Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Joe Root: ಟೆಸ್ಟ್‌ನಲ್ಲಿ 38ನೇ ಶತಕ ಬಾರಿಸಿದ ರೂಟ್‌: ಇಂಗ್ಲೆಂಡ್‌ ಬ್ಯಾಟರ್‌ ಮುಡಿಗೆ ದಾಖಲೆಗಳ ಗರಿ

ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯ ಮ್ಯಾಂಚೆಸ್ಟರ್‍ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಸ್ಟಾರ್ ಆಟಗಾರ ಜೋ ರೂಟ್ ಅಬ್ಬರಿಸಿದ್ದಾರೆ. ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿರುವ ರೂಟ್‌, ತಂಡಕ್ಕೆ ಆಧಾರವಾಗಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ರೂಟ್‌ ಇಂಗ್ಲೆಂಡ್ ಪರ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಈ ಮೂಲಕ ರೂಟ್‌ ಹಲವು ದಾಖಲೆಗಳಿಗೆ ತಮ್ಮ ಹೆಸರನ್ನು ನಮೂದಿಸಿದರು.

ಇಂಗ್ಲೆಂಡ್‌ ಶುಕ್ರವಾರ ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 225 ರನ್‌ಗಳಿಂದ ಆಟ ಮುಂದುವರಿಸಿತು. ಈ ವೇಳೆ ಭರವಸೆಯ ಆಟಗಾರ ಜೋ ರೂಟ್‌ ಅಜೇಯ 11 ರನ್‌ಗಳಿಂದ ಆಟ ಮುಂದುವರಿಸಿದರು. ಇವರು ತಮ್ಮ ಕ್ಲಾಸಿಕ್‌ ಆಟವನ್ನು ಮುಂದುವರೆಸಿದರು. ಇವರು ತಮ್ಮ ನೈಜ್ಯ ಆಟವನ್ನು ಆಡಿ ರನ್‌ಗಳನ್ನು ಕಲೆ ಹಾಕುತ್ತಾ ಸಾಗಿದರು. ಇವರು ಇನಿಂಗ್ಸ್‌ನ 96ನೇ ಓವರ್‌ನ ಮೊದಲ ಎಸೆತದಲ್ಲಿ ಫೈನ್‌ ಲೆಗ್‌ ನತ್ತ ಚೆಂಡನ್ನು ತಳ್ಳಿ ಬೌಂಡರಿ ಬಾರಿಸುತ್ತಿದ್ದಂತೆ ಸಂಭ್ರಮ ಮುಗಿಲು ಮುಟ್ಟಿತು. ಈ ಮೂಲಕ ಜೋ ರೂಟ್ ಟೆಸ್ಟ್‌ ಕ್ರಿಕೆಟ್‌ನಲ್ಲಿ 38ನೇ ಶತಕ ಬಾರಿಸಿ ಮಿಂಚಿದರು. ಇವರು ಈ ಅಮೋಘ ಇನಿಂಗ್ಸ್‌ನಿಂದ ಹಲವು ದಾಖಲೆಗಳನ್ನು ನಿರ್ಮಿಸಿದರು.

Joe Root s Record-Breaking 38th Test Century Powers England Surpasses Ponting s Run Tally

ಲಾರ್ಡ್ಸ್ ಅಂಗಳದಲ್ಲೂ ಶತಕ ಬಾರಿಸಿ ಮಿಂಚಿದ್ದ ಜೋ ರೂಟ್, ಮ್ಯಾಂಚೆಸ್ಟರ್‌ನಲ್ಲಿ ಮೂರಂಕಿ ಮುಟ್ಟಿದರು. ಈ ಮೂಲಕ ರೂಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ತವರಿನಲ್ಲಿ 23ನೇ ಶತಕ ಬಾರಿಸಿದರು. ಈ ಮೂಲಕ ಶ್ರೀಲಂಕದ ದಿಗ್ಗಜ ಬ್ಯಾಟರ್‌ ಮಹೇಲ್ ಜಯವರ್ಧನೆ, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಹಾಗೂ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ರಿಕ್ಕಿ ಪಾಟಿಂಗ್ ಅವರ ದಾಖಲೆಯ ಸಮಕ್ಕೆ ನಿಂತರು. ಇನ್ನು ಭಾರತದ ಸಚಿನ್ ತೆಂಡುಲ್ಕರ್ ತವರಿನಲ್ಲಿ 22 ಶತಕ ಬಾರಿಸಿದ್ದಾರೆ.

ದಾಖಲೆಯ ಶತಕ

ಈ ಅಮೋಘ ಇನಿಂಗ್ಸ್‌ ಮೂಲಕ ಜೋ ರೂಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ಬಡ್ತಿ ಪಡೆದಿದ್ದಾರೆ. ಇವರು ದಿಗ್ಗಜ ಆಟಗಾರರಾದ ಜಾಕ್‌ ಕಾಲಿಸ್‌, ಪಾಂಟಿಂಗ್ ಅವರ ದಾಖಲೆಯನ್ನು ಮೀರಿ ನಿಂತರು. ಈ ಇಬ್ಬರೂ ದಿಗ್ಗಜರು ಟೆಸ್ಟ್ ಕ್ರಿಕೆಟ್‌ನಲ್ಲಿ 103 ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಸಚಿನ್ ತೆಂಡುಲ್ಕರ್‌ ಮುಂಚೂಣಿಯಲ್ಲಿದ್ದಾರೆ. ಸಚಿನ್‌ ತೆಂಡುಲ್ಕರ್ ಟೆಸ್ಟ್‌ ಕ್ರಿಕೆಟ್‌ನಲ್ಲಿ 119 ಬಾರಿ 50ಕ್ಕೂ ಹೆಚ್ಚು ಬಾರಿ ರನ್ ಸಿಡಿಸಿದ್ದಾರೆ. ಸಚಿನ್‌ ಅವರ ದಾಖಲೆಯನ್ನು ಮುರಿಯಲು ರೂಟ್ ಅವರಿಗೆ ಇನ್ನು 15 ಐವತ್ತು ಪ್ಲಸ್ ಸ್ಕೋರ್‌ ಅವಶ್ಯಕ ಇದೆ. ರೂಟ್ ಅವರ ಬ್ಯಾಟಿಂಗ್ ಫಾರ್ಮ್‌ ನೋಡಿದರೆ, ಸಚಿನ್‌ ಅವರ ದಾಖಲೆಗೆ ಅಪಾಯ ಎದುರಾಗಿದೆ.

Joe Root s Record-Breaking 38th Test Century Powers England Surpasses Ponting s Run Tally

ಜೋ ರೂಟ್‌ ತಮ್ಮ ಕ್ಲಾಸಿಕ್ ಬ್ಯಾಟಿಂಗ್‌ನಿಂದಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಇವರ ಬುಟ್ಟಿಯಲ್ಲಿ ಸದ್ಯ 13400 ರನ್‌ಗಳಿವೆ. ಈ ಮೂಲಕ ಇವರು ರಿಕ್ಕಿ ಪಾಟಿಂಗ್ (13378) ಅವರ ದಾಖಲೆಯನ್ನು ಅಳಿಸಿ ಹಾಕಿದರು. ಸದ್ಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡುಲ್ಕರ್ (15921) ಹೆಸರಿನಲ್ಲಿದೆ.

ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಡ್ರಿಂಕ್ಸ್‌ ವಿರಾಮದ ವೇಳೆಗೆ 4 ವಿಕೆಟ್‌ಗೆ 499 ರನ್‌ ಕಲೆ ಹಾಕಿದೆ. ಈ ವೇಳೆ ಜೋ ರೂಟ್ ಅಜೇಯ 150 ರನ್ ಸಿಡಿಸಿದ್ದಾರೆ.

Story first published: Friday, July 25, 2025, 22:01 [IST]
Other articles published on Jul 25, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+