
ಟಿ20 ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಅವರು ನವೆಂಬರ್‌ನಲ್ಲಿ ನೀಡಿದ ಅದ್ಭುತ ಪ್ರದರ್ಶನವನ್ನು ಪರಿಗಣಿಸಿ ಮೊದಲ ಬಾರಿಗೆ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇನ್ನು ಪಾಕಿಸ್ತಾನ ಮಹಿಳಾ ತಂಡದ ಸಿದ್ರಾ ಅಮೀನ್ ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯ ಗೆಲುವಿನಲ್ಲಿ ಅವರ ಅದ್ಭುತ ಪ್ರದರ್ಶನಕ್ಕೆ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಸತತ ಎರಡನೇ ಬಾರಿಗೆ ಗೆದ್ದಿದ್ದಾರೆ.
ವಿಶ್ವ ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟರ್‌ಗಳಲ್ಲಿ ಒಬ್ಬರಾದ ಜೋಸ್ ಬಟ್ಲರ್, ಬ್ರಿಸ್ಬೇನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ನಾಟಕೀಯ 20 ರನ್‌ಗಳ ವಿಜಯದಲ್ಲಿ ನವೆಂಬರ್ ತಿಂಗಳನ್ನು ಅಬ್ಬರದಿಂದ ಪ್ರಾರಂಭಿಸಿದ್ದರು.
ಬಿಸಿಸಿಐನ ಕೇಂದ್ರ ಒಪ್ಪಂದ ಕಳೆದುಕೊಳ್ಳುವ ಸಂದಿಗ್ಧತೆಯಲ್ಲಿ ಈ ಆಟಗಾರರು; ಸೂರ್ಯ, ಗಿಲ್‌ಗೆ ಬಡ್ತಿ
ಜೋಸ್ ಬಟ್ಲರ್ ಅವರು ಇಂಗ್ಲೆಂಡ್‌ನ ಮತ್ತೊಬ್ಬ ಆಟಗಾರ ಆದಿಲ್ ರಶೀದ್ ಮತ್ತು ಪಾಕಿಸ್ತಾನದ ಶಾಹೀನ್ ಶಾ ಅಫ್ರಿದಿ ಅವರೊಂದಿಗಿನ ಕಠಿಣ ಪೈಪೋಟಿ ಮೀರಿ ನವೆಂಬರ್‌ನಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದರು.

ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡದ ವಿಕೆಟ್‌ಕೀಪರ್-ಬ್ಯಾಟರ್ ಕೆಲವು ನಿರ್ಣಾಯಕ ಪ್ರದರ್ಶನಗಳನ್ನು ನೀಡಿದರು ಮತ್ತು ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ 49 ಎಸೆತಗಳಲ್ಲಿ 80 ರನ್ ಗಳಿಸಿ ಮಿಂಚಿದರು.
ಅಲೆಕ್ಸ್ ಹೇಲ್ಸ್ ಜೊತೆಗಿನ ಅವರ 170 ರನ್‌ಗಳ ದಾಖಲೆಯ ಮುರಿಯದ ಆರಂಭಿಕ ಜೊತೆಯಾಟದಲ್ಲಿ ಇಂಗ್ಲೆಂಡ್ ಅಡಿಲೇಡ್‌ನಲ್ಲಿ 10 ವಿಕೆಟ್‌ಗಳ ಐತಿಹಾಸಿಕ ಗೆಲುವು ಸಾಧಿಸಿತು.
ಇನ್ನು ಫೈನಲ್ ಪಂದ್ಯದಲ್ಲಿ ಜೋಸ್ ಬಟ್ಲರ್ ಪಾಕಿಸ್ತಾನದ ಬೌಲಿಂಗ್ ದಾಳಿಯ ವಿರುದ್ಧ ಅಮೂಲ್ಯವಾದ 26 ರನ್ ಗಳಿಸಿ ಇಂಗ್ಲೆಂಡ್ ತಂಡವನ್ನು ತಮ್ಮ ಎರಡನೇ ಟಿ20 ವಿಶ್ವಕಪ್ ಟ್ರೋಫಿಗೆ ಮುನ್ನಡೆಸಿದರು.
ಐಸಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತನಾಡಿದ ಜೋಸ್ ಬಟ್ಲರ್, ತಮಗೆ ಮತ ಹಾಕಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ಇಂಗ್ಲೆಂಡ್ ನಾಯಕ ತಮ್ಮ ಸಹ ಆಟಗಾರರನ್ನು ಹೊಗಳಿದರು ಮತ್ತು ಅವರ ಪ್ರಯತ್ನದಿಂದಾಗಿ ಪ್ರಶಸ್ತಿ ಗೆದ್ದಿದ್ದೇನೆ. ತಾನು ತೊಡಗಿಸಿಕೊಂಡಿದ್ದ ಕ್ರಿಕೆಟ್‌ನ ಅತ್ಯುತ್ತಮ ತಿಂಗಳುಗಳಲ್ಲಿ ನವೆಂಬರ್ ಒಂದು ಎಂದು ಜೋಸ್ ಬಟ್ಲರ್ ಹೇಳಿದರು.
ಮಾಜಿ ಇಂಗ್ಲೆಂಡ್ ಅಂತಾರಾಷ್ಟ್ರೀಯ ಮತ್ತು ಐಸಿಸಿ ಆಟಗಾರ್ತಿ ತಿಂಗಳ ಮತದಾನ ಸಮಿತಿಯ ಸದಸ್ಯೆ ಲಿಡಿಯಾ ಗ್ರೀನ್ವೇ ಕೂಡ ಜೋಸ್ ಬಟ್ಲರ್ ಅವರನ್ನು ಹೊಗಳಿದರು ಮತ್ತು ಅವರು ಅರ್ಹ ವಿಜೇತರಾಗಿದ್ದಾರೆ ಎಂದು ತಿಳಿಸಿದರು.
ಇನ್ನು ಪಾಕಿಸ್ತಾನ ಮಹಿಳಾ ತಂಡದ ಬ್ಯಾಟರ್ ಸಿದ್ರಾ ಅಮೀನ್ ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ 277 ರನ್‌ಗಳನ್ನು ಗಳಿಸಿ. ಆರಂಭಿಕ ಬ್ಯಾಟರ್ ಅಮೀನ್ ಏಕದಿನ ಪಂದ್ಯಗಳಲ್ಲಿ ತನ್ನ ಅತ್ಯಧಿಕ 176 ಸ್ಕೋರ್‌ನೊಂದಿಗೆ ತಿಂಗಳನ್ನು ಪ್ರಾರಂಭಿಸಿದರು.
ಸಿದ್ರಾ ಅಮೀನ್ ಎರಡನೇ ಏಕದಿನ ಪಂದ್ಯದಲ್ಲಿ 93 ಎಸೆತಗಳಲ್ಲಿ ಅಜೇಯ 91 ರನ್ ಗಳಿಸಿದರು. ಈ ವೇಳೆ ಪಾಕಿಸ್ತಾನ ಒಂಬತ್ತು ವಿಕೆಟ್‌ಗಳ ಜಯ ಸಾಧಿಸಿತು.