ಭಾರತ 'ಎ' ತಂಡಕ್ಕೆ ಕರ್ನಾಟಕದ ಸಮರ್ಥ್ ಆಯ್ಕೆ
ಬೆಂಗಳೂರು, ಜುಲೈ 11 : ಕರ್ನಾಟಕದ ಆರಂಭಿಕ ಆಟಗಾರ ರವಿಕುಮಾರ್ ಸಮರ್ಥ್ ಅವರನ್ನು ಭಾರತ 'ಎ' ತಂಡಕ್ಕೆ ಆಯ್ಕೆ ಮಾಡಲಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ 'ಎ' ತಂಡವನ್ನು ಸಮರ್ಥ್ ಸೇರಿಕೊಳ್ಳಲಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಎ ತಂಡ ಪ್ರಕಟ, ಮನೀಶ್, ಕರುಣ್ ಕ್ಯಾಪ್ಟನ್ಸ್
ತಮಿಳುನಾಡಿನ ಆಟಗಾರ ಅಭಿನವ್ ಮುಕುಂದ್ ಅವರ ಬದಲಿಗೆ ಅರ್ ಸಮರ್ಥ್ ಅವರನ್ನು ಆಯ್ಕೆ ಮಾಡಲಾಗಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ ಸ್ಥಾನ ಮುಕುಂದ್ ಸ್ಥಾನಪಡೆದಿದ್ದಾರೆ.

ಕರ್ನಾಟಕದ ಕರುಣ್ ನಾಯರ್ ಅವರ ನಾಯಕತ್ವ ಭಾರತ 'ಎ' ತಂಡವು ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ 'ಎ' ವಿರುದ್ಧ ನಾಲ್ಕು ದಿನಗಳ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
2013ರಿಂದ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಆಡಿರುವ ಅನುಭವ ಹೊಂದಿರುವ 24 ವರ್ಷದ ಸಮರ್ಥ್ ಅವರು 2016-17ನೇ ಸಾಲಿನ ರಣಜಿಯಲ್ಲಿ ಕರ್ನಾಟಕದ ಪರ ಹೆಚ್ಚು ರನ್(702ರನ್) ಗಳಿಸಿದ ಆಟಗಾರ ಎನಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ
29 ಪಂದ್ಯಗಳಿಂದ 42.30 ರನ್ ಸರಾಸರಿಯಂತೆ 2073ರನ್ ಕಲೆ ಹಾಕಿದ್ದಾರೆ. 5 ಶತಕ ಹಾಗೂ 9 ಅರ್ಧಶತಕ ಬಾರಿಸಿದ್ದಾರೆ. 235ರನ್ ವೈಯಕ್ತಿಕ ಗರಿಷ್ಠ ಮೊತ್ತವನ್ನು ಜಾರ್ಖಂಡ್ ವಿರುದ್ಧ 2016ರ ರಣಜಿ ಋತುವಿನಲ್ಲಿ ದಾಖಲಿಸಿದ್ದಾರೆ.
'ತಂಡಗಳು ಪ್ರಕಟಣೆಯಾಗಿತ್ತು. ಹೀಗಾಗಿ ಈ ಬಗ್ಗೆ ನಿರೀಕ್ಷೆ ಇರಲಿಲ್ಲ. ಇದೊಂದು ಅದೃಷ್ಟ ಹಾಗೂ ಅಚ್ಚರಿಯ ಕರೆಯಾಗಿದೆ. ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳುತ್ತೇನೆ' ಎಂದು ಆರ್ ಸಮರ್ಥ್ ಹೇಳಿದ್ದಾರೆ. ಸಮರ್ಥ್ ಆಯ್ಕೆ ಬಗ್ಗೆ ಕರುಣ್ ನಾಯರ್ ಅವರು ಸಂತಸ ವ್ಯಕ್ತಪಡಿಸಿ, ಟ್ವೀಟ್ ಮಾಡಿ, ಸ್ವಾಗತಿಸಿದ್ದಾರೆ.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications