ರಣಜಿ 2018-19: ವಿದರ್ಭ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡ

ಬೆಂಗಳೂರು, ನವೆಂಬರ್ 06: 2018-19ನೇ ಸಾಲಿನ ರಣಜಿ ಟ್ರೋಫಿಯ ಪಂದ್ಯಾವಳಿಯ ಮೊದಲ ಪಂದ್ಯಕ್ಕೆ 15 ಸದಸ್ಯರುಳ್ಳ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಆರ್ ವಿನಯ್ ಕುಮಾರ್ ಅವರು ನಾಯಕರಾಗಿದ್ದಾರೆ.
ವಿದರ್ಭ ವಿರುದ್ಧ ನವೆಂಬರ್ 12 ರಿಂದ 15ರವರೆಗೆ ನಾಗ್ಪುರದಲ್ಲಿ ಮೊದಲ ಪಂದ್ಯವಾಡಲಿದೆ. ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಮನೀಶ್ ಪಾಂಡೆ, ಕೃಷ್ಣಪ್ಪ ಗೌತಮ್ ಅವರು ಭಾರತ ಎ ಹಾಗೂ ಭಾರತ ತಂಡದ ಪರ ಆಡುತ್ತಿರುವುದರಿಂದ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆ ಮಾಡುವಾಗ ಪರಿಗಣನೆ ಮಾಡಲಾಗಿಲ್ಲ
ವಿಜಯ್ ಹಜಾರೆ ಟ್ರೋಫಿಯಲ್ಲಿ ಗಮನಸೆಳೆದ ವಿಕೆಕ್ ಕೀಪರ್ ಬಿಆರ್ ಶರತ್ ಹಾಗೂ ಸಿದ್ಧಾರ್ಥ್ ಕೆವಿ, ಇದೇ ಮೊದಲ ಬಾರಿಗೆ ರಣಜಿ ತಂಡ ಸೇರಿದ್ದಾರೆ.
ಕರ್ನಾಟಕ ತಂಡ: ವಿನಯ್ ಕುಮಾರ್ (ನಾಯಕ), ಕರುಣ್ ನಾಯರ್(ಉಪ ನಾಯಕ), ರವಿಕುಮಾರ್ ಸಮರ್ಥ್,ಸಿದ್ಧಾರ್ಥ್ ಕೆವಿ, ಡಿ. ನಿಶ್ಚಲ್, ಶ್ರೇಯಸ್ ಗೋಪಾಲ್, ಪವನ್ ದೇಶಪಾಂಡೆ, ಸ್ಟುವರ್ಟ್ ಬಿನ್ನಿ, ಅಭಿಮನ್ಯು ಮಿಥುನ್, ಪ್ರಸಿದ್ಧ ಕೃಷ್ಣ, ಜೆ. ಸುಚಿತ್, ರೋನಿತ್ ಮೋರೆ, ಶಿಶಿರ್ ಭವಾನಿ, ಶರತ್ ಬಿಆರ್ (ವಿಕೆಟ್ ಕೀಪರ್), ಶರತ್ ಶ್ರೀನಿವಾಸ್(ವಿಕೆಟ್ ಕೀಪರ್).
ಮುಖ್ಯ ಕೋಚ್: ಯರೇಗೌಡ, ಬೌಲಿಂಗ್ ಕೋಚ್: ಎಸ್. ಅರವಿಂದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications