Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KA vs UP ರಣಜಿ ಕ್ವಾರ್ಟರ್‌ಫೈನಲ್‌: ಕರ್ನಾಟಕ ದಾಳಿಗೆ ತತ್ತರಿಸಿದ ಉತ್ತರ ಪ್ರದೇಶ, 155ರನ್‌ಗಳಿಗೆ ಆಲೌಟ್‌

Kar vs UP Ranji

ಆಲೂರಿನ ಕೆಎಸ್‌ಸಿಎ ಗ್ರೌಂಡ್‌ನಲ್ಲಿ ನಡೆಯುತ್ತಿರುವ ರಣಜಿ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಕರ್ನಾಟಕ ಬೌಲಿಂಗ್ ದಾಳಿಗೆ, ಉತ್ತರ ಪ್ರದೇಶ ತಂಡ ತತ್ತರಿಸಿ ಹೋಗಿದೆ. ಕರ್ನಾಟಕದ ನೀಡಿದ 253ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್‌ ಮಾಡಿದ ಉತ್ತರ ಪ್ರದೇಶ ಕೇವಲ 155ರನ್‌ಗಳಿಗೆ ಆಲೌಟ್‌ ಆಗಿದೆ.

ರೋನಿತ್ ಮೊರೆ, ವಿಜಯ್ ಕುಮಾರ್ ಆರಂಭಿಕ ಬೌಲಿಂಗ್ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿರುವ ಕರಣ್ ಶರ್ಮಾ ನಾಯಕತ್ವದ ಉತ್ತರ ಪ್ರದೇಶ, ಕೇವಲ 37.3 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಮೊದಲ ಇನ್ನಿಂಗ್ಸ್‌ನಲ್ಲಿ 98 ರನ್‌ಗಳ ಹಿನ್ನಡೆ ಅನುಭವಿಸಿದೆ.

ಆರಂಭಿಕ ಬ್ಯಾಟರ್‌ಗಳಾದ ಸಮರ್ಥ್‌ ಸಿಂಗ್ ವಿಜಯ್‌ಕುಮಾರ್ ಬೌಲಿಂಗ್‌ನಲ್ಲಿ ಶೂನ್ಯಕ್ಕೆ ಔಟಾದ್ರೆ, ಆರ್ಯನ್ ಜುಯಲ್ 5ರನ್‌ಗೆ ರೋನಿತ್ ಮೊನೆ ಬೌಲಿಂಗ್‌ನಲ್ಲಿ ಔಟಾದ್ರು. ಇದ್ರ ಬೆನ್ಲ್ಲೇ ಉತ್ತರ ಪ್ರದೇಶದ ತಂಡದ ನಾಯಕ ಕರಣ್ ಶರ್ಮಾ ಕೇವಲ 2ರನ್‌ಗಳಿಗೆ ವೈಶಾಕ್‌ಗೆ ವಿಕೆಟ್ ಒಪ್ಪಿಸಿದ್ರು.

ನಾಲ್ಕನೇ ವಿಕೆಟ್‌ಗೆ ಪ್ರಿಯಾಂ ಗರ್ಗ್‌, ರಿಂಕು ಸಿಂಗ್ ಕೊಂಚ ಪ್ರತಿರೋಧ ಒಡ್ಡಿದ್ರು ಸಹ ಕರ್ನಾಟಕದ ಬೌಲರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಸಲಿಲ್ಲ. ರೋನಿತ್ ಮೊರೆ 39ರನ್ ಕಲೆಹಾಕಿದ್ದ ಗರ್ಗ್ ವಿಕೆಟ್ ಪಡೆದ್ರೆ, ಕೆ. ಗೌತಮ್ ರಿಂಕು ಸಿಂಗ್(33) ವಿಕೆಟ್ ಪಡೆದರು. ಆನಂತರ ನಡೆದಿದ್ದು ಕೇವಲ ಪೆವಿಲಿಯನ್ ಪರೇಡ್.

ವಿಕೆಟ್ ಕೀಪರ್ ಧೃವ್ 9, ಪ್ರಿನ್ಸಿ ಯಾದವ್ 0, ಸೌರಭ್ ಕುಮಾರ್ 0 ಬಹುಬೇಗನೆ ಔಟಾದ್ರು. ಆದ್ರೆ ಕೊನೆಯಲ್ಲಿ ಯುವ ಬೌಲರ್ ಶಿವಂ ಮಾಗಿ ವೇಗವಾಗಿ 32 ರನ್‌ಗಳಿಸಿ ತಂಡಕ್ಕೆ ಕೊಂಚ ನೆರವಾದ್ರು. ಯಶ್ ದಯಾಳ್ 13ರನ್‌ಗಳಿಸಿ ಔಟಾದ್ರೆ, ಮಾವಿ ಕೊನೆಯ ವಿಕೆಟ್ ಆಗಿ ಇನ್ನಿಂಗ್ಸ್‌ ಮುಗಿಸಿದ್ರು.

ಈ ಮೂಲಕ ಉತ್ತರ ಪ್ರದೇಶ 37.3 ಓವರ್‌ಗಳಿಗೆ 10 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿದ್ದು, ಹಿನ್ನಡೆ ಕಂಡಿದೆ. ದ್ವಿತೀಯ ದಿನದಾಟದಲ್ಲಿ ಕರ್ನಾಟಕ ಆಲೌಟ್‌ ಆದ ದಿನವೇ ಉತ್ತರ ಪ್ರದೇಶ ಇನ್ನಿಂಗ್ಸ್‌ ಮುಗಿಸಿದ್ದು ಕಳಪೆ ಬ್ಯಾಟಿಂಗ್‌ಗೆ ಸಾಕ್ಷಿಯಾಯಿತು.

ಕರ್ನಾಟಕ ಪರ ರೋನಿತ್ ಮೊರೆ 3, ವಿಜಯಕುಮಾರ್ ವೈಶಾಖ್ 2, ವಿಧ್ವತ್ ಕಾವೇರಪ್ಪ 2, ಕೆ. ಗೌತಮ್ 2, ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದರು. ಈಗಾಗಲೇ ಕರ್ನಾಟಕ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ್ದು ಮೊದಲ ಏಳು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 24ರನ್ ಕಲೆಹಾಕಿದೆ.

Story first published: Tuesday, June 7, 2022, 15:47 [IST]
Other articles published on Jun 7, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+