ಕ್ರಿಕೆಟ್ ಕೋಚ್ ಸ್ಥಾನಕ್ಕೆ ಲ್ಯಾಂಗರ್ ಆಯ್ಕೆ ಕಷ್ಟ!
ಬೆಂಗಳೂರು, ಮೇ.19: ಟೀಂ ಇಂಡಿಯಾದ ಹೊಸ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಜಸ್ಟಿನ್ ಲ್ಯಾಂಗರ್ ಆಯ್ಕೆ ಬಹುತೇಕ ಖಚಿತ ಎಂಬ ಸುದ್ದಿ ಹರಿದಾಡಿದೆ. ಅದರೆ, ಈ ಲ್ಯಾಂಗರ್ ಮನಸ್ಸು ಇಂಗ್ಲೆಂಡ್ ಹಾಗೂ ಪಶ್ಚಿಮ ಆಸ್ಟ್ರೇಲಿಯಾ ತಂಡಗಳತ್ತ ವಾಲುತ್ತಿದೆ ಎಂಬ ವರದಿ ಬಂದಿದೆ.
ಪಶ್ಚಿಮ ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಒಪ್ಪಂದವನ್ನು ಮುಂದಿನ ಅವಧಿಗೆ ನವೀಕರಿಸುವ ಮುನ್ನ ಇಂಗ್ಲೆಂಡ್ ಮುಖ್ಯ ಕೋಚ್ ಆಗಿ ಲ್ಯಾಂಗರ್ ಆಯ್ಕೆಯಾದರೂ ಅಚ್ಚರಿ ಪಡಬೇಕಾಗಿಲ್ಲ. ಪೀಟರ್ ಮೂರೆಸ್ ಅವರ ಸ್ಥಾನ ತುಂಬಲು ಉತ್ಸುಕರಾಗಿರುವುದಾಗಿ ಲ್ಯಾಂಗರ್ ಅವರು ದಿ ಗಾರ್ಡಿಯನ್ ಪತ್ರಿಕೆಗೆ ಹೇಳಿದ್ದಾರೆ. [ಐಪಿಎಲ್ ವಿಶೇಷ ಪುಟ]

ಟೀಂ ಇಂಡಿಯಾ ಆಗದಿರಲು ಕಾರಣ: ಅಂತಾರಾಷ್ಟ್ರೀಯ ತಂಡಕ್ಕೆ ಕೋಚ್ ಆಗಿ ಆಯ್ಕೆಯಾದರೆ, ಅದರಲ್ಲೂ ಟೀಂ ಇಂಡಿಯಾ ಕೋಚ್ ಗೆ ವರ್ಷಪೂರ್ತಿ ಬಿಡುವಿಲ್ಲದ ಕೆಲಸ ಇರುತ್ತದೆ. ನಾನು ನನ್ನ ಕುಟುಂಬದ ಜೊತೆ ಹೆಚ್ಚು ಕಾಲ ಕಳೆಯಲು ಬಯಸಿದ್ದೇನೆ ಹೀಗಾಗಿ ವರ್ಷಪೂರ್ತಿ ಬೇರೆ ಕಡೆ ಸುತ್ತಾಡುತ್ತಾ ಇರಲು ಸಾಧ್ಯವಿಲ್ಲ ಎಂದಿದ್ದಾರೆ.[ಗಂಗೂಲಿ,ದ್ರಾವಿಡ್, ಸಚಿನ್ ರಿಂದ ಕೋಚ್ ಆಯ್ಕೆ]
ಈಗ ಇಂಗ್ಲೆಂಡ್ ಹಾಗೂ ಟೀಂ ಇಂಡಿಯಾ ಕೋಚ್ ರೇಸಿನಿಂದ ಲ್ಯಾಂಗರ್ ಹೊರಬೀಳುವ ಸುದ್ದಿ ಬಂದಿದೆ. 44 ರ ಪ್ರಾಯದ ಈ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ 105 ಟೆಸ್ಟ್‌ಗಳಲ್ಲಿ 23 ಶತಕಗಳ ಸಹಿತ 7696 ರನ್‌ಗಳನ್ನು ದಾಖಲಿಸಿದ್ದಾರೆ.
ಇಂಗ್ಲೆಂಡ್ ತಂಡಕ್ಕೆ ಆಸ್ಟ್ರೇಲಿಯಾದ ಜಾಸನ್ ಗಿಲೆಪ್ಸಿ ಕೋಚ್ ಆಗುವ ಸಾಧ್ಯತೆ ಇದ್ದರೆ, ಟೀಂ ಇಂಡಿಯಾಕ್ಕೆ ಹೊಸ ಕೋಚ್ ಹುಡುಕಾಟವನ್ನು ಬಿಸಿಸಿಐ ಮುಂದುವರೆಸಬೇಕಿದೆ. [ಮಳೆಗಾಲದಲ್ಲಿ ಟೀಂ ಇಂಡಿಯಾದಿಂದ ಬಾಂಗ್ಲಾ ಪ್ರವಾಸ]
ವಿಶ್ವಕಪ್‌ನ ನಂತರ ಜಿಂಬಾಬ್ವೆಯ ಆಟಗಾರ ಡೆಂಕ್ಲನ್ ಫ್ಲೆಚರ್ ಅವರ ಕೋಚ್ ಅವಧಿ ಮುಗಿದಿದ್ದು ಆ ಸ್ಥಾನಕ್ಕೆ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಅವರ ಹೆಸರುಗಳು ಕೇಳಿ ಬಂದಿತ್ತು. ಆದರೆ, ಇಬ್ಬರು ಆಟಗಾರರು ತಾವು ರೇಸಿನಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ದ್ರಾವಿಡ್, ಸೌರವ್ ಹಾಗೂ ಸಚಿನ್ ಅವರ ಸಲಹೆ ಮೇರೆಗೆ ಹೊಸ ಕೋಚ್ ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿತ್ತು.
ಐಪಿಎಲ್‌ನ ಅಂತಿಮ ಪಂದ್ಯದ ನಂತರ ಬಿಸಿಸಿಐ ಅಧ್ಯಕ್ಷ ಜಗನ್ಮೋಹನ್ ದಾಲ್ಮಿಯಾ ನೇತೃತ್ವದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಸಭೆ ಸೇರಿ ಹೊಸ ಕೋಚ್ ಆಯ್ಕೆ ಮಾಡಲಿದೆ ಎಂಬ ಸುದ್ದಿಯಿದೆ. ಮೇ.20ರಂದು ಬಾಂಗ್ಲಾದೇಶ ಪ್ರವಾಸಕ್ಕೆ ತಂಡವನ್ನು ಪ್ರಕಟಿಸುವ ಸಾಧ್ಯತೆಯೂ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications