Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನ ವಿರುದ್ಧದ ಸರಣಿಗೆ ಆಸೀಸ್‌ ತಂಡ ಪ್ರಕಟ; ಜೋಶ್‌ ಇಂಗ್ಲೀಸ್‌ಗೆ ಪಟ್ಟ

ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ವೇಳೆ ಆಸ್ಟ್ರೇಲಿಯಾ ಪಾಕಿಸ್ತಾನ ಪ್ರವಾಸವನ್ನು ಬೆಳೆಸಲಿದೆ. ಈ ಸರಣಿಗಾಗಿ ಆಸ್ಟ್ರೇಲಿಯಾ ಎರಡು ತಂಡಗಳನ್ನು ಘೋಷಿಸಿದೆ. ಆಸೀಸ್‌ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಏಕದಿನ ಕ್ರಿಕೆಟ್‌ ಸರಣಿಯ ಮುಂದಾಳತ್ವವನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ಜೋಶ್ ಇಂಗ್ಲಿಸ್ ಅವರನ್ನು ನೇಮಿಸಲಾಗಿದೆ.

ಮಿಚೆಲ್‌ ಮಾರ್ಷ್‌ ಇತ್ತೀಚಿಗೆ ಪಾದದ ಗಾಯದಿಂದಾಗಿ ಪಾಕಿಸ್ತಾನ ವಿರದ್ಧದ ಸರಣಿಯಿಂದ ಹೊರ ನಡೆದಿದ್ದಾರೆ. ಇವರು ಫಿಟ್ ಆಗಿದ್ದರೇ ಇವರನ್ನೇ ತಂಡದ ನಾಯಕರನ್ನಾಗಿ ಘೋಷಿಸಲಾಗುತ್ತಿತ್ತು. ಇವರ ಅನುಪಸ್ಥಿತಿಯಲ್ಲಿ ತಂಡವನ್ನು ವಿಕೆಟ್‌ ಕೀಪರ್ ಜೋಶ್‌ ಇಂಗ್ಲೀಸ್‌ ಮುನ್ನಡೆಸುತ್ತಿದ್ದಾರೆ.

Josh Inglis

ಐಪಿಎಲ್ ಋತುವಿನ ಲಕ್ನೋ ಸೂಪರ್ ಜೈಂಟ್ಸ್‌ನ ಅಂತಿಮ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಮಾರ್ಷ್, ಮುಂದಿನ ಸೂಚನೆಯ ವರೆಗೆ ಚಿಕಿತ್ಸೆಗಾಗಿ ಪರ್ತ್‌ನಲ್ಲಿಯೇ ಇರ ಬೇಕಾಗುತ್ತದೆ. ಬಾಂಗ್ಲಾದೇಶ ವಿರುದ್ಧದ ಸರಣಿಗೆ ಅವರ ಲಭ್ಯತೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

ಮಿಚೆಲ್‌ ಮಾರ್ಷ್ ಪ್ರಸಕ್ತ ಸಾಲೀನ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕಣಕ್ಕೆ ಇಳಿದಿದ್ದರು. ಇವರು ಗಾಯದಿಂದಾಗಿ ಶನಿವಾರ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಕಣಕ್ಕೆ ಇಳಿಯಲು ಸಾಧ್ಯವಾಗಿರಲಿಲ್ಲ. ಮೇ 19 ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ನಂತರ ಮಾರ್ಷ್ ಆಸ್ಟ್ರೇಲಿಯಾಕ್ಕೆ ಮರಳಿದರು. ಆದರೆ ಪಾದದ ಗಾಯದಿಂದಾಗಿ ಪಾಕಿಸ್ತಾನ ಪ್ರಯಾಣ ಬೆಳೆಸಲು ಸಾಧ್ಯವಾಗಲಿಲ್ಲ. ಮಿಚೆಲ್ ಮಾರ್ಷ್ ಅವರನ್ನು ಸರಣಿಯಿಂದ ಹೊರಗಿಡುವುದು ಆಸ್ಟ್ರೇಲಿಯಾಕ್ಕೆ ದೊಡ್ಡ ಪೆಟ್ಟು ಬಿದ್ದಂತೆ ಆಗಿದೆ.

ಮಿಚೆಲ್‌ ಮಾರ್ಷ್ ಸಾಧನೆ

ಮಿಚೆಲ್ ಮಾರ್ಷ್ ಐಪಿಎಲ್ 2026 ರಲ್ಲಿ ಆಡಿದ 13 ಪಂದ್ಯಗಳಲ್ಲಿ 43.30 ಸರಾಸರಿಯಲ್ಲಿ 563 ರನ್ ಗಳಿಸಿದರು, ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ. ಇನ್ನು ಜೋಶ್‌ ಇಂಗ್ಲೀಸ್‌ ಸಹ ಎಲ್‌ಎಸ್‌ಜಿ ತಂಡದ ಪರ ಕಣಕ್ಕೆ ಇಳಿದು ತಮ್ಮ ಕ್ಷಮತೆ ಸಾಬೀತು ಪಡಿಸಿದ್ದಾರೆ.

ಪಾಕಿಸ್ತಾನ ಪ್ರವಾಸಕ್ಕಾಗಿ ಆಸ್ಟ್ರೇಲಿಯಾದ ಏಕದಿನ ತಂಡ: ಜೋಶ್ ಇಂಗ್ಲಿಸ್ (ನಾಯಕ), ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮರೂನ್ ಗ್ರೀನ್, ಮ್ಯಾಥ್ಯೂ ಕುಹ್ನೆಮನ್, ಮಾರ್ನಸ್ ಲಂಬುಶೇನ್‌, ರೈಲಿ ಮೆರೆಡಿತ್, ಆಲಿವರ್ ಪೀಕ್, ಮ್ಯಾಥ್ಯೂ ರೆನ್ಶಾ, ತನ್ವೀರ್ ಸಂಘ, ಲಿಯಾಮ್ ಸ್ಕಾಟ್, ಮ್ಯಾಟ್ ಶಾರ್ಟ್, ಬಿಲ್ಲಿ ಸ್ಟಾನ್ಲೇಕ್ ಮತ್ತು ಆಡಮ್ ಜಂಪಾ.

Story first published: Wednesday, May 27, 2026, 18:37 [IST]
Other articles published on May 27, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+