For Quick Alerts
ALLOW NOTIFICATIONS  
For Daily Alerts
 

Unsung Hero: ಹೈದರಾಬಾದ್ ಗೆಲುವಿಗೆ ಕಮಿಂದು ಮೆಂಡಿಸ್ ಆಲ್‌ರೌಂಡರ್ ಪ್ರದರ್ಶನ

ಐಪಿಎಲ್ 2025 ರ 43ನೇ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡ ನಡುವೆ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಹೈದರಾಬಾದ್ ತಂಡ 5 ವಿಕೆಟ್‌ಗಳಿಂದ ಜಯಗಳಿಸಿತು. ಚೆನ್ನೈ ಸೂಪರ್ ಕಿಂಗ್ಸ್ ತನ್ನ 7ನೇ ಸೋಲನ್ನು ಎದುರಿಸಬೇಕಾಯಿತು. ಹೈದರಾಬಾದ್ ಬೌಲಿಂಗ್, ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ಮೂರು ವಿಭಾಗಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿತು.

ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 19.5 ಓವರ್‍‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 154 ರನ್‌ ಗಳಿಸಿತು. ಈ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ 18.4 ಓವರ್‍‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 155 ರನ್ ಗಳಿಸಿ ಗೆಲುವು ಸಾಧಿಸಿರು. ಐಪಿಎಲ್ ಇತಿಹಾಸದಲ್ಲಿ ಹೈದರಾಬಾದ್ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ತಂಡವನ್ನು ಸೋಲಿಸಿದ್ದು ಇದೇ ಮೊದಲು.

Kamindu Mendis all-rounder performance helps Sunrisers Hyderabad win against CSK

ಎಂ ಚಿದಂಬರಂ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಐತಿಹಾಸಿಕ ಗೆಲುವು ಸಾಧಿಸಿಲು ಶ್ರೀಲಂಕಾದ ಆಲ್‌ರೌಂಡರ್ ಕಮಿಂದು ಮೆಂಡಿಸ್ ಪ್ರಮುಖ ಪಾತ್ರವಹಿಸಿದರು. ಬೌಲಿಂಗ್, ಫೀಲ್ಡಿಂಗ್ ಹಾಗು ಬ್ಯಾಟಿಂಗ್ ಮೂರಲ್ಲೂ ಹೈದರಾಬಾದ್ ತಂಡದ ಗೆಲುವಿಗೆ ಕೊಡುಗೆ ನೀಡಿದರು.

ಮೆಂಡಿಸ್ ಆಲ್‌ರೌಂಡರ್ ಆಟ

ಕಮಿಂದು ಮೆಂಡಿಸ್‌ ಬೌಲಿಂಗ್‌ನಲ್ಲಿ ಚೆನ್ನೈ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಔಟ್ ಮಾಡಿದರು. ಬಳಿಕ ಹೈದರಾಬಾದ್ ತಂಡಕ್ಕೆ ಕಂಟಕವಾಗಿದ್ದ ಯುವ ಸ್ಪೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಅವರ ಅದ್ಭುತ ಕ್ಯಾಚ್ ಹಿಡಿಯುವಲ್ಲಿ ಮೆಂಡಿಸ್ ಯಶಸ್ವಿಯಾದರು. ಇದರೊಂದಿಗೆ ಡೆವಾಲ್ಡ್ ಬ್ರೆವಿಸ್ 42 ರನ್‌ಗಳಿಗೆ ತನ್ನ ಇನ್ನಿಂಗ್ಸ್‌ ಅನ್ನು ನಿಲ್ಲಿಸಿದರು. ಇನ್ನೂ ಬ್ಯಾಟಿಂಗ್‌ನಲ್ಲಿ ಅವರು ಹೈದರಾಬಾದ್ ಪರ ಎರಡನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅವರು 22 ಎಸೆತಗಳಲ್ಲಿ 3 ಬೌಂಡರಿ ಬಾರಿಸುವ ಮೂಲಕ ಅಜೇಯ 32 ರನ್ ಗಳಿಸಿದರು. ಈ ಮೂಲಕ ಅವರು ಹೈದರಾಬಾದ್ ಗೆಲುವಿನಲ್ಲಿ ಮಿಂಚಿದರು.

ಪಂದ್ಯದ ಫಲಿತಾಂಶ

ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಫೀಲ್ಡಿಂಗ್ ಮಾಡಲು ನಿರ್ಧರಿಸಿರು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 19.5 ಓವರ್ ಗಳಲ್ಲಿ 154 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಸಿಎಸ್‌ಕೆ ಪರ ಚೊಚ್ಚಲ ಪಂದ್ಯ ಆಡಿದ ಡೆವಾಲ್ಡ್ ಬ್ರೆವಿಸ್ 25 ಎಸೆತಗಳಲ್ಲಿ 42 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಆದರೆ ಕಮಿಂದು ಮೆಂಡಿಸ್ ಹಿಡಿದ ಅದ್ಭುತ ಕ್ಯಾಚ್‌ನಿಂದಾಗಿ ಅವರು ಔಟಾದರು.

ಆಯುಷ್ ಮ್ಹಾತ್ರೆ 30 ರನ್, ರವೀಂದ್ರ ಜಡೇಜಾ 21 ರನ್, ದೀಪಕ್ ಹೂಡಾ 22 ರನ್ ಗಳಿಸಿದ್ದು ಬಿಟ್ಟರೆ ಉಳಿದ್ಯಾವ ಬ್ಯಾಟರ್ಸ್ ತಂಡಕ್ಕೆ ನೆರವಾಗಲಿಲ್ಲ. ಸನ್‌ರೈಸರ್ಸ್ ಹೈದರಾಬಾದ್ ಪರ ಹರ್ಷಲ್ ಪಟೇಲ್ 4 ವಿಕೆಟ್ ಪಡೆದು ಮಿಂಚಿದರು. ನಾಯಕ ಪ್ಯಾಟ್ ಕಮಿನ್ಸ್ ಹಾಗು ಜಯದೇವ್ ಉನದ್ಕತ್ ತಲಾ 2 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಮತ್ತು ಕಮಿಂದು ಮೆಂಡಿಸ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಚೆನ್ನೈ ನೀಡಿದ 155 ರನ್‌ಗಳ ಸಾಧಾರಣ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್‌ ಉತ್ತಮ ಆರಂಭ ಸಿಗಲಿಲ್ಲ. ಆರಂಭದಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡರು. ನಂತರ ಬಂದ ಇಶಾನ್ ಕಿಶನ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು. ಟ್ರಾವಿಸ್ ಹೆಡ್ 19 ರನ್ ಗಳಿಸಿ ಔಟಾದರೆ, ಇಶಾನ್ ಕಿಶನ್ 44 ರನ್‌ ಕಲೆ ಹಾಕಿ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದರು.

ಅನಿಕೇತ್ ವರ್ಮಾ 19 ರನ್ ಮತ್ತು ಹೆನ್ರಿಚ್ ಕ್ಲಾಸೆನ್ 7 ರನ್ ಗಳಿಸಿದರು. ಕೊನೆಯಲ್ಲಿ ಕಮಿಂದು ಮೆಂಡಿಸ್ ಅಜೇಯ 33 ರನ್ ಗಳಿಸಿದರೆ, ನಿತೀಶ್ ಕುಮಾರ್ ರೆಡ್ಡಿ 19 ರನ್ ಗಳಿಸುವ ಮೂಲಕ ಹೈದರಾಬಾದ್ ತಂಡಕ್ಕೆ ಗೆಲುವು ತಂದು ಕೊಟ್ಟರು.

Story first published: Saturday, April 26, 2025, 6:01 [IST]
Other articles published on Apr 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+