8ನೇ ಆವೃತ್ತಿಯ ಕೆಪಿಎಲ್‌ ಟಿ20 ಕದನ: ಜು.27ರಂದು ಆಟಗಾರರ ಹರಾಜು

Karnataka Premier League 2019: Player Auction

ಬೆಂಗಳೂರು, ಜುಲೈ 26: ಸ್ಟಾರ್ ಆಟಗಾರರಾದ ಕೆ. ಗೌತಮ್, ಮನೀಶ್ ಪಾಂಡೆ ಮತ್ತು ಕರುಣ್ ನಾಯರ್ ಹಾಗೂ ಯುವ ಆಟಗಾರ ಅಭಿಷೇಕ್ ರೆಡ್ಡಿ ಸೇರಿದಂತೆ ಕೆಲ ಪ್ರಮುಖ ಆಟಗಾರರು ಆ. 16ರಿಂದ ಸೆ.1ರವರೆಗೆ ನಡೆಯಲಿರುವ ಕೆಪಿಎಲ್ 8ನೇ ಆವೃತ್ತಿಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಅತ್ಯಧಿಕ ಬೆಲೆ ಪಡೆಯುವ ನಿರೀಕ್ಷೆ ಇದೆ.

ಆಗಸ್ಟ್‌ 16ರಿಂದ ಕರ್ನಾಟಕ ಪ್ರೀಮಿಯರ್‌ ಲೀಗ್‌, ಫೈನಲ್‌ ಎಲ್ಲಿ ಗೊತ್ತಾ?

ಕೆಎಸ್‌ಸಿಎ ಆವರಣದಲ್ಲಿ ಶುಕ್ರವಾರ ನಡೆದ ಕೆಪಿಎಲ್ ವೇಳಾಪಟ್ಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಎಸ್‌ಸಿಎ ಕಾರ್ಯದರ್ಶಿ ಸುಧಾಕರ್ ರಾವ್, "ಎಂದಿನಂತೆ ರಾಜ್ಯದ ಪ್ರತಿಭಾನ್ವಿತ ಆಟಗಾರರನ್ನು ಶೋಧಿಸುವ ಐಪಿಎಲ್ ಮಾದರಿಯ ಕೆಪಿಎಲ್ ಟೂರ್ನಿ ಆ.16ರಿಂದ ಸೆ.1ರವರೆಗೆ ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ನಡೆಯಲಿದೆ," ಎಂದರು.

ಕೆಎಸ್‌ಸಿಎ ಜಂಟಿ ಕಾರ್ಯದರ್ಶಿ ಸಂತೋಷ್ ಮೆನನ್, "ಹರಾಜು ಪ್ರಕ್ರಿಯೆಗೆ ಆಟಗಾರರನ್ನು 'ಎ' ಮತ್ತು 'ಬಿ' ಗುಂಪುಗಳಾಗಿ ವಿಂಗಡಿಸಲಾಗಿದ್ದು, 'ಎ' ಗುಂಪಿನಲ್ಲಿರುವ ಆಟಗಾರರಿಗೆ 50 ಸಾವಿರ ಹಾಗೂ 'ಬಿ' ಗುಂಪಿನ ಆಟಗಾರರಿಗೆ 10 ಸಾವಿರ ರೂ. ಮೂಲ ಬೆಲೆ ನಿಗದಿಪಡಿಸಲಾಗಿದೆ. 'ಎ' ಗುಂಪಿನಲ್ಲಿ 24 ಹಾಗೂ 'ಬಿ' ಗುಂಪಿನಲ್ಲಿ 200ಕ್ಕೂ ಹೆಚ್ಚು ಮಂದಿ ಹರಾಜಿಗೆ ಲಭ್ಯರಿದ್ದಾರೆ ಎಂದು ತಿಳಿಸಿದರು. ಫ್ರಾಂಚೈಸಿಗಳು ಈ ಬಾರಿ ಇಬ್ಬರು ಆಟಗಾರರನ್ನು ಮಾತ್ರ ರಿಟೇನ್(ಉಳಿಸಿಕೊಳ್ಳಲು) ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಉಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಬೇಕಿದೆ. ಪ್ರತಿ ಫ್ರಾಂಚೈಸಿ ಕನಿಷ್ಠ 15ರಿಂದ ಗರಿಷ್ಠ 18 ಆಟಗಾರರನ್ನು ಹೊಂದಲು ಅವಕಾಶ ನೀಡಲಾಗಿದ್ದು, ಒಬ್ಬ ಆಟಗಾರನನ್ನು ಉಳಿಸಿಕೊಳ್ಳಲು ಮಾತ್ರ ಆರ್‌ಟಿಎಂ (ರೈಟ್‌ ಟು ಮ್ಯಾಚ್‌) ಬಳಸಬಹುದಾಗಿದೆ," ಎಂದು ವಿವರಿಸಿದರು.

ಕೊಹ್ಲಿ-ಶಾಸ್ತ್ರಿ ಜೋಡಿ ಬೇರ್ಪಟ್ಟರೆ ಟೀಮ್‌ ಇಂಡಿಯಾಗೆ ಅಪಾಯವಂತೆ!

ಜೊತೆಗೆ ಫೈನಲ್ ಪಂದ್ಯಕ್ಕೆ ಯಾವುದೇ ಮೀಸಲು ದಿನ ನಿಗದಿಪಡಿಸಿಲ್ಲ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ತಂಡಗಳನ್ನು ಜಂಟಿ ವಿಜೇತರಾಗಿ ಘೋಷಿಸಲಾಗುತ್ತದೆ ಎಂದರು.

ಸೆಮಿಫೈನಲ್ಸ್‌ ಬದಲಿಗೆ ಪ್ಲೇ ಆಫ್ಸ್‌ ಪರಿಚಯ

ಸೆಮಿಫೈನಲ್ಸ್‌ ಬದಲಿಗೆ ಪ್ಲೇ ಆಫ್ಸ್‌ ಪರಿಚಯ

ಈ ಬಾರಿಯೂ ಪ್ರಶಸ್ತಿ ಮೊತ್ತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸೆ.1ರಂದು ಮೈಸೂರಿನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಚಾಂಪಿಯನ್ ತಂಡ 10 ಲಕ್ಷ ರೂ. ಗಳಿಸಿದರೆ, ರನ್ನರ್‌ಅಪ್ ತಂಡ 5 ಲಕ್ಷ ರೂ. ಪಡೆಯಲಿದೆ. ಈ ಬಾರಿ ಎಲಿಮಿನೇಟರ್ ಕ್ವಾಲಿೈಯರ್ ಪಂದ್ಯವನ್ನು ಹೊಸದಾಗಿ ಪರಿಚಯಿಸಲಾಗಿದ್ದು, ಐಪಿಎಲ್ ರೋಚಕತೆಯನ್ನು ಕೆಪಿಎಲ್‌ಗೂ ಕಲ್ಪಿಸಲಾಗಿದೆ. ನಟಿ ರಾಗಿಣಿ ದ್ವಿವೇದಿ ಟೂರ್ನಿಯ ರಾಯಭಾರಿಯಾಗಿ ಮುಂದುವರಿದಿದ್ದಾರೆ. ಕೆಪಿಎಲ್ ವೇಳಾಪಟ್ಟಿ ಅನಾವರಣಗೊಳಿಸಿ ಮಾತನಾಡಿದ ಭಾರತ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರವಾದ್, "ರಾಜ್ಯದ ಪ್ರತಿಭಾನ್ವಿತ ಆಟಗಾರರನ್ನು ಗುರುತಿಸಲು ಕೆಪಿಎಲ್ ಉತ್ತಮ ವೇದಿಕೆಯಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಿಂದ ಹೆಚ್ಚಿನ ಆಟಗಾರರು ಐಪಿಎಲ್‌ನಲ್ಲಿ ಆಡುತ್ತಿರುವುದೇ ಇದಕ್ಕೆ ಸಾಕ್ಷಿ," ಎಂದರು. ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಯಲಿದ್ದುಘಿ, ಮೊದಲ ಪಂದ್ಯ ಮಧ್ಯಾಹ್ನ 3ಕ್ಕೆ ಆರಂಭವಾದರೆ 2ನೇ ಪಂದ್ಯ ಸಂಜೆ 7ಕ್ಕೆ ಆರಂಭವಾಗಲಿದೆ. ಸ್ಟಾರ್‌ಸ್ಪೋರ್ಟ್ಸ್ ಹಾಗೂ ಸುವರ್ಣ ಕನ್ನಡದಲ್ಲಿ ನೇರ ಪ್ರಸಾರ ಇರಲಿದೆ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದರು.

 'ಎ' ಗುಂಪಿನ ಆಟಗಾರರು

'ಎ' ಗುಂಪಿನ ಆಟಗಾರರು

ಹರಾಜಿಗೆ ಲಭ್ಯವಿರುವ 'ಎ' ಗುಂಪಿನ ಆಟಗಾರರು (ಅಭಿಮನ್ಯು ಮಿಥುನ್, ಅಭಿಷೇಕ್ ರೆಡ್ಡಿಘಿ, ಆದಿತ್ಯ ಸೋಮಣ್ಣ, ಅಮಿತ್ ವರ್ಮ, ಅನಿರುದ್ಧ ಜೋಶಿ, ದಿಕ್ಷಾಂಶು ನೇಗಿ, ಗೌತಮ್ ಕೆ, ಕರುಣ್ ನಾಯರ್, ಮನೀಶ್ ಪಾಂಡೆ, ಮೊಹಮ್ಮದ್ ತಾಹ, ಎಂ.ಜಿ. ನವೀನ್, ಪವನ್ ದೇಶಪಾಂಡೆ, ಟಿ.ಪ್ರದೀಪ್, ಪ್ರಸಿದ್ಧ್ ಕೃಷ್ಣಘಿ, ಪ್ರತೀಕ್ ಜೈನ್, ರಾಬಿನ್ ಉತ್ತಪ್ಪ, ರೋಹನ್ ಕದಮ್, ರೋನಿತ್ ಮೋರೆ, ಆರ್.ಸಮರ್ಥ್, ಬಿ.ಆರ್.ಶರತ್, ಶಿಶಿರ್ ಭವಾನೆ, ಶ್ರೇಯಸ್ ಗೋಪಾಲ್, ಕೆ.ವಿ.ಸಿದ್ಧಾರ್ಥ್, ಸ್ಟ್ಯಾಲಿನ್ ಹೂವರ್).

 ಪಂದ್ಯಗಳ ವಿವರ

ಪಂದ್ಯಗಳ ವಿವರ

#09

ಉದ್ಘಾಟನಾ ಪಂದ್ಯ ಸೇರಿದಂತೆ ಆ.16ರಿಂದ 20ರವರೆಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಒಟ್ಟು ಪಂದ್ಯಗಳು

#07

ಆ.22ರಿಂದ 25ರವರೆಗೆ 2ನೇ ಚರಣ ಹುಬ್ಬಳ್ಳಿಯಲ್ಲಿ ನಡೆಯಲಿರುವ ಒಟ್ಟು ಪಂದ್ಯಗಳು

#09

ಫೈನಲ್ ಪಂದ್ಯ ಸೇರಿದಂತೆ ಆ.27ರಿಂದ ಸೆ.1ರವರೆಗೆ 3ನೇ ಚರಣ ಮೈಸೂರಿನಲ್ಲಿ ನಡೆಯಲಿರುವ ಒಟ್ಟು ಪಂದ್ಯಗಳು

2019ರ ಆವೃತ್ತಿಗೆ ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರು

2019ರ ಆವೃತ್ತಿಗೆ ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರು

ಬಿಜಾಪುರ ಬುಲ್ಸ್ (ಭರತ್ ಚಿಪ್ಲಿ, ಕಾರಿಯಪ್ಪ ಕೆ.ಸಿ)

ಮೈಸೂರು ವಾರಿಯರ್ಸ್ (ಜೆ.ಸುಜಿತ್, ವೈಶಾಖ್ ವಿ)

ಬಳ್ಳಾರಿ ಟಸ್ಕರ್ಸ್ (ಸಿ.ಎಂ.ಗೌತಮ್, ದೇವದತ್ ಪಡಿಕ್ಕಲ್)

ಬೆಳಗಾವಿ ಪ್ಯಾಂಥರ್ಸ್ (ಶುಭಾಂಗ್ ಹೆಗಡೆ, ಅವಿನಾಶ್ ಡಿ)

ಬೆಂಗಳೂರು ಬ್ಲಾಸ್ಟರ್ಸ್ (ಕೌಶಿಕ್ ವಿ, ಮನೋಜ್ ಭಾಂಡಗೆ)

ಶಿವಮೊಗ್ಗ ಲಯನ್ಸ್ (ನಿಹಾಲ್ ಉಲ್ಲಾಳ್, ಪೃಥ್ವಿರಾಜ್ ಶೇಖಾವತ್) ಹುಬ್ಬಳ್ಳಿ ಟೈಗರ್ಸ್ (ವಿನಯ್ ಕುಮಾರ್, ಪ್ರವೀಣ್ ದುಬೆ).

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, July 26, 2019, 22:51 [IST]
Other articles published on Jul 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more