For Quick Alerts
ALLOW NOTIFICATIONS  
For Daily Alerts
 

Junior Suryakumar Yadav: ಟೀಮ್ ಇಂಡಿಯಾಕ್ಕೆ ಸಿಕ್ಕ ಜೂನಿಯರ್ ಸೂರ್ಯಕುಮಾರ್ ಯಾದವ್

ದಿನಕಳದಂತೆ ಕ್ರಿಕೆಟ್ ಸ್ವರೂಪ ಬದಲಾಗಿದೆ. ಮೊದಲು ಟ್ರಸ್ಟ್ ಪ್ರಾಮುಖ್ಯತೆಯನ್ನು ಕೊಡಬೇಕು ದಿನ ಕಳೆದಂತೆ ಏಕದಿನ ಹಾಗೂ ಟಿ20 ಕ್ರಿಕೆಟ್ ಸದ್ದು ಮಾಡಲು ಆರಂಭಿಸಿತು. ಈಗ ವಿಶ್ವ ವ್ಯಾಪಿ ಟಿ10 ಸದ್ದು ಮಾಡುತ್ತಿದೆ. ಕ್ರಿಕೆಟ್ ಸ್ವರುಪ ಬದಲಾಗುತ್ತಿರುವುದ ಟೆಸ್ಟ್ ಕ್ರಿಕೆಟ್ ಗೆ ಹಿನ್ನಡೆ ಎಂದು ವಿಶ್ಲೇಷಕರು ಆರಂಭಿಸಿದ್ದಾರೆ. ಆದರೆ ಆಟಗಾರರು ಸಹ ಟೆಸ್ಟ್ ನಲ್ಲಿ ಟಿ20 ಕ್ರಿಕೆಟ್ ನಂತೆ ಬ್ಯಾಟ್ ಮಾಡಿ ಆಟಗಾರರು ಸೈ ಎನಿಸಿಕೊಂಡಿದ್ದಾರೆ. ಈಗ ಟೆಸ್ಟ್ ನಲ್ಲೂ ಆಟಗಾರರು ವೇಗವಾಗಿ ರನ್ ಕಲೆ ಹಾಕುವತ್ತ ಚಿತ್ತ ನೆಟ್ಟಿದ್ದಾರೆ. ಅಲ್ಲದೆ, ಹಲವು ತಂಡಗಳು ಅಗ್ರೇಸಿವ್ ಕ್ರಿಕೆಟ್ ಗೆ ಮಣೆ ಹಾಕಿವೆ. ಟೆಸ್ಟ್ ನಲ್ಲೂ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೇಂಡ್, ಬೇಸ್ ಬೌಲ್ ಕ್ರಿಕೆಟ್ ಮೈಗೂಡಿಸಿಕೊಂಡಿದೆ.

ರಣಜಿ ಟ್ರೋಫಿಯಲ್ಲಿ ಹೈದರಾಬಾದ್ ಮತ್ತು ಅರುಣಾಚಲ ಪ್ರದೇಶ ನಡುವೆ ಪಂದ್ಯ ನಡೆಯುತ್ತಿದೆ. ಈ ಪಂದ್ಯ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಈ ಪಂದ್ಯದಲ್ಲಿ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳ ಬಿರುಸಿನ ಬ್ಯಾಟಿಂಗ್ ಕಂಡಿತು. ಈ ಪಂದ್ಯದ ಕೇವಲ ಒಂದು ದಿನದಲ್ಲಿ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳು ಕೇವಲ 48 ಓವರ್‌ಗಳಲ್ಲಿ 529 ರನ್ ಗಳಿಸಿದರು.

Junior Suryakumar Yadav who got to Team India

ಈ ಪಂದ್ಯದ ಒಂದೇ ದಿನದಲ್ಲಿ 700ಕ್ಕೂ ಹೆಚ್ಚು ರನ್ ದಾಖಲಾಗಿವೆ. ಒಂದೇ ದಿನದಲ್ಲಿ ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳು ಸೇರಿ 701 ರನ್ ಗಳಿಸಿದ್ದಾರೆ. ಇದರಲ್ಲಿ ಹೈದರಾಬಾದ್‌ನ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಕೊಡುಗೆ ನೀಡಿದ್ದಾರೆ. ಈ ಪಂದ್ಯದಲ್ಲಿ ಹೈದರಾಬಾದ್ ಬ್ಯಾಟ್ಸ್‌ಮನ್ ತನ್ಮಯ್ ಅಗರ್ವಾಲ್ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಇವರು ರಣಜಿ ಟೂರ್ನಿಯಲ್ಲಿ ಟಿ10 ರೀತಿ ಬ್ಯಾಟಿಂಗ್ ಮಾಡಿ ವಿಶ್ವದ ಚಿತ್ತ ಕದ್ದಿದ್ದಾರೆ.

ಟಿ20 ಕ್ರಿಕೆಟ್ ನಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ವಿಶ್ವದ ಚಿತ್ತ ಕದ್ದಿದ್ದಾರೆ. ಇವರ ಆಟವನ್ನು ಹೋಲುವ ಆಟವನ್ನೇ ತನ್ಮಯ್ ಅಗರ್ವಾಲ್ ಆಡಿ, ದೇಶದ ಅಭಿಮಾನಿಗಳ ಮನ ಗೆದ್ದಿದ್ದಾರೆ‌. ಕೇವಲ 147 ಎಸೆತಗಳಲ್ಲಿ 300 ರನ್ ಬಾರಿಸಿದೆರು. ವೇಗವಾಗಿ ತ್ರಿಶತಕ ಬಾರಿಸಿದ ಹಿರಿಮೆಯನ್ನು ತನ್ಮದಾಗಿಸಿಕೊಂಡಿದ್ದಾರೆ.

Junior Suryakumar Yadav who got to Team India

ಹೈದರಾಬಾದ್ ಪರ ಬ್ಯಾಟಿಂಗ್ ಮಾಡಿದ ತನ್ಮಯ್ ಅಗರ್ವಾಲ್ ಕೇವಲ 147 ಎಸೆತಗಳಲ್ಲಿ ತ್ರಿಶತಕ ಗಳಿಸಿದರು. ಸದ್ಯ ತನ್ಮಯ್ ಅಗರ್ವಾಲ್ 181 ಎಸೆತಗಳಲ್ಲಿ 366 ರನ್ ಗಳಿಸಿದ್ದಾರೆ. ತನ್ಮಯ್ ಅಗರ್ವಾಲ್ ಅವರ ಇನಿಂಗ್ಸ್ ನಲ್ಲಿ 26 ಸಿಕ್ಸರ್ ಮತ್ತು 34 ಬೌಂಡರಿ ಸೇರಿವೆ. ಇದರೊಂದಿಗೆ ತನ್ಮಯ್ ಅಗರ್ವಾಲ್ ಇದೀಗ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿವೇಗದ ತ್ರಿಶತಕ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅದೇ ಇನ್ನಿಂಗ್ಸ್‌ನಲ್ಲಿ ತನ್ಮಯ್ 119 ಎಸೆತಗಳಲ್ಲಿ ಅತಿವೇಗದ ದ್ವಿಶತಕ ದಾಖಲಿಸಿದರು. ತನ್ಮಯ್ ನಂತರ ವೇಗದ ಟ್ರಿಪಲ್ ಸೆಂಚುರಿಯಾಗಿ ಪರಿವರ್ತಿಸಿದರು.

ಪಂದ್ಯದ ಸಮಯದಲ್ಲಿ ಅವರ ಬ್ಯಾಟಿಂಗ್ ನೋಡಿದರೆ ಅವರು ಟೆಸ್ಟ್ ಕ್ರಿಕೆಟ್ ಆಡುತ್ತಿದ್ದಾರೆ ಎಂದು ಅನಿಸುತ್ತಿಲ್ಲ. ಪಂದ್ಯದಲ್ಲಿ ತನ್ಮಯ್ ಟಿ20 ಕ್ರಿಕೆಟ್ ಗಿಂತ ಅಪಾಯಕಾರಿ ಬ್ಯಾಟಿಂಗ್ ಮಾಡಿದ್ದರು. ಇದರಿಂದಾಗಿ ಹೈದರಾಬಾದ್ ಒಂದೇ ದಿನದಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿತು.

Story first published: Saturday, January 27, 2024, 13:33 [IST]
Other articles published on Jan 27, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+