For Quick Alerts
ALLOW NOTIFICATIONS  
For Daily Alerts
 

'ವಿರಾಟ್ ಕೂಡ ನನ್ನ ಮಗ': ಕೊಹ್ಲಿಯನ್ನು ಅಪ್ಪಿ ಆನಂದ ಭಾಷ್ಪ ಹರಿಸಿದ ವಿಂಡೀಸ್ ಕ್ರಿಕೆಟಿಗನ ತಾಯಿ: ವಿಡಿಯೋ

ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಹೊಂದಿರುವ ಆಟಗಾರ. ಕ್ರಿಕೆಟ್ ಆಡುವ ಎಲ್ಲಾ ದೇಶದಲ್ಲೂ ಕೊಹ್ಲಿಯನ್ನು ಪ್ರೀತಿಸುವ ಅಭಿಮಾನಿಗಳಿದ್ದಾರೆ. ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನಾಡುತ್ತಿರುವ ಸಂದರ್ಭದಲ್ಲಿ ಇದಕ್ಕೆ ವಿಶೇಷ ಸಾಕ್ಷಿಯೊಂದು ದೊರೆತಿದೆ. ಎದುರಾಳಿ ತಂಡದ ಆಟಗಾರ ತಾಯಿಯೇ ಕೊಹ್ಲಿಯನ್ನು ಪ್ರೀತಿಯಿಂದ ಅಪ್ಪುಗೆ ನೀಡಿದ್ದಲ್ಲದೆ ಕೊಹ್ಲಿ ಕೂಡ ತನ್ನ ಮಗನಂತೆ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಅಂದಹಾಗೆ ಹೀಗೆ ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೇಲೆ ವಿಶೇಷ ಪ್ರೀತಿ ವ್ಯಕ್ತಪಡಿಸಿದ್ದು ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಜೋಶುವಾ ಡಿಸಿಲ್ವಾ ಅವರ ತಾಯಿ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಬಳಿಕ ಕೊಹ್ಲಿ ನೋಡುವ ಸಲುವಾಗಿ ಟೀಮ್ ಇಂಡಿಯಾದ ಬಸ್ ಬಳಿ ಕಾಯುತ್ತಿದ್ದ ಜೊಶುವಾ ಡ ಸಿಲ್ವಾ ಅವರ ತಾಯಿ ಕೊಹ್ಲಿಯನ್ನು ಭೇಟಿಯಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಸಂದರ್ಭದಲ್ಲಿ ಕೊಹ್ಲಿ ಕೂಡ ತನ್ನ ಮಗನಂತೆಯೇ ಎಂದು ಅವರು ಹೇಳಿಕೊಂಡು ಸಂತಸದ ಕಣ್ಣೀರು ಹಾಕಿದ್ದಾರೆ.

Joshua Da Silva mother met virat kohli and hugged him said he is like my son with happy tear

ಪಂದ್ಯದ ಸಂದರ್ಭದಲ್ಲೇ ಕೊಹ್ಲಿಗೆ ಸುದ್ದಿ ತಿಳಿಸಿದ್ದ ಜೋಶುವಾ

ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್ ಜೋಶುವಾ ಡ ಸಿಲ್ವಾ ಮೊದಲ ದಿನದಾಟದ ಸಂದರ್ಭದಲ್ಲಿಯೇ ವಿರಾಟ್ ಕೊಹ್ಲಿ ಬಳಿ ಈ ವಿಚಾರವನ್ನು ಹಂಚಿಕೊಂಡಿದ್ದರು. "ನನ್ನ ತಾಯಿ ಕರೆ ಮಾಡಿ ವಿರಾಟ್ ಕೊಹ್ಲಿ ಆಡುವುದನ್ನು ನೋಡುವುದಕ್ಕಾಗಿ ಬರುತ್ತೇನೆ ಎಂದು ಹೇಳಿದ್ದಾರೆ. ನನಗೆ ಇದು ನಂಬಲು ಸಾಧ್ಯವಾಗುತ್ತಿಲ್ಲ" ಎಂದಿದ್ದರು.

ಎರಡನೇ ದಿನದಾಟದ ಮುಕ್ತಾಯದ ಬಳಿಕ ಜೋಶುವಾ ಡಿಸಿಲ್ವ ತಾಯಿ ಕೊಹ್ಲಿಯನ್ನು ತಂಡದ ಬಸ್‌ನ ಸನಿಹದಲ್ಲಿ ಭೇಟಿಯಾಗಿ ಮಾತನಾಡಿದ್ದಾರೆ. ಅದಾದ ಬಳಿಕ ವಿಡಿಯೋವೊಂದರಲ್ಲಿ ವಿರಾಟ್ ಕೊಹ್ಲಿಯನ್ನು ಭೇಟಿಯಾದ ಬಗ್ಗೆ ಮಾತನಾಡುತ್ತಾ ಆನಂದಭಾಷ್ಪ ಹರಿಸಿದರು. ಈ ಸಂದರ್ಭದಲ್ಲಿ ಕೊಹ್ಲಿಯನ್ನು ನೋಡುವ ಸಲುವಾಗಿಯೇ ತಾನು ಬಂದಿರುವುದಾಗಿ ಹೇಳಿಕೆ ನೀಡಿದ್ದಾರೆ.

"ನಾನು ಜೋಶುವಾ ಬಳಿಕ ವಿರಾಟ್ ಕೊಹ್ಲಿಯನ್ನು ನೋಡುವ ಸಲುವಾಗಿ ಮಾತ್ರವೇ ನಾನು ಬರುತ್ತಿದ್ದೇನೆ ಎಂದು ತಿಳಿಸಿದ್ದೆ. ಜೋಶುವಾನನ್ನು ನೋಡಲು ಅಲ್ಲ. ಯಾಕೆಂದರೆ ಆತನನ್ನು ನಾನು ದಿನಾ ನೋಡುತ್ತೇನೆ. ಇದು ನಾನು ಮೊದಲ ಬಾರಿಗೆ ವಿರಾಟ್ ಕೊಹ್ಲಿಯನ್ನು ಭೇಟಿ ಮಾಡುತ್ತಿರುವುದು. ಆತನೋರ್ವ ಅದ್ಭುತ ವ್ಯಕ್ತಿ. ಆತ ಬಹಳ ಪ್ರತಿಭಾನ್ವಿತ ವ್ಯಕ್ತಿ. ನನ್ನ ಮಗ ಕೂಡ ಆತನ ಹಾದಿಯಲ್ಲಿ ಸಾಗುತ್ತಾನೆ ಎಂದು ಬಯಸುತ್ತೇನೆ" ಎಂದು ಅವರು ಸಂತಸದಿಂದ ಹೇಳಿಕೊಂಡಿದ್ದಾರೆ

Story first published: Saturday, July 22, 2023, 16:55 [IST]
Other articles published on Jul 22, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+