ODI World Cup 2023: ಈ ರೀತಿಯಾದೆ ಭಾರತ ಏಕದಿನ ವಿಶ್ವಕಪ್ ಗೆಲ್ಲಲ್ಲ! ಅಚ್ಚರಿಯ ಹೇಳಿಕೆ ನೀಡಿದ ಕಪಿಲ್ ದೇವ್

2022ರಲ್ಲಿ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾದ ಟೀಂ ಇಂಡಿಯಾ 2023ರಲ್ಲಿ ಪ್ರತಿಷ್ಠಿತ ಏಕದಿನ ವಿಶ್ವಕಪ್ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಬಿಸಿಸಿಐ ಈಗಾಗಲೇ ಏಕದಿನ ವಿಶ್ವಕಪ್‌ಗಾಗಿ 20 ಸದಸ್ಯರ ಹೆಸರನ್ನು ಅಂತಿಮಗೊಳಿಸಿದ್ದು, ಅವರು ನಿಯಮಿತವಾಗಿ ಪಂದ್ಯಗಳನ್ನು ಆಡಲಿದ್ದಾರೆ.
1983 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್, 2023ರಲ್ಲಿ ಭಾರತ ವಿಶ್ವಕಪ್ ಗೆಲ್ಲುವ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ. ದೊಡ್ಡ ಹೆಸರುಗಳನ್ನು ನೆಚ್ಚಿಕೊಂಡರೆ ಭಾರತ ಈ ಬಾರಿ ಕಪ್ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತ ತಂಡದ ಪ್ರಮುಖ ಬ್ಯಾಟರ್ ಗಳಾಗಿದ್ದಾರೆ. ಪ್ರಮುಖ ಆಟಗಾರರು ಇದ್ದ ಹೊರತಾಗಿಯೂ ಭಾರತ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಫೈನಲ್ ತಲುಪುವಲ್ಲಿ ವಿಫಲವಾಯಿತು. ಇದೇ ವಿಚಾರದ ಬಗ್ಗೆ ಕಪಿಲ್ ದೇವ್ ಮಾತನಾಡಿದ್ದಾರೆ.
ಕೇವಲ 2-3 ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ ನಾವು ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ. ಯಾವಾಗಲೂ ಕೆಲವು ಆಟಗಾರರ ಮೇಲಷ್ಟೆ ಅವಲಂಬಿತಾವದರೆ ತಂಡ ದೊಡ್ಡ ವೇದಿಕೆಗಳಲ್ಲಿ ಚಾಂಪಿಯನ್ ಆಗಲಾರದು ಎಂದು ಕಪಿಲ್ ದೇವ್ ಹೇಳಿದರು.

ಇಬ್ಬರ ಮೇಲೆ ತಂಡ ಅವಲಂಬನೆಯಾಗಬಾರದು
ಎಬಿಪಿ ನ್ಯೂಸ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, 2023ರ ಏಕದಿನ ವಿಶ್ವಕಪ್ ಗೆಲ್ಲಲು ಭಾರತ ತಂಡವು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮೇಲೆ ಹೆಚ್ಚಾಗಿ ಅವಲಂಬಿಸಬಾರದು ಎಂದು ಸಲಹೆ ನೀಡಿದರು. ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡುವ 5-6 ಆಟಗಾರರು ತಂಡದಲ್ಲಿರಬೇಕು, ಇಂತಹ ಆಟಗಾರರನ್ನು ಸಿದ್ಧಪಡಿಸುವ ಕೆಲಸ ಮಾಡಬೇಕು ಎಂದು ಕಪಿಲ್ ದೇವ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಬ್ಬರೇ ಭಾರತಕ್ಕೆ ವಿಶ್ವಕಪ್ ತಂದುಕೊಡುತ್ತಾರೆ ಎಂದು ಭಾವಿಸಿದರೆ ಅದು ಎಂದಿಗೂ ಸಾಧ್ಯವಿಲ್ಲ, ತಂಡವಾಗಿ ಉತ್ತಮ ಪ್ರದರ್ಶನ ನೀಡಬೇಕು ಎಂದು ಕಪಿಲ್ ದೇವ್ ಹೇಳಿದರು. ನಮ್ಮ ತಂಡದಲ್ಲಿ ವಿಶ್ವಕಪ್ ಗೆದ್ದುಕೊಡಬಲ್ಲ ಆಟಗಾರರಿದ್ದಾರೆ, ಅವರನ್ನು ನಂಬಬೇಕು ಎಂದು ಅವರು ಹೇಳಿದರು.
IND vs SL: ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಈ ದಾಖಲೆಗಳ ಮೇಲೆ ಕಣ್ಣಿಟ್ಟ ಯುಜ್ವೇಂದ್ರ ಚಹಾಲ್!

ಕಠಿಣ ನಿರ್ಧಾರ ಅತ್ಯಗತ್ಯ
ಭಾರತ ತಂಡ 2023ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವ ಯೋಜನೆ ಹೊಂದಿದ್ದರೆ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೋಚ್, ಆಯ್ಕೆದಾರರು ಮತ್ತು ತಂಡದ ಮ್ಯಾನೇಜ್‌ಮೆಂಟ್ ತಂಡದ ಬಗ್ಗೆ ಯೋಚಿಸಿ ಕಠಿಣ ನಿರ್ಧಾರ ತೆಗೆದುಕೊಂಡರೆ ಸುಧಾರಣೆ ಸಾಧ್ಯ ಎಂದು ಕಪಿಲ್ ದೇವ್ ಹೇಳಿದರು.
ಕೆಲವು ಆಟಗಾರರ ವೈಯಕ್ತಿಕ ಹಿತಾಸಕ್ತಿಗಾಗಿ, ದೊಡ್ಡ ಹೆಸರುಗಳಿಗಾಗಿ ನೀವು ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿದರೆ ಗೆಲ್ಲಲು ಹೇಗೆ ಸಾಧ್ಯ ಎಂದು ಕಪಿಲ್ ದೇವ್ ಪ್ರಶ್ನೆ ಮಾಡಿದ್ದಾರೆ.

ಯುವ ಆಟಗಾರರು ಮುಂದೆ ಬರಬೇಕು
ತಂಡದ ಆಧಾರ ಸ್ತಂಭ ಎಂದು ಯಾವಾಗಲೂ ಒಂದಿಬ್ಬರು ಆಟಗಾರರು ಇರುತ್ತಾರೆ. ಅವರ ಸುತ್ತ ಇಡೀ ತಂಡ ಆಡಬೇಕಾಗುತ್ತದೆ. ಆದರೆ, ಈ ಕ್ರಮವನ್ನು ಮುರಿಯಬೇಕು. ಪಂದ್ಯವನ್ನು ಗೆಲ್ಲಿಸಿಕೊಡುವ 5-6 ಆಟಗಾರರನ್ನು ಸಿದ್ಧಪಡಿಸಬೇಕು. ಸದ್ಯ ಟೀಂ ಇಂಡಿಯಾ ರೋಹಿತ್, ವಿರಾಟ್ ಮೇಲೆ ಹೆಚ್ಚಾಗಿ ಅವಲಂಬಿಸಿದೆ. ಯುವ ಆಟಗಾರರು ಮುಂದೆ ಬರಬೇಕು, ಇದು ನಮ್ಮ ಸಮಯ ನಾವು ಜವಾಬ್ದಾರಿ ವಹಿಸಿಕೊಳ್ಳುತ್ತೇವೆ ಎಂದು ಹೇಳಬೇಕು ಎಂದು ಕಪಿಲ್ ದೇವ್ ಹೇಳಿದ್ದಾರೆ.
ಬಿಸಿಸಿಐ ಈಗಾಗಲೇ ಟಿ20 ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಟಿ20 ತಂಡದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಕ್ರಿಕೆಟಿಗರಿಗೆ ಅವಕಾಶ ನೀಡುತ್ತಿದೆ. ಏಕದಿನ ಕ್ರಿಕೆಟ್‌ನಲ್ಲಿ ಇನ್ನೂ ಹಿರಿಯ ಆಟಗಾರರು ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications