ಐಪಿಎಲ್ 2024ಕ್ಕೆ ಸಿದ್ಧತೆಗಳು ಭರದಿಂದ ನಡೆದಿವೆ. 2024ರ ಮಿನಿ ಹರಾಜು ದುಬೈನಲ್ಲಿ ಡಿಸೆಂಬರ್ 19 ರಂದು ನಡೆಯಲಿದೆ. ಈ ಹರಾಜಿಗೂ ಮುನ್ನವೇ ಕೆಲವು ಆಟಗಾರರನ್ನು ಟ್ರೇಡ್ ಮಾಡಿಕೊಳ್ಳುವ ಮೂಲಕ ಮಾಲೀಕರು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ಪಾಂಡ್ಯರನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ನಾಯಕತ್ವವನ್ನು ಸಹ ನೀಡಿದೆ.
ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕೆಳಗಿಸಿ, ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವದ ಹೊಣೆ ನೀಡಲಾಗಿದೆ. ತಮ್ಮ ನಾಯಕತ್ವ ಕಸಿದುಕೊಂಡ ಬಗ್ಗೆ ರೋಹಿತ್ ಶರ್ಮಾಗೆ ಬೇಸರ ಇದೆ ಎಂಬ ಮಾತುಗಳು ಇವೆ. ಬರೀ ರೋಹಿತ್ ಶರ್ಮಾ ಅವರಿಗೆ ಅಷ್ಟೇ ಅಲ್ಲ, ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದ ಸ್ಟಾರ್ ಪ್ಲೇಯರ್‌ಗಳಿಗೆ ಹಿನ್ನಡೆ ಆಗಿದೆ. ಇದರಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಸಮಾಧಾನದ ಹೊಗೆ ಆಡುತ್ತಿದೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಎದ್ದಿರುವ ಅಸಮಾಧಾನದ ಹೊಗೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಎಲ್ಲ ತಂಡಗಳು ಸಜ್ಜಾಗಿವೆ. ಇದಕ್ಕೆ ಪ್ರತಿಯಾಗಿ ಬೇರೆ ತಂಡಗಳು ಅಸಮಾಧಾನಿತ ಸ್ಟಾರ್ ಆಟಗಾರರನ್ನು ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಅದರ ಪ್ರಕಾರ ನಾಯಕತ್ವದ ಕನಸು ಕಾಣುತ್ತಿದ್ದ ಮುಂಬೈ ತಂಡದ ಆಟಗಾರರಿಗೆ ಬೇರೆ ತಂಡ ರೆಡ್ ಕಾರ್ಪೆಟ್ ಹಾಕುವ ನಿರೀಕ್ಷೆ ಇದೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದ ಮೇಲೆ ಕಣ್ಣು ಇಟ್ಟವರಲ್ಲಿ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ ಹಾಗೂ ಜಸ್ಪ್ರಿತ್ ಬುಮ್ರಾ ಪ್ರಮುಖವಾಗಿ ಎದ್ದು ಕಾಣುತ್ತಾರೆ. ಇಬ್ಬರೂ ಮುಂಬೈ ಇಂಡಿಯನ್ಸ್ ಗೆಲುವಿನಲ್ಲಿ ತಮ್ಮದೇ ಕೊಡುಗೆ ನೀಡಿದ ಆಟಗಾರರು. ಇಬ್ಬರೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಅನುಭವ ಹೊಂದಿದವರೇ. ಈ ಪರಿಸ್ಥಿತಿಯಲ್ಲಿ ತಮ್ಮ ತಂಡದಿಂದ ಹೊರ ಹೋದ ಆಟಗಾರನಿಗೆ ಮ್ಯಾನೇಜ್ಮೆಂಟ್ ಮಣೆ ಹಾಕಿದ್ದು ಸರಿನಾ ಎಂಬ ಪ್ರಶ್ನೆಗಳು ಎದ್ದಿವೆ.
ಸೂರ್ಯಕುಮಾರ್ ಯಾದವ್ ನೇರವಾಗಿ ತಮ್ಮ ಅಸಮಾಧಾನ ಹೊರಹಾಕದೇ ಇದ್ದರೂ, ತಮ್ಮಲ್ಲಿ ಇಟ್ಟುಕೊಂಡಿದ್ದಾರೆ. ಇದರ ಲಾಭ ಪಡೆಯಲು ಬೇರೆ ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಅದರಂತೆ ಸೂರ್ಯಕುಮಾರ್ ತಂಡಕ್ಕೆ ಸೇರಿಸಿಕೊಂಡರೆ ಆಗಬಹುದಾದ ಲಾಭ ಹಾಗೂ ನಷ್ಟಗಳ ಬಗ್ಗೆ ಎಲ್ಲ ತಂಡಗಳು ಚರ್ಚೆ ಆರಂಭಿಸಿವೆ. ಈಗ ಈ ದಿಸೇಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ಗಮನ ಹರಿಸುತ್ತದೆ.

ಮುಂಬೈ ತಂಡಕ್ಕೆ ಹಾರ್ದಿಕ್ ಪಾಂಡ್ಯ ಆಗಮನದಿಂದ ಸೂರ್ಯಕುಮಾರ್ ಯಾದವ್ ಬೇಸರಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಅವರಿಗೆ ಶುಭ ಕೋರಿ ಸಾಮಾಜಿಕ ತಾಣದಲ್ಲೂ ಯಾವುದೇ ಪೋಸ್ಟ್ ಮಾಡಿಲ್ಲ. ಅವರ 11 ಮಿಲಿಯನ್ ಫಾಲೋವರ್ಸ್ ಆಗಿದ್ದಕ್ಕೆ ಧನ್ಯವಾದ ತಿಳಿಸಿರುವ ಸ್ಕೈ, ಹಾರ್ದಿಕ್ ಆಗಮನಕ್ಕೆ ರಿಯಾಕ್ಟ್ ಮಾಡದೇ ಇರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಪ್ಲೇಯರ್.. ಇವರು ತಮ್ಮ ತವರು ತಂಡವನ್ನು ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಅದರಂತೆ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಯಾರಿ ನಡೆಸಿದೆ ಎಂಬ ಮಾತುಗಳು ಹರಿದಾಡುತ್ತಿವೆ.

ಐಪಿಎಲ್ ಮಿನಿ ಹರಾಜಿನಲ್ಲಿ ಸೂರ್ಯಕುಮಾರ್ ಯಾದವ್ ಹೆಸರು ಇಲ್ಲದೇ ಇದ್ದರೂ, ಸೂರ್ಯ ಆರ್‌ಸಿಬಿ ತಂಡವನ್ನು ಹೇಗೆ ಸೇರುತ್ತಾರೆ ಎಂಬ ಪ್ರಶ್ನೆಗಳು ಏಳುವುದು ಸಹಜ. ಇದಕ್ಕೆ ಉತ್ತರ ಇಲ್ಲಿದೆ. ಆರ್‌ಸಿಬಿ ಹರಾಜಿನಲ್ಲಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಲಿದೆ. ಒಂದು ವೇಳೆ ಸೂರ್ಯ ಆರ್‌ಸಿಬಿ ಸೇರುವುದು ಕನ್ಫರ್ಮ್ ಆದಲ್ಲಿ ಆರ್‌ಸಿಬಿ ಹರಾಜಿನಲ್ಲಿ ಮಿತವಾಗಿ ಹಣವನ್ನು ಬಳಿಸಲಿದೆ. ಅಲ್ಲದೆ ಸೂರ್ಯಕುಮಾರ್‌ಗೆ ನೀಡಬಹುದಾದ ಹಣವನ್ನು ಉಳಿಸಿಕೊಂಡು ಬಿಡ್ ಮಾಡಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಐಪಿಎಲ್ ಹರಾಜು ಮುಗಿದ ನಂತರ ಡಿಸೆಂಬರ್ 20ರಂದು ಆಟಗಾರರನ್ನು ಟ್ರೇಡ್ ಮಾಡಿಕೊಳ್ಳುವ ಅವಕಾಶ ಇದೆ. ಇದರ ಲಾಭವನ್ನು ಪಡೆದು ಆರ್‌ಸಿಬಿ ಸೂರ್ಯಕುಮಾರ್‌ಗೆ ತಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದು. ಒಂದು ವೇಳೆ ಸೂರ್ಯಕುಮಾರ್ ಆರ್‌ಸಿಬಿ ಸೇರಿದ್ದೇ ಆದಲ್ಲಿ ನಾಯಕತ್ವ ನೀಡುವ ಸಾಧ್ಯತೆ ಇದೆ.
ಬರೀ ಆರ್‌ಸಿಬಿ ಮಾತ್ರವಲ್ಲಿ ಸೂರ್ಯಕುಮಾರ್ ಯಾದವ್ ಚೊಚ್ಚಲ ಬಾರಿಗೆ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್, ಸೇರಿದಂತೆ ಉಳಿದ ತಂಡಗಳು ಇವರ ಮೇಲೆ ಕಣ್ಣು ನೆಟ್ಟಿವೆ. ಬರೀ ಕಣ್ಣಿನಲ್ಲಿ ಸೂರ್ಯ ಸನ್ನೆ ಮಾಡಿದರೆ ಸಾಕು, ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲು ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಬುಧವಾರದಿಂದ ಮತ್ತೆ ಐಪಿಎಲ್ ಟ್ರೆಡಿಂಗ್ ಆರಂಭವಾಗಲಿದ್ದು, ಸೂರ್ಯಕುಮಾರ್ ಯಾವ ತಂಡಕ್ಕೆ ಹಾರಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.