ಐಪಿಎಲ್ 2019: ತಾಯ್ನಾಡಿಗೆ ಹಿಂದಿರುಗಿದ ಕೇನ್ ವಿಲಿಯಮ್ಸನ್!

ಹೊಸದಿಲ್ಲಿ, ಏಪ್ರಿಲ್ 23: ವೈಯಕ್ತಿಕ ಕಾರಣಗಳಿಂದಾಗಿ ಕೂಡಲೇ ತಾಯ್ನಾಡಿಗೆ ಹಿಂದಿರುಗಲಿರುವ ನ್ಯೂಜಿಲೆಂಡ್ ಆಟಗಾರ ಕೇನ್ ವಿಲಿಯಮ್ಸನ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಂಗಳವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯುವುದಿಲ್ಲ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಏಪ್ರಿಲ್ 27ರಂದು ನಡೆಯಲಿರುವ ಪಂದ್ಯದ ಹೊತ್ತಿಗೆ ಕೇನ್ ವಿಲಿಯಮ್ಸನ್ ಹೈದರಾಬಾದ್ ತಂಡವನ್ನು ಮರಳಿ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ.
ವಿಲಿಯಮ್ಸನ್ ಅವರ ಸ್ಥಾನದಲ್ಲಿ ಮೊಹಮ್ಮದ್ ನಬಿ ಅಥವಾ ಶಾಕಿಬ್ ಅಲ್ ಹಸನ್ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಯದಲ್ಲಿ ಸನ್‌ರೈಸರ್ಸ್ ಪರ ಆಡಲಿದ್ದಾರೆ.
ಕಳೆದ ಪಂದ್ಯದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ಎದುರು 9 ವಿಕೆಟ್‌ಗಳ ಜಯ ದಾಖಲಿಸಿದ ಸನ್‌ರೈಸರ್ಸ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಈ ಮೂಲಕ ಪ್ಲೇ ಆಫ್ಸ್ ಹಾದಿಯಲ್ಲಿ ಮುನ್ನುಗ್ಗುತ್ತಿದೆ.

ಭುವನೇಶ್ವರ್ ಕುಮಾರ್ ನಾಯಕ
ಕೇನ್ ವಿಲಿಯಮ್ಸನ್ ಭುಜದ ಗಾಯದ ಸಮಸ್ಯೆ ಎದುರಿಸಿದ್ದ ಕಾರಣ ಈ ಬಾರಿಯ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ ಹೈದರಾಬಾದ್ ತಂಡವನ್ನು ಮುನ್ನಡೆಸಿದ್ದರು. ಇದೀಗ ಸಿಎಸ್‌ಕೆ ವಿರುದ್ಧವೂ ಅನುಭವಿ ವೇಗಿ ಭುವನೇಶ್ವರ್ ಹೈದರಾಬಾದ್ ಪಡೆಯ ಸಾರಥ್ಯ ವಹಿಸಲಿದ್ದಾರೆ.

ವಿಲಿಯಮ್ಸನ್ ಆಡಿದ್ದು 4 ಪಂದ್ಯ ಮಾತ್ರ
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಒಟ್ಟಾರೆ 735 ರನ್‌ಗಳನ್ನು ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದ ಕಿವೀಸ್ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್, ಈ ಬಾರಿ ಆಡಿರುವುದು 4 ಪಂದ್ಯ ಮಾತ್ರ. ಅಲ್ಲದೆ ಗಳಿಸಿದ್ದು ಕೂಡ ಕೇವಲ 28 ರನ್‌ಗಳನ್ನು. ಭುಜದ ಗಾಯದ ಸಮಸ್ಯೆಯಿಂದ ಚೇತರಿಸಿರುವ ಕೇನ್ ತಮ್ಮ ಎಂದಿನ ಲಯ ಕಂಡುಕೊಂಡಿಲ್ಲ.

28ರ ಬಳಿಕ ಬೈರ್‌ಸ್ಟೋವ್ ಅಲಭ್ಯ
ಮುಂಬರುವ ಏಕದಿನ ಕ್ರಿಕೆಟ್ ವಿಶ್ವಕಪ್ ಸಲುವಾಗಿ ಪೂರ್ವಾಭಾವಿ ಸಿದ್ಧತೆಗೆ ಇಂಗ್ಲೆಂಡ್ ತಂಡ ಐರ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗಳನ್ನಾಡಲಿದ್ದು, ಐಪಿಎಲ್‌ನಲ್ಲಿ ವಿವಿಧ ಫ್ರಾಂಚೈಸಿ ತಂಡಗಳಲ್ಲಿ ಆಡುತ್ತಿರುವ ಇಂಗ್ಲೆಂಡ್ ಆಟಗಾರರು ಏಪ್ರಿಲ್ 28ರಂದು ತಾಯ್ನಾಡಿಗೆ ಹಿಂದಿರುಗಲಿದ್ದಾರೆ. ಬೈರ್‌ಸ್ಟೋವ್ ಮಂಗಳವಾರ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಇಂಗ್ಲೆಂಡ್‌ಗೆ ಹಿಂದಿರುಗಲಿದ್ದಾರೆ. ಇಂಗ್ಲೆಂಡ್ ತಂಡ ಐರ್ಲೆಂಡ್ ಎದುರು ಏಕೈಕ ಟಿ20 ಮತ್ತು ಪಾಕಿಸ್ತಾನ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ ಮತ್ತೊಂದು ಟಿ20 ಪಂದ್ಯವನ್ನಾಡಲಿದೆ.

ವಾರ್ನರ್ ಸೇವೆಯೂ ಇಲ್ಲ
ಪ್ರಸಕ್ತ ಐಪಿಎಲ್‌ನಲ್ಲಿ 9 ಪಂದ್ಯಗಳಿಂದ 517 ರನ್‌ಗಳನ್ನು ಚಚ್ಚಿ ಆರೆಂಜ್ ಕ್ಯಾಪ್ ಪಡೆದಿರುವ ಡೇವಿಡ್ ವಾರ್ನರ್, ಲೀಗ್‌ನ ಅಂತಿಮ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಆಸ್ಟ್ರೇಲಿಯಾ ತಂಡದ ವಿಶ್ವಕಪ್ ಪೂರ್ವ ಸಿದ್ಧತೆಯ ಶಿಬಿರದಲ್ಲಿ ಪಾಲ್ಗೊಳ್ಳಲು ತಾಯ್ನಾಡಿಗೆ ವಾರ್ನರ್ ಹಿಂದಿರುಗಲಿದ್ದಾರೆ. ಹೀಗಾಗಿ ಲೀಗ್ ಹಂತದ ಕೊನೆಯ ಪಂದ್ಯಗಳಲ್ಲಿ ಮತ್ತು ಸನ್‌ರೈಸರ್ಸ್ ನಾಕ್‌ಔಟ್ ಹಂತ ಪ್ರವೇಶಿಸಿದರೆ ವಾರ್ನರ್ ಸೇವೆ ಇಲ್ಲದೆ ಇಲ್ಲದೆ ಹೋರಾಡ ಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications