Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ಕಗಿಸೊ ರಬಾಡ

Kagiso rabada 50 wickets

ಐಪಿಎಲ್‌ ಪ್ರಾರಂಭವಾದಾಗಿನಿಂದ ಬ್ಯಾಟ್ಸ್‌ಮನ್‌ಗಳ ಗೇಮ್ ಎಂದೇ ಬಿಂಬಿತವಾಗಿದೆ. ಇದರ ನಡುವೆ ಉತ್ತಮ ಬೌಲರ್‌ಗಳನ್ನು ನಾವು ಕಾಣಬಹುದು. ಏಕೆಂದರೆ ಎದುರಾಳಿ ತಂಡ ಎಷ್ಟೇ ಬಲಿಷ್ಟವಾಗಿದ್ದರೂ ಚುಟುಕು ಕ್ರಿಕೆಟ್‌ನಲ್ಲಿ ಯಾವುದೇ ಒಂದು ಓವರ್‌ ಪಂದ್ಯದ ಗತಿಯನ್ನೇ ಬದಲಿಸಬಲ್ಲದು.

ಬ್ಯಾಟ್ಸ್‌ಮನ್‌ಗಳ ಪಾತ್ರ ಎಷ್ಟು ಮುಖ್ಯವೋ ಹಾಗೆಯೇ ಬೌಲರ್‌ಗಳು ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಐಪಿಎಲ್‌ ಇತಿಹಾಸದಲ್ಲೇ ಅನೇಕ ಬೌಲರ್‌ಗಳು ಸಾಕಷ್ಟು ವಿಕೆಟ್ ಸಂಪಾದಿಸಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 10 ಬೌಲರ್‌ಗಳಲ್ಲಿ ಏಳು ಜನರು ಭಾರತೀಯರೇ ಇದ್ದಾರೆ.

ಟಾಪ್ ವಿಕೆಟ್ ಟೇಕರ್ ಲಂಕಾದ ಲಸಿತ್ ಮಾಲಿಂಗ ಎಂಬುದು ಅನೇಕರಿಗೆ ತಿಳಿದಿದೆ. ಇತ್ತೀಚಿನ ಸೀಸನ್‌ನ್‌ಗಳಲ್ಲಿ ಬಹಳ ವೇಗವಾಗಿ ವಿಕೆಟ್ ಕಬಳಿಸುತ್ತಿರುವ ಬೌಲರ್ ಡೆಲ್ಲಿ ಕ್ಯಾಪಿಟಲ್ಸ್‌ನ ಟ್ರಂಪ್ ಕಾರ್ಡ್, ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ.

ಐಪಿಎಲ್ 13ನೇ ಆವೃತ್ತಿಯಲ್ಲಿ ಈಗಾಗಲೇ 9 ಪಂದ್ಯಗಳಲ್ಲಿ 19 ವಿಕೆಟ್ ಪಡೆದಿರುವ ಕಗಿಸೊ ರಬಾಡ ವೇಗವಾಗಿ 50 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಐಪಿಎಲ್‌ನಲ್ಲಿ ಕೇವಲ 27 ಪಂದ್ಯಗಳಲ್ಲಿ 50 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಕೆಕೆಆರ್ ತಂಡದ ಸುನಿಲ್ ನರೈನ್‌ರ 32 ಪಂದ್ಯಗಳಿಗಿಂತ ವೇಗವಾಗಿ ಗುರಿ ಮುಟ್ಟಿದ್ದಾರೆ.

ಇನ್ನು ಎಸೆತಗಳ ಲೆಕ್ಕಚಾರದಲ್ಲೂ ಲಸಿತ್ ಮಾಲಿಂಗರನ್ನು ಹಿಂದಿಕ್ಕಿದ ರಬಾಡ 616 ಎಸೆತಗಳಲ್ಲಿ 50 ವಿಕೆಟ್ ಸಂಪಾದಿಸಿದ್ದಾರೆ. ಮಾಲಿಂಗ 749 ಎಸೆತಗಳಲ್ಲಿ 50 ವಿಕೆಟ್ ಪಡೆದಿದ್ದರು.

Story first published: Saturday, October 17, 2020, 21:26 [IST]
Other articles published on Oct 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+