Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ಯಾಪ್ಶನ್ ಕೊಡಿ ಅಂದಿದ್ದೆ ತಡ, ಕರ್ನಾಟಕ ರಣಜಿ ಚಿತ್ರಕ್ಕೆ ಬಂತು ತರ್ಲೆ ರಿಪ್ಲೆಗಳು!

Karnataka Ranji twitter asked fans to give a caption for a photo

ಬೆಂಗಳೂರು: ನಮ್ಮಲ್ಲಿ ತರ್ಲೆ, ತಮಾಷೆ ಮಾಡೋರ ಸಂಖ್ಯೆಯೇನೂ ಕಮ್ಮಿಯಿಲ್ಲ ಅನ್ನೋದಕ್ಕೆ ಆಗೀಗ ಉದಾಹರಣೆಗಳನ್ನು ನಾವು ನೋಡುತ್ತಿರುತ್ತೇವೆ. ಅದು ಎಂಥಾ ಗಂಭೀರ ವಿಚಾರವಾದರೂ ಅದನ್ನು ತಮಾಷೆಯಾಗಿ ತೇಲಿಸಿಬಿಡುವ ಅನೇಕ ಮಂದಿ ನಮ್ಮ-ನಿಮ್ಮ ನಡುವಿದ್ದಾರೆ. ಅದೂ ಟ್ರೋಲರ್‌ಗಳ ಹಾವಳಿ ಯಥೇಚ್ಛವಾಗಿರುವ ಈ ದಿನಗಳಲ್ಲಿ ಕಾಲೆಳೆಯುವವರ, ತಮಾಷೆ ಮಾಡುವವ ಬಗ್ಗೆ ಇನ್ನು ಕೇಳಬೇಕೆ? ಹಾಗಂತ ಎಲ್ಲೆ ಮೀರದ, ಯಾರನ್ನೂ ನೋಯಿಸದ ಟ್ರೋಲ್‌ಗಳನ್ನು ಇಷ್ಟಪಡುವವರ ಸಂಖ್ಯೆಯೂ ನಮ್ಮಲ್ಲಿ ದೊಡ್ಡದಿದೆ.

ಕರ್ನಾಟಕ ರಣಜಿ ತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಗುರುವಾರ (ಜೂನ್ 25) ಒಂದು ಫೋಟೋ ಶೇರ್ ಮಾಡಲಾಗಿತ್ತು. ಭಾರತದ ಕ್ರಿಕೆಟ್ ದಂತಕತೆಗಳಾದ ಸೌರವ್ ಗಂಗೂಲಿ, ಜಾವಗಲ್ ಶ್ರೀನಾಥ್ ಮತ್ತು ಸಚಿನ್ ತೆಂಡೂಲ್ಕರ್ ಆಟದ ವೇಳೆ ಏನೋ ಸಂಭಾಷಣೆ ನಡೆಸುತ್ತಿರುವ ಚಿತ್ರವದು.

ಭಾರತದ ದಿಗ್ಗಜರಿದ್ದ ಈ ಚಿತ್ರಕ್ಕೊಂದು ಕ್ಯಾಪ್ಶನ್ ನೀಡಿ ಅಂತ ರಣಜಿ ಕ್ರಿಕೆಟ್ ಟೀಮ್ ಅಭಿಮಾನಿಗಳಲ್ಲಿ ಕೇಳಿತ್ತು. ಹಾಗಂದಿದ್ದೇ ತಂಡ, ಎಂತೆಂಥಾ ತರ್ಲೆ, ತಮಾಷೆಯ ಪ್ರತಿಕ್ರಿಯೆಗಳು ಬಂದಿವೆ ನೋಡಿ..

ಬೋಂಡ ತಿನ್ನುವಂತೆ ಬಾ

ಬೋಂಡ ತಿನ್ನುವಂತೆ ಬಾ

ಗಂಗೂಲಿ: ಈ ಅಂಗಡಿಯಲ್ಲಿ ಗೋಬಿ ಸಕತ್ ಮಗ
ಶ್ರೀನಾಥ್: ನನಿಗೆ ದೋಸೆ ಬೇಕು
ಸಚಿನ್: ನಾನ್ ಹೇಳ್ತೀನಿ ಬೋಂಡ ತಿನ್ನುವಂತೆ ಬಾ ನನ್ ಜೊತೆ.

ಡೈರೆಕ್ಟ್ ಹೋದ್ರೆ ಔಟ್

ಡೈರೆಕ್ಟ್ ಹೋದ್ರೆ ಔಟ್

ಗಂಗೂಲಿ: ಆ ಕಲ್ಲು, ಅದೆ ಬೌಂಡರಿ. ಡೈರೆಕ್ಟ್ ಹೋದ್ರೆ ಔಟ್.
ತೆಂಡೂಲ್ಕರ್: ಬ್ಯಾಟ್ ನಂದು, ನಾನೇ ಫಸ್ಟ್ ಬ್ಯಾಟಿಂಗ್.
ಶ್ರೀನಾಥ್: ಬಾಲ್ ನಂದು, ನಾ ಮನೆಗ್ ಹೋಗ್ತೀನಿ ಬಿಡ್ರಪ್ಪಾ.

ಒರಿಜಿನಲ್‌ ವಿನಾಯಕ ಮೈಲಾರಿ

ಒರಿಜಿನಲ್‌ ವಿನಾಯಕ ಮೈಲಾರಿ

ಸೌರವ್: ಇದೇ.. ಸ್ಟಾರ್ಟಿಂಗ್ ನಲ್ಲಿರೋದೆ ಒರಿಜಿನಲ್‌ ವಿನಾಯಕ ಮೈಲಾರಿ
ಸಚಿನ್: ಅದಲ್ಲ.. ಮುಂದೆ ಹೋದರೆ ಸಿಗುತ್ತೆ..ಎರಡನೆದು...ಅದು‌..ಅದು.. ಒರಿಜಿನಲ್..
ಶ್ರೀನಾಥ್ ‌- ನನ್ಮಕ್ಳಾ.. ನೀವುಗಳು ಇಡೀ ಲೈಫ್ ನಲ್ಲಿ ತಿನ್ನದೇ ಇರೋಶ್ಟು ದೋಸೆ ನಾನು ಇಲ್ಲಿ‌ ತಿಂದಿದಿನಿ..ನನಗೆ ಹೇಳ್ತಿರಲ್ಲಾ..!!!!

ಬಿಟ್ಟು ಹೋಗಲ್ಲ ಅಂತಾನೆ

ಬಿಟ್ಟು ಹೋಗಲ್ಲ ಅಂತಾನೆ

ಗಂಗೂಲಿ: ನೋಡೋ, ಆ ಜಾಗ ಬಿಟ್ಟು ಹೋಗಲ್ಲ ಅಂತಾನೆ
ಸಚಿನ್: ಆ ಜಾಗ ನಂಗೆ ಬೇಕು, ಏನ್ ಮಾಡ್ತೀಯ ನೋಡು.

ಅವನಿಗೆ ಕರೋನಾ ಇದೆ

ಅವನಿಗೆ ಕರೋನಾ ಇದೆ

ದಾದಾ: ನೋಡು, ಅವನಿಗೆ ಕರೋನಾ ಇದೆ
ಸಚಿನ್: ಅವನಿಗಲ್ಲ ಇವನಿಗೆ ಇದೆ
ಶ್ರೀನಾಥ್: ಸುಮ್ಮನಿರಪ್ಪ, ಬೇಗ ಮ್ಯಾಚ್ ಮುಗಿಲಿ ಹೆದರಿಸಬೇಡಿ!

ಕ್ಯಾಪ್ ಎಲ್ಲಿ ಕಳ್ಕೊಂಡೆ?

ಕ್ಯಾಪ್ ಎಲ್ಲಿ ಕಳ್ಕೊಂಡೆ?

ಸಚಿನ್: ಶ್ರೀನಿ, ಕ್ಯಾಪ್ ಎಲ್ಲಿ ಕಳ್ಕೊಂಡೆ?
ಗಂಗೂಲಿ: ಶ್ರೀನಿ, ಅಲ್ನೋಡು ಅಲ್ಲಿ ಮೊಬೈಲ್ ಅಲ್ಲಿ ಮೈಲ್ಯಾಂಗ್ ಆಪ್ ಅಲ್ಲಿ ಕನ್ನಡ ಪುಸ್ತಕ ಓದ್ತಾ ಇದ್ದಾನಲ್ಲ, ಅವನ ಹತ್ರ ಇದೆ ನಿನ್ನ ಕ್ಯಾಪ್.. ಓವರ್ ಆದ ಮೇಲೆ ಹೋಗಿ ಇಸ್ಕೊ..

ಡವ್ ಮೇಲ್ ಕಣ್ ಹಾಕಿದ್ದ

ಡವ್ ಮೇಲ್ ಕಣ್ ಹಾಕಿದ್ದ

ಗಂಗೂಲಿ: ಅವನೇ ಮಾಮ್ಸ್, ನಮ್ ಏರಿಯಾ ಡವ್ ಮೇಲ್ ಕಣ್ ಹಾಕಿದ್ದ.
ಶ್ರೀನಾಥ್: ಲೋ ನನ್ ಮಕ್ಳಾ, ಅವ್ಳ ಅಣ್ಣಲಾ ಅವ್ನು. ತುಳ್ದಾಕ್ತಾನೆ!
ಸಚಿನ್: ನಿನ್ ಖದರ್ ತೋರ್ಸು ಮಗಾ.

ಕ್ಯಾಚ್ ಬಂದಾಗ ಬಿಡ್ಬೇಕ್ಕಲ್ಲ

ಕ್ಯಾಚ್ ಬಂದಾಗ ಬಿಡ್ಬೇಕ್ಕಲ್ಲ

ಆಯಿತ್ರೋ.. ಅದೇನ್ ಹೇಳ್ತೀರೋ ಹೇಳಿ, ಹೇಳೊಕ್ಕೇನು ಬೌಲಿಂಗ್ ಮಾಡೋದು ನಾನು. ಕ್ಯಾಚ್ ಬಂದಾಗ ಬಿಡ್ಬೇಕ್ಕಲ್ಲ ಆಗ ಇದೆ ಇಬ್ರಿಗೂ...

ಅಪ್ಪ ಕರಿತಿದಾರೆ ಆಟ ಸಾಕು

ಅಪ್ಪ ಕರಿತಿದಾರೆ ಆಟ ಸಾಕು

ಗಂಗೂಲಿ: ಅಪ್ಪ ಕರಿತಿದಾರೆ ಆಟ ಸಾಕು ಮೆನೆಗೆ ಹೋಗೋಣ.
ಶ್ರೀನಾಥ್: ನಂಗೂ ಸುಸ್ತು ಆಯಿತು ಬರ್ರಲೋ ಹೋಗೋಣ
ಸಚಿನ್: ಲೋ ನೀವ್ ಮಾತ್ರ ಬ್ಯಾಟಿಂಗ್ ಆಡಿ ಬೌಲಿಂಗ್ ಮಾಡದೆ‌ ಹೋಗತಿದ್ದೀರಾ. ಆಟ ಕೊಟ್ ಹೋಗಿ.

ಮಗಾ ಅಲ್ ಹಾಕೋ

ಮಗಾ ಅಲ್ ಹಾಕೋ

ಗಂಗೂಲಿ: ಮಗಾ ಅಲ್ ಹಾಕೋ.
ಸಚಿನ್: ಮಗಾ ಹಿಂಕ್ ಹಾಕೋ
ಶ್ರೀನಾಥ್: ಸ್ವಲ್ಪ ಅಮಿಕ್ಕೊಂಡು...

 ಗಂಗೂಲಿಗೆ ಚೌಚೌ ಬಾತ್

ಗಂಗೂಲಿಗೆ ಚೌಚೌ ಬಾತ್

ಸಚಿನ್: "ನೋಡು ಸೀನಿ..ನೀನು ಇಡ್ಲಿ ತಿನ್ನು..ಹಂಗೆ ಈ ಗಂಗೂಲಿಗೆ ಚೌಚೌ ಬಾತ್ ಕೊಡ್ಸು..ನಂಗ್ ಮಾತ್ರ ಮೈಸೂರು ಮಸಾಲಾ ದೋಸೆ ಬೇಕೇ ಬೇಕು"

ಈವ್ನ್ ಶರ್ಟ್ ಬಿಚ್ಚಿ ಕುಣಿಬೇಕು

ಈವ್ನ್ ಶರ್ಟ್ ಬಿಚ್ಚಿ ಕುಣಿಬೇಕು

ಎಸ್‌ಜಿ: ಅಣ್ಣಾ, ಅವನೇ ನನ್ ಆಡ್ಕೊಂಡಿದ್ದು
ಎಸ್‌ಟಿ: ನೀನ್ ಈಗ ಬಿಡೋ ಬಾಲ್ ಗೆ ಈವ್ನ್ ಶರ್ಟ್ ಬಿಚ್ಚಿ ಕುಣಿಬೇಕು
ಜಿಎಸ್: ನೀವಿಬ್ರೂ ಸೈಡ್ ಗೆ ಬನ್ನಿ... ಇದೆ ಅವ್ನಿಗೆ..

Story first published: Friday, June 26, 2020, 21:35 [IST]
Other articles published on Jun 26, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+