Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಾಡಿದ ಕರ್ಮ ತಿರುಗೇಟು, ಕೊಹ್ಲಿಗೆ ಆದ ಗತಿಯೇ, ಗಂಗೂಲಿಗೂ ಆಯ್ತಾ? ನೆಟ್ಟಿಗರ ಟೀಕೆ

ganguly

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) ಮಾಜಿ ನಾಯಕ ಸೌರವ್ ಗಂಗೂಲಿ ಯುಗ ಅಂತ್ಯಗೊಂಡಿದೆ. ಇನ್ನೊಂದು ಅವಧಿಗೆ ಮಂಡಳಿಯ ಅಧ್ಯಕ್ಷರಾಗಿ ಗಂಗೂಲಿ ಮುಂದುವರಿಯಲು ಮಂಡಳಿ ಒಪ್ಪಲಿಲ್ಲ. ಐಪಿಎಲ್ ಚೇರ್ಮನ್ ಹುದ್ದೆ ವಹಿಸಿಕೊಳ್ಳುವ ಬಗ್ಗೆ ನಯವಾಗಿಯೇ ದಾದಾ ತಿರಸ್ಕರಿಸಿದ್ದಾರೆ.

ದಾದಾ ಬಿಸಿಸಿಐ ಅಧ್ಯಕ್ಷರ ಹುದ್ದೆ ಬಿಟ್ಟ ನಂತರ ಐಪಿಎಲ್ ಅಧ್ಯಕ್ಷರಂತಹ ಸಣ್ಣ ಹುದ್ದೆಗಳನ್ನು ವಹಿಸಿಕೊಳ್ಳುವುದು ಅವರಿಗೆ ಸೂಕ್ತವಲ್ಲ ಎಂದು ತೀರ್ಮಾನಿಸಿದ್ದಾರೆ. ಹೀಗಾಗಿಯೇ ಅವರು ಯಾವುದೇ ಹುದ್ದೆಗೆ ನಾಮಪತ್ರ ಸಲ್ಲಿಸಿಲ್ಲ. ಇದೇ ತಿಂಗಳ 18ರಂದು ಬಿಸಿಸಿಐ ಚುನಾವಣೆ ನಡೆಯಲಿದೆ. ಎಲ್ಲಾ ಹುದ್ದೆಗಳಿಗೂ ಅವಿರೋಧ ಆಯ್ಕೆ ನಡೆಯಲಿದೆ. ಯಾವುದೇ ಹುದ್ದೆಗೆ ಸ್ಪರ್ಧಿಸದೆ ಈಗಾಗಲೇ ನಾಮಪತ್ರ ಸಲ್ಲಿಕೆಯಿಂದ ದೂರ ಉಳಿದಿದ್ದಾರೆ.

1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ರೆ, ರಾಜೀವ್ ಶುಕ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಬಿನ್ನಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

ಒಂದೆಡೆ ದಾದಾ ಬಿಸಿಸಿಐ ರಾಜಕೀಯಕ್ಕೆ ಶರಣಾಗಿದ್ದಾರೆ ಎಂಬ ಪ್ರಚಾರ ನಡೆಯುತ್ತಿದ್ದರೆ, ಇನ್ನೊಂದೆಡೆ ವಿರಾಟ್ ಕೊಹ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಕರ್ಮದ ಫಲವನ್ನು ಅನುಭವಿಸಲೇಬೇಕು ಎಂದು ಕೊಹ್ಲಿ ಅಭಿಮಾನಿಗಳು ವ್ಯಂಗ್ಯ ಮಾಡಿ ಮೀಮ್ಸ್ ಮಾಡಿದ್ದಾರೆ.

ಕಳೆದ ವರ್ಷ ಟಿ 20 ವಿಶ್ವಕಪ್‌ಗೆ ಮುನ್ನ, ಕೊಹ್ಲಿ ಅವರು ಟಿ20 ಸ್ವರೂಪದ ನಾಯಕತ್ವದಿಂದ ಕೆಳಗಿಳಿದರು ಮತ್ತು ಇತರ ಸ್ವರೂಪಗಳಲ್ಲಿ ನಾಯಕರಾಗಿ ಮುಂದುವರಿಯುತ್ತೇನೆ ಎಂದು ಹೇಳಿಕೊಂಡರು. ಆದ್ರೆ ಬಿಸಿಸಿಐ ಒತ್ತಾಯಪೂರ್ವಕವಾಗಿ ಕೊಹ್ಲಿಯನ್ನು ಏಕದಿನ ಫಾರ್ಮೆಟ್ ನಾಯಕತ್ವದಿಂದ ಕೆಳಗಿಳಿಸಿತು. ಇದ್ರಿಂದಾಗಿ ಸೌರವ್ ಗಂಗೂಲಿ ವಿರುದ್ಧ ಕೊಹ್ಲಿ ಫ್ಯಾನ್ಸ್ ಸಿಟ್ಟಾದರು. ಇದಾಗಿ ಕೆಲವೇ ವಾರಗಳಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದಲೂ ಹೊರಬಂದರು.

ಇದಕ್ಕೂ ಮುನ್ನ ಟಿ20 ನಾಯಕತ್ವದ ಸ್ಥಾನದಿಂದ ಕೊಹ್ಲಿ ಕೆಳಗಿಳಿದಿರುವುದಾಗಿ ಗಂಗೂಲಿ ಹೇಳಿಕೆ ನೀಡಿದ್ದು, ಭಾರತಕ್ಕೆ ನಾಯಕತ್ವ ಒಡೆದು ಹಾಕಿಲ್ಲ ಎಂದು ಹೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಮಾಧ್ಯಮಗೋಷ್ಠಿಯಲ್ಲಿ ಗಂಗೂಲಿ ಮಾಡಿದ ಕಾಮೆಂಟ್‌ಗಳ ಕುರಿತು ಕೊಹ್ಲಿ ನೀಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿತ್ತು.

''ಬಿಸಿಸಿಐನಿಂದ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಅದು ನನ್ನ ಸ್ವಂತ ನಿರ್ಧಾರ'' ಎಂದು ಕೊಹ್ಲಿ ದಾದಾ ಅವರ ಕಾಮೆಂಟ್‌ಗಳಿಗೆ ಕೌಂಟರ್‌ ನೀಡಿದರು. ಇದು ಸಂಭವಿಸುವ ಕೆಲವು ದಿನಗಳ ಮೊದಲು, ಬಿಸಿಸಿಐ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಿತು ಮತ್ತು ಅವರನ್ನು ಕೇವಲ ಟೆಸ್ಟ್‌ಗೆ ಸೀಮಿತಗೊಳಿಸಿತ್ತು.

Story first published: Thursday, October 13, 2022, 0:16 [IST]
Other articles published on Oct 13, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+