ಮುಲ್ತಾನ್: ಪಾಕಿಸ್ತಾನ ತಂಡಕ್ಕೆ ಬಾಬರ್ ಅಜಮ್ ಅವರ ರಿಪ್ಲೇಸ್ ಮೆಂಟ್ ಸಿಕ್ಕಂತೆ ಆಗಿದೆ. ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ಪಾಕ್, ಈ ಯುವ ಆಟಗಾರನಿಗೆ ಆಡಲು ಅವಕಾಶ ನೀಡಿತು. ಟೆಸ್ಟ್‌ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಈ ಯಂಗ್ ಪ್ಲೇಯರ್ ಚೊಚ್ಚಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲೇ ಶತಕದ ಸಾಧನೆ ಮಾಡಿದ್ದಾರೆ.
ಬಾಬರ್ ಅಜಮ್ ಬದಲಿಗೆ ಕಮ್ರಾನ್ ಗುಲಾಮ್ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ಆಡಲು ಅವಕಾಶ ನೀಡಲಾಗಿದೆ. ಪಾಕ್ ಪರ ಬಾಬರ್ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಅವರು ಸತತವಾಗಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಕ್ಕೆ ಅವರಿಗೆ ವಿಶ್ರಾಂತಿ ನೀಡಲಾಯಿತು. ಆಸಲಿಗೆ ಕಳಪೆ ಫಾರ್ಮ್ ಬಾಬರ್ ಅಜಮ್ ಅವರನ್ನು ತಂಡದಿಂದ ಕೈ ಬಿಡುವಂತೆ ಮಾಡಿದೆ. ಇವರ ಸ್ಥಾನದಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಆಡಿದ ಯುವ ಆಟಗಾರರ ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದ್ದಾರೆ.

ಎರಡನೇ ಟೆಸ್ಟ್‌ನಲ್ಲಿ ಬಾಬರ್ ಅಜಮ್ ಬದಲಿಗೆ ಕಮ್ರಾನ್ ಗುಲಾಮ್‌ಗೆ ಅವಕಾಶ ನೀಡಲಾಯಿತು. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಯಂಗ್ ಪ್ಲೇಯರ್, ತಮ್ಮನ್ನು ಆಯ್ಕೆ ಮಾಡಿದಕ್ಕೆ ಧನ್ಯಾವಾದ ತಿಳಿಸಿದ ರೂಪದಲ್ಲಿ ಶತಕ ಬಾರಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದರ ಸಂಪೂರ್ಣ ಲಾಭ ಪಡೆದು ಬ್ಯಾಟ್ ಮಾಡಿದರು. 224 ಎಸೆತಗಳನ್ನು ಎದುರಿಸಿದ ಕಮ್ರಾನ್ 11 ಬೌಂಡರಿ, 1 ಸಿಕ್ಸರ್ ಸಹಾಯದಿಂದ 118 ರನ್ ಸಿಡಿಸಿದರು.
ಟೆಸ್ಟ್‌ನಲ್ಲಿ ನಾಲ್ಕನೇ ಕ್ರಮಾಂಕಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ತಂಡದ ಅನುಭವಿ ಆಟಗಾರ ಈ ಸ್ಥಾನದಲ್ಲಿ ಆಡುತ್ತಾನೆ. ಹೀಗಾಗಿ ಯುವ ಆಟಗಾರರು ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ವಿರಳ. ಆದರೆ ಪಾಕ್ ತಂಡ ಕಮ್ರಾನ್ ಗುಲಾಮ್ ಅವರಿಗೆ ನಾಲ್ಕನೇ ಸ್ಥಾನದಲ್ಲಿ ಆಡುವಂತೆ ಸೂಚಿಸಿತು. ಆದರೆ ಸಿಕ್ಕ ಅವಕಾಶವನ್ನು ಎರಡೂ ಕೈ ಗಳಿಂದ ಬಳಸಿಕೊಂಡ ಕಮ್ರಾನ್ ಗುಲಾಮ್ ಶತಕ ಸಾಧನೆ ಮಾಡಿದ್ದಾರೆ. ಇನ್ನು ಪಾಕ್ ಪರ ಒಟ್ಟು 10 ಜನ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಾಗ ಪದಾರ್ಪಣೆ ಮಾಡಿದ್ದಾರೆ. ಅದರಲ್ಲಿ ಈ ಮೊದಲು ಸಲೀಂ ಮಲಿಕ್ ಮಾತ್ರ ಶತಕ ಬಾರಿಸಿದ್ದರು. ಈಗ ಈ ಸಾಲಿಗೆ ಕಮ್ರಾನ್ ಗುಲಾಮ್ ಸೇರುತ್ತಾರೆ.
ಈ ಶತಕದಲ್ಲಿ ಮತ್ತೊಂದು ವಿಶೇಷವಿದೆ. ಈ ಹಿಂದೆ ಪದಾರ್ಪಣೆ ಪಂದ್ಯದಲ್ಲಿ ಶತಕ ಬಾರಿಸಿದ್ದ ಸಲೀಂ ಮಲಿಕ್ ಅವರು ಎರಡನೇ ಇನಿಂಗ್ಸ್‌ನಲ್ಲಿ ಶತಕದ ಸಾಧನೆ ಮಾಡಿದ್ದರು. ಆದರೆ ಇವರಿಗಿಂತಲೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಕಮ್ರಾನ್ ಗುಲಾಮ್ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಕಮ್ರಾನ್ ಗುಲಾಮ್ ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಫಲವಾಗಿ ಅವರಿಗೆ ಟೆಸ್ಟ್ ಪಂದ್ಯದಲ್ಲಿ ಆಡಲುವ ಅವಕಾಸ ಸಿಕ್ಕಿತ್ತು. ಇನ್ನು ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಶತಕ ಬಾರಿಸಿದ ಆರನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಕಮ್ರಾನ್ ತಮ್ಮದಾಗಿಸಿಕೊಂಡಿದ್ದಾರೆ.
ಎರಡನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಪಾಕ್ ಮೊದಲು ಬ್ಯಾಟ್ ಮಾಡಿ ದಿನದಾಟದಂತ್ಯಕ್ಕೆ 5 ವಿಕೆಟ್‌ಗೆ 259 ರನ್ ಸೇರಿಸಿದೆ.