Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Kane Williamson Retires: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಭ್ಯ ಆಟಗಾರ ಕೇನ್‌ ವಿಲಿಯಮ್ಸನ್‌ ವಿದಾಯ

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಶ್ರೇಷ್ಠ ಬ್ಯಾಟರ್ ಮತ್ತು ಮಾಜಿ ನಾಯಕ ಕೇನ್ ವಿಲಿಯಮ್ಸನ್ ತಮ್ಮ ದೀರ್ಘಕಾಲದ ಅಂತರರಾಷ್ಟ್ರೀಯ ಕ್ರಿಕೆಟ್ ಜರ್ನಿಗೆ ನಿವೃತ್ತಿ ತಿಳಿಸಿದ್ದಾರೆ. ಸರಿಸುಮಾರು 16 ವರ್ಷಗಳ ಕಾಲ ಕಿವೀಸ್ ತಂಡವನ್ನು ಮುನ್ನಡೆಸಿದ್ದ ಸ್ಟಾರ್ ಪ್ಲೇಯರ್ ವಿಶ್ವದಲ್ಲೆ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಶುಕ್ರವಾರದಂದು ಕೇನ್‌ ವಿಲಿಯಮ್ಸನ್‌ ದೊಡ್ಡ ನಿರ್ಧಾರವನ್ನು ಪ್ರಕಟಿಸಿದ್ದಾರೆ.

2021ರಲ್ಲಿ ನ್ಯೂಜಿಲೆಂಡ್‌ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಕೊಂಡೊಯ್ದು, ತಂಡ ಪ್ರಶಸ್ತಿ ಗೆಲ್ಲುವಲ್ಲಿ ಇವರ ಪಾತ್ರ ದೊಡ್ಡದು. ಇವರ ಪರಿಶ್ರಮದ ಫಲವಾಗಿ ನ್ಯೂಜಿಲೆಂಡ್ ಮೊದಲ ಐಸಿಸಿ ಪ್ರಶಸ್ತಿಗೆ ಮುತ್ತಿಟ್ಟಿತ್ತು. ಫೈನಲ್ ಪಂದ್ಯದಲ್ಲಿ ಕೇನ್‌ ಪಡೆ ಟೀಮ್ ಇಂಡಿಯಾವನ್ನು ಮಣಿಸಿ ಸಾಧನೆ ಮಾಡಿತ್ತು.

Kane Williamson Retires

ಕೇನ್‌ ವಿಲಿಯಮ್ಸನ್‌ ತಮ್ಮ ತಮ್ಮ ನಾಯಕತ್ವ ಮತ್ತು ಅಮೋಘ ಬ್ಯಾಟಿಂಗ್‌ ಪ್ರದರ್ಶನದಿಂದ ನ್ಯೂಜಿಲೆಂಡ್‌ ತಂಡಕ್ಕೆ ಹೊಸ ಶಕ್ತಿ ತುಂಬಿದ್ದ ಆಟಗಾರ. ಶಾಂತ ಕ್ರಿಕೆಟ್ ಆಟಗಾರ ಹಠಾತ್ತನೆ ನಿವೃತ್ತಿ ಘೋಷಿಸಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ನಿವೃತ್ತಿ ವೇಳೆ ಕೇನ್‌ ದೇಶಕ್ಕಾಗಿ ಆಡುವುದು ನನ್ನ ಗೌರವ ಎಂದು ತಿಳಿಸಿದ್ದಾರೆ.

IND vs AFG 1st ODI: ಗೆಲುವಿನ ಕನಸಿನಲ್ಲಿ ಟೀಮ್ ಇಂಡಿಯಾ; ರೋಹಿತ್ ಶರ್ಮಾ, ರಶೀದ್ ಖಾನ್ ಆಕರ್ಷಣೆ

ನಿವೃತ್ತಿ ಬಗ್ಗೆ ಮಾತನಾಡಿರುವ ಕೇನ್‌ ವಿಲಿಯಮ್ಸನ್‌, ವಿದಾಯದ ಬಗ್ಗೆ ಬಹು ದಿನಗಳಿಂದ ಯೋಚನೆ ಮಾಡುತ್ತಿದ್ದೆ. ಇದೇ ಸೂಕ್ತವಾದ ಸಮಯ ಎಂದು ಭಾವಿಸಿ ಈ ನಿರ್ಧಾರ ಕೈಗೊಂಡಿದ್ದೇನೆ. ನ್ಯೂಜಿಲೆಂಡ್ ಪರವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಬೇಕೆನ್ನುವುದು ನನ್ನ ಬಹುದೊಡ್ಡ ಕನಸಾಗಿತ್ತು ಮತ್ತು ಪ್ರತಿಯೊಂದು ಪಂದ್ಯದಲ್ಲೂ ನನ್ನ ಅತ್ಯುತ್ತಮ ಕೊಡುಗೆ ನೀಡಲು ಪ್ರಯತ್ನಿಸಿದ್ದೇನೆ ಎಂದಿದ್ದಾರೆ.

ತಮ್ಮ ಅಪ್ರತಿಮ ತಾಳ್ಮೆ ಮತ್ತು ಸಭ್ಯ ವರ್ತನೆಯ ಮೂಲಕ ಎಲ್ಲರ ಹೃದಯ ಗೆದ್ದಿರುವ ವಿಲಿಯಮ್ಸನ್‌, ಮೈದಾನದಲ್ಲಿ ಕೋಪಗೊಳ್ಳದ ಆಟಗಾರ. ಇವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಕಣಕ್ಕೆ ಇಳಿದಿದ್ದರು. ಅಲ್ಲದೆ ನಾಯಕತ್ವವನ್ನು ವಹಿಸಿದ್ದರು. ಭಾರತೀಯ ಪ್ರೇಕ್ಷಕರಿಂದ ಸದಾ ಅಪಾರ ಗೌರವ ಮತ್ತು ಪ್ರೀತಿಯನ್ನು ಪಡೆದಿದ್ದರು ಎಂಬುದು ಇಲ್ಲಿ ಗಮನಾರ್ಹ.

2019ರ ಫೈನಲ್‌

ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಕೇನ್‌ ಮುಂದಾಳತ್ವದ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ಫೈನಲ್ ಪಂದ್ಯ ಟೈ ಆಗಿ ವಿವಾದಾತ್ಮಕ ಬೌಂಡರಿ ನಿಯಮದ ಆಧಾರದ ಮೇಲೆ ಆತಿಥೇಯ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಯಿತು.

Messi vs Ronaldo: ಶತಕೋಟಿಗಳ ಒಡೆಯರಿಗೆ ಇದು ಲಾಸ್ಟ್‌ ಚಾನ್ಸ್‌

Messi vs Ronaldo: ಶತಕೋಟಿಗಳ ಒಡೆಯರಿಗೆ ಇದು ಲಾಸ್ಟ್‌ ಚಾನ್ಸ್‌

ನಾಯಕತ್ವದ ದಾಖಲೆ

ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರು. ಇವರು ಕಿವೀಸ್ ತಂಡವನ್ನು 40 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದು, ಈ ವೇಳೆ ತಂಡ 22 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು 91 ಏಕದಿನ ಪಂದ್ಯಗಳಲ್ಲಿ ಕಿವೀಸ್ ತಂಡ ನಾಯಕರಾಗಿದ್ದ ಇವರು 46 ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಇನ್ನು 75 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 35 ಪಂದ್ಯಗಳಲ್ಲಿ ನ್ಯೂಜಿಲೆಂಡ್‌ಗೆ ಜಯಭೇರಿ ಬಾರಿಸಿದ್ದಾರೆ. ಇವರ ಸಾರಥ್ಯದಲ್ಲೇ ಕಿವೀಸ್ ಪಡೆ 2016ರ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಿದ್ದರೆ, 2021ರ ಟಿ20 ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿತ್ತು. ನ್ಯೂಜಿಲೆಂಡ್

Kane Williamson Retires

ಕೇನ್‌ ವಿಲಿಯಮ್ಸನ್‌ ವೃತ್ತಿ ಜೀವನ

35 ವರ್ಷದ ಕೇನ್‌ ವಿಲಿಯಮ್ಸನ್‌ ನ್ಯೂಜಿಲೆಂಡ್ ಪರ 110 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು 54ರ ಸರಾಸರಿಯಲ್ಲಿ 9515 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 33 ಶತಕ ಹಾಗೂ 38 ಅರ್ಧಶತಕಗಳು ಸೇರಿವೆ. ಇನ್ನು 175 ಏಕದಿನ ಪಂದ್ಯಗಳಲ್ಲಿ ಕೇನ್ 48ರ ಸರಾಸರಿಯಲ್ಲಿ 7256 ರನ್‌ ಸಿಡಿಸಿದ್ದಾರೆ. ಈ ವೇಳೆ 15 ಶತಕ, 47 ಅರ್ಧಶತಕಗಳನ್ನು ಬಾರಿಸಿದ್ದಾರೆ. ಟಿ 20 ಕ್ರಿಕೆಟ್‌ನಲ್ಲಿ ಕಿವೀಸ್ ಪರ 93 ಪಂದ್ಯ ಆಡಿರುವ ವಿಲಿಯಮ್ಸನ್‌ 2575 ರನ್‌ ಕಲೆ ಹಾಕಿದ್ದಾರೆ.

Story first published: Friday, June 12, 2026, 18:01 [IST]
Other articles published on Jun 12, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+