ತಂದೆಯ ಅಗಲಿಕೆಯ ಮಧ್ಯೆ ಕಣಕ್ಕಿಳಿದ ಕೇಮಾರ್ ರೋಚ್: ನೆಟ್ಟಿಗರ ಹೃದಯ ಗೆದ್ದ ಕೀವಿಸ್ ನಾಯಕನ ನಡೆ

ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಮಡ್ ನಡುವಿನ ಟೆಸ್ಟ್ ಸರಣಿಯಮೊದಲ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ವೆಸ್ಟ್ ಇಂಡೀಸ್ ತಂಡದ ಪ್ರಮುಖ ವೇಗಿ ಕೇಮಾರ್ ರೋಚ್ ಅವರ ತಂದೆ ಅಗಲಿದ ಸುದ್ದಿ ಅವರನ್ನು ತಲುಪಿತ್ತು. ಆದರೆ ಈ ದುಃಖದ ಸಂದರ್ಭದಲ್ಲಿ ಕೇಮಾರ್ ರೋಚ್ ತಂಡದ ಪರವಾಗಿ ಆಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಕೇಮಾರ್ ರೋಚ್ ಮೊದಲ ಟೆಸ್ಟ್ ಪಂದ್ಯವನ್ನಾಡಲು ಸಿದ್ದರಾಗುತ್ತಿರುವ ವೇಳೆಯಲ್ಲಿ ಈ ವಿಚಾರ ತಿಳಿಯಿತು. ಆದರೆ ತಮ್ಮ ತಂಡದ ಪರವಾಗಿ ಆಡುವ ನಿರ್ಧಾರವವನ್ನು ರೋಚ್ ತೆಗೆದುಕೊಂಡರು. ಕೇಮಾರ್ ರೋಚ್ ತಂದೆ ಆಂಡ್ರ್ಯೋ ಸ್ಮಿತ್ ಅಗಲಿಕೆಯ ಹಿನ್ನೆಲೆಯಲ್ಲಿ ಎರಡು ತಂಡದ ಆಟಗಾರರು ಕಪ್ಪುಪಟ್ಟಿ ಧರಿಸಿ ಮೈದಾನಕ್ಕೆ ಇಳಿದಿದ್ದಾರೆ.
ಇನ್ನು ಈ ವಿಚಾರ ಎದುರಾಳಿ ಕೀವಿಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರಿಗೆ ತಿಳಿದ ಬಳಿಕ ರೋಚ್ ಬಳಿಗೆ ತೆರಳಿದ ಅವರು ತಬ್ಬಿಕೊಂಡು ಸಾಂತ್ವಾನ ಹೇಳಿದ್ದಾರೆ. ಕೀವಿಸ್ ನಾಯಕನ ಈ ನಡೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಕ್ಯಾಮರೂನ್ ರೋಚ್ ತಂದೆಯ ಅಗಲಿಕೆಯ ನೋವಿನ ಮಧ್ಯೆಯೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡದ ಮೂರು ವಿಕೆಟ್ ಪಡೆಯುವಲ್ಲಿ ಕೇಮಾರ್ ರೋಚ್ ಯಶಸ್ವಿಯಾಗಿದ್ದಾರೆ.
ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಸೀರಾಜ್ ಕೂಡ ಆಸ್ಟ್ರೇಲಿಯಾ ಪ್ರವಾಸದ ಆರಂಭದಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಸಿರಾಜ್ ಕೂಡ ತವರಿಗೆ ಮರಳದೆ ಟೀಮ್ ಇಂಡಿಯಾ ಜೊತೆಗೆ ಉಳಿದುಕೊಳ್ಳಲು ನಿರ್ಧರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications