Dodda Ganesh: ಕೀನ್ಯಾ ತಂಡಕ್ಕೆ ಕೋಚ್ ಆದ ಹೆಮ್ಮೆಯ ಕನ್ನಡಿಗ
ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಕನ್ನಡಿಗ ದೊಡ್ಡ ಗಣೇಶ್ ಅವರ ಹೆಗಲಿಗೆ ಹೊಸ ಜವಾಬ್ದಾರಿ ಏರಿದೆ. ಇವರು ತಮ್ಮ ಕ್ರಿಕೆಟ್ ಅನುಭವವನ್ನು ಇನ್ನು ರಾಷ್ಟ್ರೀಯ ತಂಡಕ್ಕೆ ಧಾರೆ ಎರೆಯಬಹುದು. ಅಂದಹಾಗೆ ಇವರು ಕೋಚ್ ಆಗುತ್ತಿರುವುದು ಟೀಮ್ ಇಂಡಿಯಾಕ್ಕೆ ಅಲ್ಲ. ಹಾಗಿದ್ದರೆ ದೊಡ್ಡ ಗಣೇಶ್ ಯಾವ ತಂಡಕ್ಕೆ ಕೋಚ್ ಮಾಡುತ್ತರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾಗಿದ್ದ ಅನುಭವಿ ಆಟಗಾರ ದೊಡ್ಡ ಗಣೇಶ್ ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಪ್ರಕಟಿಸಿರುವ ಕ್ರಿಕೆಟ್ ಕೀನ್ಯಾ ಸಿಇಒ ರೊನಾಲ್ಡ್ ಬುಕುಸಿ, ಭಾರತದ ಈ ದಿಗ್ಗಜ ದೊಡ್ಡ ಗಣೇಶ್ ಆಟಗಾರನನ್ನು ತಂಡದ ಮುಖ್ಯ ಕೋಚ್ ಆಗಿ ನೇಮಿಸಿರುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ದೊಡ್ಡ ಗಣೇಶ್ ಅವರ ಮುಂದಾಳತ್ವದಲ್ಲಿ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸವಿದೆ ಎಂದಿದ್ದಾರೆ.

ಗಣೇಶ್ ಕೇವಲ 24ನೇ ವಯಸ್ಸಿನಲ್ಲಿ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದರು. ದೊಡ್ಡ ಗಣೇಶ್ ಅವರ ಉತ್ತಮ ವೇಗ, ಹೆಚ್ಚಿನ ಆರ್ಮ್ ಆಕ್ಷನ್ ಹಾಗೂ ಇವರ ಕ್ಲಾಸಿಕ್ ಔಟ್ ಸ್ವಿಂಗ್ ಬೌಲಿಂಗ್ ಎದುರಾಳಿ ತಂಡದ ಬ್ಯಾಟರ್‌ಗಳಿಗೆ ಕಾಟ ನೀಡಿದೆ.
ದೊಡ್ಡ ಗಣೇಶ್ ಸಾಧನೆ
ದೊಡ್ಡ ಗಣೇಶ್ ಭಾರತ ಪರ ಕೇವಲ 1 ಏಕದಿನ ಮತ್ತು 4 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರಿಂದ ಇವರನ್ನು ಕೈ ಬಿಡಲಾಯಿತು. ದೇಶೀಯ ಕ್ರಿಕೆಟ್ ನಲ್ಲಿ ಸ್ಟಾರ್ ವೇಗದ ಬೌಲರ್ ತಮ್ಮ ಛಾಪು ಮೂಡಿಸಿದ್ದಾರೆ. ದೊಡ್ಡ ಗಣೇಶ್ ಒಟ್ಟು 104 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 20 ಬಾರಿ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದಿದ್ದು, ಅವರು 6 ಬಾರಿ ಪಂದ್ಯವೊಂದರಲ್ಲಿ 10 ವಿಕೆಟ್ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications