ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಹೈದರಾಬಾದ್ ಪರ ವಿಲಿಯಮ್ಸನ್, ಖಲೀಲ್ ಕಣಕ್ಕೆ

ನವದೆಹಲಿ, ಏಪ್ರಿಲ್ 10: ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮತ್ತು ಭಾರತದ ವೇಗಿ ಖಲೀಲ್ ಅಹ್ಮದ್ ಮುಂಬರಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯಕ್ಕಾಗಿ ಮೈದಾನಕ್ಕಿಳಿಯಲಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ಸನ್ ರೈಸರ್ಸ್ ಹೈದರಾಬಾದ್ ಕೊಚ್ ಟಾಮ್ ಮೂಡಿ ಖಾತರಿಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೂಡಿ, 'ಹೌದು, ವಿಲಿಯಮ್ಸನ್ ಮುಂದಿನ ಪಂದ್ಯಕ್ಕಾಗಿ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಅದರಂತೆ ಖಲೀಲ್ ಕೂಡ ಮೈದಾನಕ್ಕಿಳಿಯುತ್ತಿದ್ದಾರೆ' ಎಂದು ಬರೆದುಕೊಂಡಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಇಬ್ಬರೂ ಆಟಗಾರರು ಈವರೆಗಿನ ಪಂದ್ಯಗಳಲ್ಲಿ ಪಾಲ್ಗೊಂಡಿರಲಿಲ್ಲ.
ವಿಲಿಯಮ್ಸನ್ ಮರಳುವುದರಿಂದ ತಂಡಕ್ಕೆ ಉತ್ತಮ ಮಾರ್ಗದರ್ಶನ ಲಭಿಸಲಿದೆ. ಜೊತೆಗೆ ತಂಡದ ಮಧ್ಯಮ ಕ್ರಮಾಂಕವೂ ಬಲಗೊಳ್ಳಲಿದೆ. ಹೈದರಾಬಾದ್ ತಂಡ ಈವರೆಗೆ ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಪಾಯಿಂಟ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಎಸ್‌ಆರ್‌ಎಚ್ vs ಡಿಸಿ ಪಂದ್ಯ ಏಪ್ರಿಲ್ 14ರಂದು ಹೈದರಾಬಾದ್‌ನಲ್ಲಿ 8 pmಗೆ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications