Champions Trophy: ಪಾಕಿಸ್ತಾನ ಆಡ್ತಿದ್ರೂ ತವರಿನಲ್ಲಿ ನೋಡೋರಿಲ್ಲ!
ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ನ್ಯೂಜಿಲೆಂಡ್ ಸಂಘಟಿತ ಆಟಕ್ಕೆ ಪಾಕಿಸ್ತಾನ ತವರಿನಲ್ಲಿ ಸೋಲು ಕಂಡಿತು. ಇದಕ್ಕೂ ಮುನ್ನ ಪಂದ್ಯ ಆರಂಭವಾದ ತಕ್ಷಣ, ಪಾಕಿಸ್ತಾನವನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಅಪಹಾಸ್ಯ ಮಾಡಿದರು. ಕರಾಚಿಯ ಸ್ಟೇಡಿಯಂನಲ್ಲಿ ತವರಿನ ತಂಡ ಪಾಕಿಸ್ತಾನವನ್ನು ಬೆಂಬಲಿಸಲು ನಿರೀಕ್ಷೆಗೆ ತಕ್ಕಂತೆ ಅಭಿಮಾನಿಗಳು ಬಂದಿರಲಿಲ್ಲ. ಕರಾಚಿಯ ಕ್ರೀಡಾಂಗಣದಲ್ಲಿ ಕೆಲವೇ ಜನರು ಬಂದಿದ್ದು, ಪಾಕಿಸ್ತಾನ ತಂಡಕ್ಕೆ ತವರಿನಲ್ಲಿ ಬೆಂಬಲ ಸಿಗಲಿಲ್ಲವೇ? ಎಂದು ನೆಟ್ಟಿಗರು ಅಪಹಾಸ್ಯ ಮಾಡಿದರು.
ಕರಾಚಿ ಸ್ಟೇಡಿಯಂನ ಕೆಲವು ಸ್ಟ್ಯಾಂಡ್‌ಗಳು ಸಂಪೂರ್ಣವಾಗಿ ಖಾಲಿಯಾಗಿದ್ದವು. 1996ರ ನಂತರ ಪಾಕಿಸ್ತಾನ ಮೊದಲ ಬಾರಿಗೆ ಐಸಿಸಿ ಟೂರ್ನಿಯನ್ನು ಆಯೋಜಿಸುತ್ತಿದೆ. ಹೀಗಾಗಿ ಸ್ಟೇಡಿಯಂಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬರಲಿದ್ದಾರೆ ಎಂಬ ಬಗ್ಗೆ ಹಲವು ವರದಿಗಳು ಹೇಳಿದ್ದವು. ಆದರೆ ಇಲ್ಲಿ ದೃಶ್ಯವೇ ಬೇರೆಯಾಗಿದೆ. ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕೆಲ್ ವಾನ್ ಕೂಡ ಖಾಲಿ ಸ್ಟೇಡಿಯಂ ನೋಡಿ ಪಾಕಿಸ್ತಾನವನ್ನು ಗೇಲಿ ಮಾಡಿದರು.

ಎಂಟು ವರ್ಷಗಳ ನಂತರ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತೆ ಆರಂಭವಾಗಿದೆ. ಇಷ್ಟೇ ಅಲ್ಲ, ಈ ಮೆಗಾ ಟೂರ್ನಿ ಪಾಕಿಸ್ತಾನಕ್ಕೂ ವಿಶೇಷವಾಗಿದೆ. ಏಕೆಂದರೆ 1996 ರ ನಂತರ ಮೊದಲ ಬಾರಿಗೆ ಐಸಿಸಿ ಟೂರ್ನಿಯನ್ನು ಆಯೋಜಿಸುತ್ತಿದೆ. ಆದರೆ, ಕರಾಚಿಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಉದ್ಘಾಟನಾ ಪಂದ್ಯವನ್ನು ನೋಡಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ. ಹೀಗಾಗಿ ಪಾಕಿಸ್ತಾನ ಉದ್ಘಾಟನಾ ಪಂದ್ಯದಲ್ಲಿಯೇ ಅಪಹಾಸ್ಯಕ್ಕೊಳಗಾಗಿದೆ. ಈ ರೀತಿ ಒಂದು ಐಸಿಸಿ ಟೂರ್ನಿ ನಡೆಯುತ್ತಿದೆ ಎಂದು ಪಾಕಿಸ್ತಾನದಲ್ಲಿ ಯಾರಿಗೂ ಹೇಳಿಲ್ವಾ? ಎಂಬ ಮತ್ತೊಂದು ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಿಗೆ ಎದುರಾಗಿದೆ.
ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನವನ್ನು ಗೇಲಿ ಮಾಡಿದ್ದಾರೆ. 'ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡುವುದನ್ನು ನೋಡುವುದು ತುಂಬಾ ಸಂತೋಷ ಆಗಿದೆ. 1996 ರ ನಂತರದ ಮೊದಲ ಪ್ರಮುಖ ಟೂರ್ನಿ ಇದು. ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿದೆ ಎಂದು ಸ್ಥಳೀಯರಿಗೆ ಹೇಳಲು ಅವರು ಮರೆತಿದ್ದಾರೆಯೇ? ಜನಸಂದಣಿ ಎಲ್ಲಿದೆ? ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications