ವಿಂಡೀಸ್ ವಿರುದ್ಧದ ನಿರ್ಣಾಯಕ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಸೇರಿದ ಆರ್ಚರ್

ಲಂಡನ್, ಜುಲೈ 21: ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ತಂಡ ಸೇರಿಕೊಂಡಿದ್ದಾರೆ. ಆರ್ಚರ್ ಎರಡನೇ ಬಾರಿಗೆ ಕೊರೊನಾವೈರಸ್ ಪರೀಕ್ಷೆಗೆ ಒಳಗಾಗಿದ್ದರು. ಅವರ ಫಲಿತಾಂಶ ನೆಗೆಟಿವ್ ಬಂದಿದ್ದರಿಂದ ತಂಡಕ್ಕೆ ಮರಳಿದ್ದಾರೆ.
ಕೆರಿಬಿಯನ್ನರ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆಡಿದ್ದ ಜೋಫ್ರಾ ಆರ್ಚರ್, ಜೈವಿಕ ಸುರಕ್ಷಾ ಪರಿಸರವನ್ನು ತೊರೆದು, ಹೋವ್‌ನಲ್ಲಿರುವ ತನ್ನ ಮನೆಗೆ ಅನಧಿಕೃತವಾಗಿ ಪ್ರಯಾಣ ಬೆಳೆಸಿದ್ದರು. ಇದು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್‌ನ ಕೆಂಗಣ್ಣಿಗೆ ಕಾರಣವಾಗಿತ್ತು. ಇದೇ ಕಾರಣಕ್ಕಾಗಿ ಆರ್ಚರ್ ಅವರನ್ನು ದ್ವಿತೀಯ ಟೆಸ್ಟ್‌ನಿಂದ ಕೈ ಬಿಡಲಾಗಿತ್ತು.
ಜೈವಿಕ ಸುರಕ್ಷಾ ಸ್ಥಳದಿಂದ ಅನಧಿಕೃತವಾಗಿ ತೆರಳಿದ್ದ ಆರ್ಚರ್ ಅವರನ್ನು ಓಲ್ಡ್ ಟ್ರಾಫರ್ಡ್‌ನಲ್ಲಿರುವ ಹೋಟೆಲ್‌ನಲ್ಲಿ 5 ದಿನಗಳ ಕಾಲ ಐಸೊಲೇಶನ್‌ನಲ್ಲಿಡಲಾಗಿತ್ತು. ಅಷ್ಟೇ ಅಲ್ಲ, ನಿಯಮ ಉಲ್ಲಂಘಿಸಿ ಉದ್ಧಟತನ ತೋರಿಸಿದ್ದಕ್ಕಾಗಿ ಆರ್ಚರ್‌ಗೆ $19,000 (14,17,411 ರೂ.) ದಂಡ ಕೂಡ ವಿಧಿಸಲಾಗಿತ್ತು.
ಆರ್ಚರ್ ಜೊತೆಗೆ ಇಂಗ್ಲೆಂಡ್ ತಂಡದಲ್ಲೀಗ ಒಟ್ಟಿಗೆ 6 ಮಂದಿ ವೇಗಿಗಳು ಇದ್ದಂತಾಗಿದೆ. ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್, ಸ್ಯಾಮ್ ಕರನ್ ದ್ವಿತೀಯ ಟೆಸ್ಟ್‌ನಲ್ಲಿ ಆಡಿ ತಂಡದ ಗೆಲುವಿಗೆ ಕಾರಣವಾಗಿದ್ದರು. ಇನ್ನು ಜೇಮ್ಸ್ ಆ್ಯಂಡರ್ಸನ್, ಮಾರ್ಕ್ ವುಡ್ ಮತ್ತು ಜೋಫ್ರಾ ಆರ್ಚರ್ ಮೊದಲ ಟೆಸ್ಟ್ ಬಳಿಕ ಸಂಪೂರ್ಣ ವಿಶ್ರಾಂತಿಯಲ್ಲಿದ್ದರು.
ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆರಂಭಿಕ ಪಂದ್ಯವನ್ನು ವೆಸ್ಟ್ ಇಂಡೀಸ್ ಗೆದ್ದಿತ್ತು. ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್ ಜಯಿಸಿದ್ದರಿಂದ ಸರಣಿಯೀಗ 1-1ರಿಂದ ಸಮಬಲವಾಗಿದೆ. ಹೀಗಾಗಿ ಮೂರನೇ ಟೆಸ್ಟ್ ಕುತೂಹಲ ಮೂಡಿಸಿದೆ. ಇತ್ತಂಡಗಳ ನಿರ್ಣಾಯಕ ಟೆಸ್ಟ್ ಜುಲೈ 24ರಂದು ಮ್ಯಾನ್ಚೆಸ್ಟರ್‌ನಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications