೆ. ಅವರು 4 ಶತಕ ಮತ್ತು 10 ಅರ್ಧ ಶತಕಗಳನ್ನು ಹೊಡೆದಿದ್ದಾರೆ.

ಪಾಕಿಸ್ತಾನಕ್ಕೆ ಗೆಲುವು ಅನಿವಾರ್ಯ

ಇಂಗ್ಲೆಂಡ್ ವಿರುದ್ಧದ ಈ ಟೆಸ್ಟ್ ಸರಣಿಯು ಪಾಕಿಸ್ತಾನಕ್ಕೆ ಮಹತ್ವದ್ದಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಲುಪುವ ಸಾಧ್ಯತೆ ಕಡಿಮೆ ಇದೆ. ಆದರೆ ರೇಸ್‌ನಲ್ಲಿ ಉಳಿಯಲು, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗಳನ್ನು ಗೆಲ್ಲಬೇಕಿದೆ.

Story first published: Tuesday, October 8, 2024, 11:11 [IST]
Other articles published on Oct 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+