For Quick Alerts
ALLOW NOTIFICATIONS  
For Daily Alerts
 

Afghanistan: ಇಂಗ್ಲೆಂಡ್ ಆಯ್ತು, ಈಗ ನಿಮ್ಮ ಸರದಿ: ಆಸೀಸ್‌ಗೆ ಎಚ್ಚರಿಕೆ ನಿಡಿದ ಆಫ್ಘನ್ ಕೋಚ್‌

ಐಸಿಸಿ ಬಿಗ್ ಈವೆಂಟ್‌ಗಳಲ್ಲಿ ಅಫ್ಘಾನಿಸ್ತಾನ ದೊಡ್ಡ ಸಾಧನೆ ಮಾಡುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಹಿಂದೆ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಅಚ್ಚರಿಯ ಫಲಿತಾಂಶ ನೀಡಿದ್ದ ಆಫ್ಘನ್‌, ಟಿ20 ವಿಶ್ವಕಪ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಅಬ್ಬರಿಸಿತ್ತು. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಮತ್ತೊಮ್ಮೆ ಅಫ್ಘಾನಿಸ್ತಾನ 8 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ ಅಬ್ಬರಿಸಿದೆ.

ಇಂಗ್ಲೆಂಡ್ ವಿರುದ್ಧದ ಪಂದ್ಯದ ಡೆತ್ ಓವರ್‌ನಲ್ಲಿ ಮನಮೋಹಕ ಬೌಲಿಂಗ್ ದಾಳಿ ನಡೆಸಿದ ಅಫ್ಘಾನಿಸ್ತಾನ ಅಬ್ಬರಿಸಿದೆ. ಸದ್ಯ ತಂಡದ ಮನೋಸ್ಥೈರ್ಯ ಹೆಚ್ಚಾಗಿದೆ. ಲೀಗ್‌ ಹಂತದ ಮಹತ್ವದ ಪಂದ್ಯಕ್ಕಾಗಿ ಅಫ್ಘಾನಿಸ್ತಾನ ತಯಾರಿ ನಡೆಸಿದೆ. ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲುವು ಸಾಧಿಸಿದ್ದೇ ಆದಲ್ಲಿ, ಬಿ ಗುಂಪಿನಿಂದ ಸೆಮಿಫೈನಲ್‌ ಪ್ರವೇಶಿಸಬಹುದು. ಈ ಪಂದ್ಯಕ್ಕೂ ಮುನ್ನ ಅಫ್ಘಾನಿಸ್ತಾನ ತಂಡದ ಮುಖ್ಯ ಕೋಚ್‌ ಜೊನಾಥನ್ ಟ್ರಾಟ್ ಕೂಡ ಆಸ್ಟ್ರೇಲಿಯಾಕ್ಕೆ ಎಚ್ಚರಿಕೆ ನೀಡಿದ್ದಾರೆ.

Jonathan Trott s Afghanistan Shocks England Again Sets Sights on Australia in Champions Trophy

ಇಂಗ್ಲೆಂಡ್‌ ವಿರುದ್ಧ 8 ರನ್‌ಗಳಿಂದ ಗೆದ್ದ ಬಳಿಕ ಅಫ್ಘಾನಿಸ್ತಾನ ತಂಡದ ಆತ್ಮವಿಶ್ವಾಸ ಇಮ್ಮಡಿಯಾಗಿದೆ. ಅಫ್ಘಾನಿಸ್ತಾನ ಲೀಗ್‌ ಹಂತದ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾದ ಸವಾಲನ್ನು, ಆಫ್ಘಾನ್‌ ಎದುರಿಸಲಿದೆ. ಈ ಟೂರ್ನಿಯ ಫಲಿತಾಂಶವೇ ಈ ಗುಂಪಿನ ಸೆಮಿಫೈನಲ್‌ ಲಿಸ್ಟ್ ಯಾರ ಆಗಬಹುದು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲಿದೆ.

ಕೋಚ್‌ ಗುಡುಗು

ಬಿಗ್ ಮ್ಯಾಚ್‌ಗೂ ಮುನ್ನ ಆಸೀಸ್ ಕೋಚ್‌ ದೊಡ್ಡ ಹೇಳಿಕೆ ನೀಡಿದ್ದಾರೆ. "ನಾನು ನನ್ನ ಜವಾಬ್ದಾರಿಯನ್ನು ಹೊತ್ತ ಬಳಿಕ, ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳನ್ನು ಆಡಿದ್ದೇವೆ. ಈ ಮೂರು ಪಂದ್ಯಗಳಲ್ಲೂ ತಂಡ ಅದ್ಭುತ ಪ್ರದರ್ಶನ ನೀಡಿದೆ. ಯಾವ ತಂಡವೂ ನಮ್ಮ ತಂಡವನ್ನು ಹಗುರವಾಗಿ ಪರಿಗಣಿಸಬಾರದು. ನಾವು ಪೂರ್ಣ ಫಿಟ್ ಆಗಿ ಮೈದಾನಕ್ಕೆ ಇಳಿಯಲಿದ್ದೇವೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ನಮಗೆ ಪಂದ್ಯ ಗೆಲ್ಲುವ ಭರವಸೆ ಇದೆ. ನಮ್ಮ ತಂಡದ ಆಟಗಾರರಿಂದ ನಮಗೆ ಒಳ್ಳೆಯ ನಿರೀಕ್ಷೆಗಳು ಇವೆ ಎಂದು ಹೇಳಿದ್ದಾರೆ.

Take a Poll

ಅಫ್ಘಾನಿಸ್ತಾನ ತಂಡದ ಮುಂದಿನ ಪಂದ್ಯ ಫೆಬ್ರವರಿ 28 ರಂದು ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ, ಅಫ್ಘಾನಿಸ್ತಾನ ತಂಡವು ಸೆಮಿಫೈನಲ್‌ಗೆ ಟಿಕೆಟ್ ಪಡೆಯುವ ಗುರಿಯನ್ನು ಹೊಂದಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸೋತರೆ, ಟೂರ್ನಿಯಿಂದ ಹೊರಬೀಳಲಿದೆ. ಪ್ರಸ್ತುತ, ಅಫ್ಘಾನಿಸ್ತಾನ ತಂಡವು 2 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಅಫ್ಘಾನಿಸ್ತಾನ ತಂಡ ಚಾಂಪಿಯನ್ಸ್‌ ಟ್ರೋಫಿಯ ತನ್ನ ಲೀಗ್‌ ಹಂತದ ಕೊನೆಯ ಪಂದ್ಯವನ್ನು ಫೆ.28 ರಂದು ಆಡಲಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಉಪಾಂತ್ಯವನ್ನು ಪ್ರವೇಶಿಸುವ ಕನಸು ಅಫ್ಘಾನಿಸ್ತಾನ ತಂಡದ್ದಾಗಿದೆ. ಈ ಮೂಲಕ ಚೊಚ್ಚಲ ಚಾಂಪಿಯನ್‌ ಶಿಪ್‌ನಲ್ಲಿ ಅಮೋಘ ಸಾಧನೆ ಮಾಡುವ ಇರಾದೆಯನ್ನು ಹೊಂದಿದೆ.

ಅಂಕ ಪಟ್ಟಿ

"ಬಿ" ಗುಂಪಿನಲ್ಲಿ ಆಡಿದ 2 ಪಂದ್ಯಗಳಲ್ಲಿ 1 ಗೆಲುವು, 1 ಪಂದ್ಯ ರದ್ದಾಗಿದ್ದು ದಕ್ಷಿಣ ಆಫ್ರಿಕಾ 3 ಅಂಕಗಳೊಂದಿಗೆ ಭರ್ಜರಿ ನೆಟ್‌ ರನ್‌ ರೇಟ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ. ಇಷ್ಟೇ ಅಂಕಗಳೊಂದಿಗೆ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಇನ್ನು ಅಫ್ಘಾನಿಸ್ತಾನ ಟೂರ್ನಿಯಲ್ಲಿ ಒಂದು ಗೆಲುವು, ಒಂದು ಸೋಲು ಕಂಡಿದ್ದು 2 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಈ ಮೂರು ತಂಡಗಳಿಗೂ ಸೆಮೀಸ್‌ ತಲುಪುವ ಆಸೆ ಇದೆ. ಈ ವೇಳೆ ಇಂಗ್ಲೆಂಡ್‌ 2 ರಲ್ಲಿ 2 ಸೋಲು ಕಂಡಿದ್ದು ಲೀಗ್‌ ಹಂತದಲ್ಲೇ ಟೂರ್ನಿಗೆ ಗುಡ್ ಬಾಯ್‌ ಹೇಳಲಿದೆ.

Story first published: Thursday, February 27, 2025, 16:06 [IST]
Other articles published on Feb 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+