Joe Root: ಅಪಾಯದಲ್ಲಿದೆ ಸಚಿನ್ ದಾಖಲೆ: ಇಂಗ್ಲೆಂಡ್ ಆಟಗಾರ ತುಂಬ ಸನಿಹ
ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಅಂಗಳದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಈ ದಾಖಲೆಗಳನ್ನು ಅಳಿಸುವುದು ತುಂಬ ಕಷ್ಟ ಎಂದೇ ಹೇಳಲಾಗುತ್ತದೆ. ಇನ್ನು ಹಲವು ದಾಖಲೆಗಳಿಗೆ ಈಗ ಅಪಾಯ ಕಾದಿದೆ. ಈ ದಾಖಲೆಯ ಸನಿಹಕ್ಕೆ ಇಂಗ್ಲೆಂಡ್ ತಂಡದ ಅನುಭವಿ ಆಟಗಾರ ಜೋ ರೂಟ್ ಬಂದು ನಿಂತಿದ್ದಾರೆ.
ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಡುವಣ ಟೆಸ್ಟ್ ಪಂದ್ಯಗಳು ನಡೆಯುತ್ತಿವೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಮುಗಿದಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ಇಂಗ್ಲೆಂಡ್ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ತಂಡದ ಭರವಸೆಯ ಆಟಗಾರ ಜೋ ರೂಟ್ ಗೆಲುವಿನಲ್ಲಿ ಮಿಂಚಿದರು. ಅಲ್ಲದೆ ಈ ವೇಳೆ ಅರ್ಧಶತಕ ಬಾರಿಸಿ ಅಬ್ಬರಿಸಿದ್ದಾರೆ.

ಅಪಾಯದಲ್ಲಿದೆ ಸಚಿನ್ ದಾಖಲೆ
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರ್ಭಟಿಸುವ ಮೂಲಕ ಜೋ ರೂಟ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಈಗಾಗಲೇ 64 ಅರ್ಧಶತಕಗಳನ್ನು ಜೋ ರೂಟ್ ಬಾರಿಸಿದ್ದಾರೆ. ಈ ಮೂಲಕ ದಿಗ್ಗಜ ಆಟಗಾರರ ದಾಖಲೆಗೆ ಅಪಾಯ ಎದುರಾಗಿದೆ. ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆಯುವತ್ತ ಜೋ ರೂಟ್ ಕಣ್ಣು ನೆಟ್ಟಿದ್ದಾರೆ. ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಗೂ ಈಗ ಅಪಾಯ ಎದುರಾಗಿದೆ. ಸಚಿನ್ ಅವರ ದಾಖಲೆಯನ್ನು ಜೋ ರೂಟ್ ಮುರಿಯಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ. ಯಾವ ಸಚಿನ್ ದಾಖಲೆಯನ್ನು ಸಚಿನ್ ಮುರಿಯಬಲ್ಲರು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬಹುದು.
ಟೆಸ್ಟ್‌ನಲ್ಲಿ ಸಚಿನ್ ಬಾರಿಸಿದ ಅರ್ಧಶತಕ ಎಷ್ಟು?
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿರುವ ಆಟಗಾರ ಎಂಬ ಹೆಗ್ಗಳಿಕೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಕುತ್ತದೆ. ಇವರು 200 ಟೆಸ್ಟ್ ಪಂದ್ಯಗಳಲ್ಲಿ 68 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್‌ನ ಶಿವನಾರಯಣ್ ಚಂದ್ರಪಾಲ್ ಇದ್ದು, ಇವರು ಟೆಸ್ಟ್‌ನಲ್ಲಿ 66 ಅರ್ಧಶತಕ ಬಾರಿಸಿದ್ದಾರೆ. ಜೋ ರೂಟ್ ಅವರ ಭರ್ಜರಿ ಪ್ರದರ್ಶನದ ಪ್ರಭಾವದಿಂದ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಅಳಿಸಿ ಹಾಕುವ ಸನಿಹಾದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರೂಟ್ ಯಾರ ದಾಖಲೆಗಳನ್ನು ಮುರಿದಿದ್ದಾರೆ?
ಇಂಗ್ಲೆಂಡ್ ಆಟಗಾರ ಜೋ ರೂಟ್ ಅವರಿಗೆ 33 ವರ್ಷ.. ಇವರು ಮುಂದಿನ ಕೆಲವು ವರ್ಷಗಳ ಕಾಲ ಇಂಗ್ಲೆಂಡ್ ಪರ ಆಡುವುದು ಪಕ್ಕಾ.. ಹೀಗಾಗಿ ಅವರ ನಿಶ್ಚಿತವಾಗಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಬಹುದು ಎಂಬ ಲೆಕ್ಕಾಚಾರ ನಡೆಯದಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ವಿಚಾರದಲ್ಲಿ ಜೋ ರೂಟ್ ಭಾರತ ತಂಡದ ಮಾಜಿ ನಾಯಕ ಮತ್ತು ಕೋಚ್ ರಾಹುಲ್ ದ್ರಾವಿಡ್, ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ಮತ್ತು ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ರಾಹುಲ್ ದ್ರಾವಿಡ್ ಮತ್ತು ಅಲನ್ ಬಾರ್ಡರ್ 63-63 ಅರ್ಧಶತಕಗಳನ್ನು ಬಾರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications