Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಹರಾಜಿನಲ್ಲಿ ಅನ್‌ಸೋಲ್ಡ್‌: ಆಸೀಸ್‌ ಗೆಲುವಿನ 'ಜೋಶ್‌' ಹೆಚ್ಚಿಸಿದ W,0,W,0,W,0

ಇತ್ತೀಚಿಗೆ ದುಬೈನಲ್ಲಿ ನಡೆದ ಐಪಿಎಲ್‌ ಹರಾಜಿನಲ್ಲಿ ಅನ್‌ಸೋಲ್ಡ್ ಆದ ಆಸ್ಟ್ರೇಲಿಯಾದ ಸ್ಟಾರ್ ಬೌಲರ್‌, ಟೆಸ್ಟ್‌ ಮ್ಯಾಚ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಆಸ್ಟ್ರೇಲಿಯಾದ ಗೆಲುವಿನ ಜೋಶ್‌ ಹೆಚ್ಚಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬೌಲರ್‌ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಪ್ರದರ್ಶನದಿಂದ ಐಪಿಎಲ್‌ನಲ್ಲಿ ಹರಾಜಾಗದೆ ಉಳಿದಿದ್ದ ಆಟಗಾರ ಫ್ರಾಂಚೈಸಿಗೆ ಸಂದೇಶವನ್ನು ರವಾನಿಸಿದ್ದಾರೆ.

Josh Hazlewoods Stunning bowling against Pakistan W,0,W,0,W,0

ಸಿಡ್ನಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆಸೀಸ್‌ ಸ್ಟಾರ್ ಬೌಲರ್‌ ಜೋಶ್‌ ಹ್ಯಾಜೆಲ್‌ವುಡ್‌. ಪಾಕಿಸ್ತಾನಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ಜೋಶ್‌ ಶಾಕ್ ನೀಡಿದರು. ತಮ್ಮ ಮಾರಕ ದಾಳಿಯಿಂದ ಜೋಶ್‌ ಪ್ರವಾಸಿ ತಂಡವನ್ನು ಕಾಡಿದರು. ಆರಂಭದಲ್ಲಿ ಇವರ ಎಸೆತಗಳಿಗೆ ಉತ್ತರ ನೀಡಿದ್ದ ಪಾಕ್‌ ಆಟಗಾರರ ನಂತರ ಪಟಪಟನೇ ವಿಕೆಟ್‌ಗಳನ್ನು ನೀಡಿದರು.

ಒಂದು ಹಂತದಲ್ಲಿ ಪಾಕ್‌ 67 ರನ್‌ಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಾಧಾರಣ ಸ್ಥಿತಿಯಲ್ಲಿದ್ದಾಗ, ಜೋಶ್ ಹ್ಯಾಜಲ್‌ವುಡ್‌ ಚೆಂಡನ್ನು ಕೈಗೆ ಪಡೆದರು. ಪಂದ್ಯದ 25ನೇ ಓವರ್‌ನಲ್ಲಿ ಹ್ಯಾಜಲ್‌ವುಡ್‌ ಮಾರಕ ದಾಳಿಗೆ ಆಸೀಸ್‌ ಬ್ಯಾಟರ್‌ಗಳು ಕಕ್ಕಾಬಿಕ್ಕಿಆದರು.

ಈ ಓವರ್‌ನ ಮೊದಲ ಎಸೆತದಲ್ಲಿ ಸೌದ್ ಶಾಕೀಲ್‌ ಅವರಿಗೆ ಖೆಡ್ಡಾ ತೋಡಿದ ಜೋಶ್‌, ಮೂರನೇ ಎಸೆತದಲ್ಲಿ ಸಾಜೀದ್ ಖಾನ್‌ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಇದೇ ಓವರ್‌ನ ಕೊನೆಯ ಎಸೆತದಲ್ಲಿ ಅಘಾ ಸಲ್ಮಾನ್‌ ಅವರ ವಿಕೆಟ್‌ ಪಡೆದ ಜೋಶ್ ಅಬ್ಬರಿಸಿದರು.

Josh Hazlewoods Stunning bowling against Pakistan W,0,W,0,W,0

ಪಾಕಿಸ್ತಾನ ರನ್‌ಗಳ ಮಹಲ್ ಕಟ್ಟುವ ಕನಸಿಗೆ ಜೋಶ್‌ ಬ್ರೇಕ್ ಹಾಕಿದರು. ಇವರ ಮಾರಕ ದಾಳಿಯ ಫಲವಾಗಿ ಪಾಕ್ ದಿನದಾಟದಂತ್ಯಕ್ಕೆ 7 ವಿಕೆಟ್‌ಗೆ 68 ರನ್ ಕಲೆ ಹಾಕಿದೆ.

ಜೋಶ್ ಹ್ಯಾಜಲ್‌ವುಡ್‌ ತಮ್ಮ ಐದು ಓವರ್‌ ಬೌಲಿಂಗ್‌ನಲ್ಲಿ ಎರಡು ಮೇಡೆನ್ ಮಾಡಿ ಒಂಬತ್ತು ರನ್‌ ನೀಡಿ ನಾಲ್ಕು ಅಮುಲ್ಯ ವಿಕೆಟ್ ಪಡೆದರು. ಅದ್ರಲ್ಲೂ ಮೂರು ವಿಕೆಟ್‌ಗಳನ್ನು ಒಂದೇ ಓವರ್‌ನಲ್ಲಿ ಪಡೆದಿದ್ದು ವಿಶೇಷವಾಗಿತ್ತು.

2024ರ ಐಪಿಎಲ್‌ ಹರಾಜಿನಲ್ಲಿ ಜೋಶ್‌ ಹ್ಯಾಜಲ್‌ವುಡ್‌ 2 ಕೋಟಿ ಬೇಸ್ ಪ್ರೈಸ್‌ನೊಂದಿಗೆ ಬಿಡ್ಡಿಂಗ್ ಅಖಾಡ ಪ್ರವೇಶಿಸಿದ್ದರು. ಆದರೆ, ಇವರನ್ನು ಐಪಿಎಲ್‌ನ ಫ್ರಾಂಚೈಸಿಗಳು ತಂಡಕ್ಕೆ ಸೇರಿಸಿಕೊಳ್ಳಲಿಲ್ಲ. ಆದರೆ ಸಿಡ್ನಿ ಅಂಗಳದಲ್ಲಿ ಹ್ಯಾಜಲ್‌ವುಡ್ ನೀಡಿದ ಪ್ರದರ್ಶನ ಮಾಲೀಕರು ಕೈ ಕೈ ಹಿಚಿಕೊಳ್ಳುವಂತೆ ಮಾಡಿದೆ.

Story first published: Friday, January 5, 2024, 16:31 [IST]
Other articles published on Jan 5, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+