ಜೋಫ್ರಾ ಆರ್ಚರ್‌ಗೆ ಎರಡನೇ ಬಾರಿಯೂ ಕೊರೊನಾವೈರಸ್ ನೆಗೆಟಿವ್

ಲಂಡನ್, ಜೂನ್ 25: ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್‌ಗೆ ಎರಡನೇ ಬಾರಿ ನಡೆದ ಕೊರೊನಾ ವೈರಸ್ ಪರೀಕ್ಷೆಯ ಫಲಿತಾಂಶವೂ ನೆಗೆಟಿವ್ ಎಂದು ಬಂದಿದೆ. ಕೊರೊನಾ ಆತಂಕ ಕ್ಲೀಯರ್ ಮಾಡಿಕೊಂಡಿರುವ ಆರ್ಚರ್, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗಾಗಿ ಅಭ್ಯಾಸ ನಡೆಸುತ್ತಿರುವ ಇಂಗ್ಲೆಂಡ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
25ರ ಹರೆಯದ ಜೋಫ್ರಾ ಆರ್ಚರ್ ನಿವಾಸದಲ್ಲಿ ಒಬ್ಬರಿಗೆ ಅನಾರೋಗ್ಯ ಕಾಡಿಸಿತ್ತು. ಹೀಗಾಗಿ ಎರಡನೇ ಬಾರಿಗೆ ಕೊರೊನಾ ಪರೀಕ್ಷೆ ಸನಡೆಸಲು ನಿರ್ಧರಿಸಿದ್ದ ಆರ್ಚರ್, ತಂಡದ ಅಭ್ಯಾಸದಲ್ಲಿ ಪಾಲ್ಗೊಂಡಿರಲಿಲ್ಲ. ಮೊದಲ ಬಾರಿಯೂ ಆರ್ಚರ್ ಫಲಿತಾಂಶ ನೆಗೆಟಿವ್ ಬಂದಿತ್ತು. ಎರಡನೇ ಬಾರಿಯೂ ಅದೇ ಬಂದಿದೆ.
'ಜೋಫ್ರಾ ಆರ್ಚರ್ ಅವರ ಕೋವಿಡ್-19 ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬಂದಿದೆ. ಹೀಗಾಗಿ ಅವರಿನ್ನು ಸೌತಾಂಪ್ಟನ್‌ನ ಏಜಸ್ ಬೌಲ್‌ನಲ್ಲಿ ಇಂಗ್ಲೆಂಡ್ ತಂಡದ ಅಭ್ಯಾಸದಲ್ಲಿ ಸೇರಿಕೊಳ್ಳಲಿದ್ದಾರೆ,' ಎಂದು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಟ್ವೀಟ್ ಮೂಲಕ ಗುರುವಾರ (ಜೂನ್ 25) ತಿಳಿಸಿದೆ.
ಅಂದ್ಹಾಗೆ ಇಂಗ್ಲೆಂಡ್ ಯಾವುದೇ ಆಟಗಾರರಿಗೆ ಕೊರೊನಾ ವೈರಸ್ ಇಲ್ಲ. ಆಟಗಾರರು, ಅಧಿಕಾರಿಗಳು, ಸಿಬ್ಬಂದಿ ಎಲ್ಲರೂ ಸೇರಿ ಒಟ್ಟಿಗೆ 702 ಮಂದಿಗೆ ನಡೆಸಿದ ಪರೀಕ್ಷೆ ನೆಗೆಟಿವ್ ಬಂದಿದೆ ಎಂದು ಇಸಿಬಿ ಮಾಹಿತಿ ನೀಡಿದೆ. ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿ ಜುಲೈ 8ರಿಂದ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications